Log In
BREAKING NEWS >
ಡಿ.7ರ ಗುರುವಾರದ೦ದು ಸಾಯಂಕಾಲ 4.00 ಘಂಟೆಗೆ ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನ ಗೋಕರ್ಣಮಠಾಧೀಶರ ಪ್ರಥಮ ಭೇಟಿ....

ಪಂಜಾಬ್ ಗಡಿಯಲ್ಲಿ ಪಾಕ್ ಒಳನುಸುಳುಕೋರನ ಗುಂಡಿಟ್ಟು ಹತ್ಯೆಗೈದ ಬಿಎಸ್ಎಫ್

ಚಂಡೀಗಢ: ಪಂಜಾಬ್‌ನ ಭಾರತ-ಪಾಕಿಸ್ತಾನ ಅಂತಾರಾಷ್ಟ್ರೀಯ ಗಡಿಯುದ್ದಕ್ಕೂ ಗುರುದಾಸ್‌ಪುರ ಸೆಕ್ಟರ್‌ನಲ್ಲಿ ಗಡಿ ಭದ್ರತಾ ಪಡೆ, ಪಾಕಿಸ್ತಾನ ಮೂಲಗ ಒಳನುಸುಳುಕೋರನಿಗೆ ಗುಂಡಿಟ್ಟು ಹತ್ಯೆ ಮಾಡಿದೆ.

ಬೆಳಿಗ್ಗೆ 8 ಗಂಟೆ ಸುಮಾರಿಗೆ ಒಳನುಸುಳುವಿಕೆ ಪತ್ತೆಯಾಗಿತ್ತು. ಬೇಲಿಯನ್ನು ಸಮೀಪಿಸುತ್ತಿರುವ ಶಸ್ತ್ರಸಜ್ಜಿತ ಪಾಕಿಸ್ತಾನಿ ಒಳನುಗ್ಗುವವರ ಶಂಕಿತ ಚಲನೆಯನ್ನು ಬಿಎಸ್ಎಫ್ ಗಮನಿಸಿ, ಶಂಕಿತ ನುಸುಳುಕೋರನ ಗುಂಡಿಕ್ಕಿ ಹತ್ಯೆ ಮಾಡಿತು.

ಹೊಸ ವರ್ಷ ಆರಂಭವಾದ ಬಳಿಕ ಪಂಜಾಬ್ ಗಡಿಯಲ್ಲಿ ನಡೆದ ಮೊದಲ ಎನ್ಕೌಂಟರ್ ಇದಾಗಿದೆ. ಕಳೆದ ವರ್ಷ ಬಿಎಸ್‌ಎಫ್ ಯೋಧರು ಇಬ್ಬರು ಪಾಕಿಸ್ತಾನಿ ಒಳನುಸುಳುಕೋರರನ್ನು ಹತ್ಯೆ ಮಾಡಿ, 23 ಜನರನ್ನು ಬಂಧನಕ್ಕೊಳಪಡಿಸಿದೆ.

ಇದಲ್ಲದೆ, ಇಂದು ಮುಂಜಾನೆ ಟಾರಂಟರ್ನ್ ಸೆಕ್ಟರ್‌ನಲ್ಲಿ ಡ್ರೋಣ್ ಚಲನೆ ಕೂಡ ಪತ್ತೆಯಾಗಿದ್ದು, ಡ್ರೋಣ್’ನ್ನು ಬಿಎಸ್ಎಫ್ ಪಡೆ ಪತ್ತೆ ಮಾಡಿ ಹೊಡೆದುರುಳಿಸಿದೆ.

ಮಂಜು ಕವಿದ ವಾತಾವರಣದ ಲಾಭವನ್ನು ಪಡೆದುಕೊಂಡು ಪಾಕಿಸ್ತಾನವು ಡ್ರೋಣ್ ಬಳಸಿ ನುಸುಳುಕೋರರನ್ನು ಭಾರತದೊಳಗೆ ನುಸುಳಿಸಲು ಪ್ರಯತ್ನಿಸುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಸೋಮವಾರ ಮುಂಜಾನೆ, ಗುರುದಾಸ್‌ಪುರ ಸೆಕ್ಟರ್‌ನ ಕಸ್ಸೋವಾಲ್ ಪ್ರದೇಶದಲ್ಲಿ ಡಿಸೆಂಬರ್ 31 ರಂದು ಯೋಧರು ಗುಂಡು ಹಾರಿಸಿದ ಡ್ರೋಣ್ ನಲ್ಲಿದ್ದ ಸುಮಾರು 1 ಕೆಜಿ ಹೆರಾಯಿನ್ ಅನ್ನು ವಶಪಡಿಸಿಕೊಂಡಿತ್ತು.

No Comments

Leave A Comment