Log In
BREAKING NEWS >
ಮಾರ್ಚ್ 8ರ೦ದು ಮಹಾಶಿವರಾತ್ರೆ-ಎಲ್ಲಾ ಈಶ್ವರ ದೇವಸ್ಥಾನಗಳಲ್ಲಿ ಭಜನಾ ಸ೦ಕೀರ್ತನೆ ಜರಗಲಿದೆ.....

ಒಡಿಶಾದಲ್ಲಿ ಮತ್ತೊಬ್ಬ ರಷ್ಯನ್ ನಿಗೂಢ ಸಾವು, 15 ದಿನಗಳಲ್ಲಿ ಮೂರನೇ ಪ್ರಕರಣ

ಭುವನೇಶ್ವರ: ಒಡಿಶಾದಲ್ಲಿ ಮತ್ತೊಬ್ಬ ರಷ್ಯನ್ ಪ್ರಜೆಯ ಶವ ಪತ್ತೆಯಾಗಿದ್ದು, ಕಳೆದ ಹದಿನೈದು ದಿನಗಳಲ್ಲಿ ನಡೆದ ಮೂರನೇ ಘಟನೆ ಇದಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಜಗತ್‌ಸಿಂಗ್‌ಪುರ ಜಿಲ್ಲೆಯ ಪಾರಾದೀಪ್ ಬಂದರಿನಲ್ಲಿ ಲಂಗರು ಹಾಕಲಾಗಿದ್ದ ಹಡಗಿನಲ್ಲಿ ಮಿಲ್ಯಕೋವ್ ಸೆರ್ಗೆ ಎಂಬ ರಷ್ಯನ್ ಪ್ರಜೆಯ ಶವ ಪತ್ತೆಯಾಗಿದೆ. 51 ವರ್ಷದ ವ್ಯಕ್ತಿ MB Aldnah ನೌಕೆಯ ಮುಖ್ಯ ಇಂಜಿನಿಯರ್ ಆಗಿದ್ದು, ನೌಕೆ ಬಾಂಗ್ಲಾದೇಶದ ಚಿತ್ತಗಾಂಗ್ ಬಂದರಿನಿಂದ ಪರದೀಪ್ ಮೂಲಕ ಮುಂಬೈಗೆ ತೆರಳುತ್ತಿತ್ತು. ಮುಂಜಾನೆ 4.30ರ ಸುಮಾರಿಗೆ ಹಡಗಿನ ಕೊಠಡಿಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಸಾವಿಗೆ ಕಾರಣವನ್ನು ತಕ್ಷಣವೇ ಕಂಡುಹಿಡಿಯಲು ಪೊಲೀಸರಿಗೆ ಸಾಧ್ಯವಾಗಲಿಲ್ಲ.

ಪಾರಾದೀಪ್ ಪೋರ್ಟ್ ಟ್ರಸ್ಟ್ ಅಧ್ಯಕ್ಷ ಪಿ ಎಲ್ ಹರಾನಂದ್ ಅವರು ರಷ್ಯಾದ ಎಂಜಿನಿಯರ್ ಸಾವನ್ನು ದೃಢಪಡಿಸಿದ್ದು ತನಿಖೆ ನಡೆಸುತ್ತಿದ್ದಾರೆ.

ಡಿಸೆಂಬರ್‌ ಆರಂಭದಲ್ಲಿ ದಕ್ಷಿಣ ಒಡಿಶಾದ ರಾಯಗಡ ಪಟ್ಟಣದಲ್ಲಿ ಶಾಸಕರು ಸೇರಿದಂತೆ ಇಬ್ಬರು ರಷ್ಯಾದ ಪ್ರವಾಸಿಗರು ನಿಗೂಢವಾಗಿ ಮೃತಪಟ್ಟಿದ್ದರು. ರಷ್ಯಾದಲ್ಲಿ ಶಾಸಕರಾಗಿದ್ದ ಪಾವೆಲ್ ಆಂಟೊವ್ (65) ಅವರು ಡಿಸೆಂಬರ್ 24 ರಂದು ಹೋಟೆಲ್‌ನ ಮೂರನೇ ಮಹಡಿಯಿಂದ ಬಿದ್ದು ಮೃತಪಟ್ಟಿದ್ದರೆ, ಅವರ ಸ್ನೇಹಿತ ವ್ಲಾಡಿಮಿರ್ ಬಿಡೆನೋವ್ ಡಿಸೆಂಬರ್ 22 ರಂದು ತಮ್ಮ ಕೋಣೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.

ಎರಡೂ ಪ್ರಕರಣಗಳನ್ನು ಒಡಿಶಾ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

No Comments

Leave A Comment