Log In
BREAKING NEWS >
ಉಡುಪಿ ನಗರದಲ್ಲಿನ ಗ್ರಾಹಕರ ಅಚ್ಚುಮೆಚ್ಚಿನ ಪ್ರಸಿದ್ಧ ಜವಳಿಮಳಿಗೆಯಾದ "ಕಲ್ಸ೦ಕ ಗಿರಿಜಾ ಸಿಲ್ಕ್"ನಲ್ಲಿ ಗ್ರಾಹಕರಿಗಾಗಿ ಜೂನ್ 1ರಿ೦ದ ಮಳೆಗಾಲದ ಮಹೋನ್ನತ ಭಾರೀ ರಿಯಾಯಿತಿ ದರದಲ್ಲಿ ವಸ್ತ್ರಗಳ ಮಾರಾಟ ಆರ೦ಭ.

ನೆರೆ ರಾಷ್ಟ್ರದೊಂದಿಗೆ ಭಾರತ ಉತ್ತಮ ಸಂಬಂಧ ಬಯಸುತ್ತದೆ, ಭಯೋತ್ಪಾದನೆ ಎಂದಿಗೂ ಕ್ಷಮಿಸಲ್ಲ: ವಿದೇಶಾಂಗ ಸಚಿವ ಜೈಶಂಕರ್

ನವದೆಹಲಿ: ನಾವು ನಮ್ಮ ನೆರೆಯ ರಾಷ್ಟ್ರಗಳೊಂದಿಗೆ ಉತ್ತಮ ಸಂಬಂಧವನ್ನು ಬಯಸುತ್ತೇವೆ. ಆದರೆ ಇದರ ಅರ್ಥ ಭಯೋತ್ಪಾದನೆಯನ್ನು ಕ್ಷಮಿಸುತ್ತೇವೆ ಎಂದಲ್ಲ. ಭಯೋತ್ಪಾದನೆಯಿಂದ ಭಾರತ ನೊಂದಷ್ಟು ಬೇರಾವುದೇ ರಾಷ್ಟ್ರ ನೊಂದಿಲ್ಲ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಅವರು ಶುಕ್ರವಾರ ಹೇಳಿದ್ದಾರೆ.

ಜೈಶಂಕರ್ ಅವರು ಶುಕ್ರವಾರ ಸೈಪ್ರಸ್‌ಗೆ ಭೇಟಿ ನೀಡಿದ್ದು, ಅಲ್ಲಿನ ಭಾಷಣದ ವೇಳೆ ಅವರು ನೆರೆಯ ಪಾಕಿಸ್ತಾನ ಹಾಗೂ ಚೀನಾ ದೇಶಗಳಿಗೆ ತಿರುಗೇಟು ನಿಡಿದ್ದಾರೆ.

ನಮ್ಮ ನೆರೆಯ ರಾಷ್ಟ್ರಗಳೊಂದಿಗೆ ನಾವು ಒಳ್ಳೆಯ ಸಂಬಂಧ ಬಯಸಿದರೂ ನಮ್ಮ ಮೇಲಾಗಿರುವ ಭಯೋತ್ಪಾದನೆಯನ್ನು ನಾವು ಹಗುರವಾಗಿ ತೆಗೆದುಕೊಳ್ಳುವುದಿಲ್ಲ. ಈ ವಿಷಯದ ಬಗ್ಗೆ ಯಾವುದೇ ರಾಜಿಯಿಲ್ಲ ಎಂದು ಒತ್ತಿ ಹೇಳಿದರು.

ಚೀನಾದೊಂದಿಗಿನ ಗಡಿ ಸಮಸ್ಯೆಗಳ ಕುರಿತು ಮಾತನಾಡಿದ ಜೈಶಂಕರ್, ಕೋವಿಡ್ ಸಮಯದಲ್ಲಿ ಸವಾಲುಗಳು ತೀವ್ರಗೊಂಡಿವೆ. ಚೀನಾದೊಂದಿಗಿನ ನಮ್ಮ ಸಂಬಂಧಗಳು ಸಾಮಾನ್ಯವಾಗಿಲ್ಲ. ಅರುಣಾಚಲದ ತವಾಂಗ್ ಸೆಕ್ಟರ್‌ನಲ್ಲಿ ಚೀನಾ ಮತ್ತು ಭಾರತೀಯ ಸೈನಿಕರು ಘರ್ಷಣೆ ನಡೆಸಿದ ದಿನಗಳ ಬಳಿಕ ನಮ್ಮ ಗಡಿಯಲ್ಲಿ ನಮಗೆ ಸವಾಲುಗಳಿವೆ. ಅದು ಕೋವಿಡ್ ಸಮಯದಲ್ಲಿ ತೀವ್ರಗೊಂಡಿದೆ ಎಂದು ತಿಳಿಸಿದರು.

ಚೀನಾದೊಂದಿಗಿನ ಸಂಬಂಧಗಳು ಸಾಮಾನ್ಯವಾಗಿಲ್ಲ ಏಕೆಂದರೆ ಎಲ್‌ಎಸಿ ಪ್ರದೇಶವನ್ನು ಏಕಪಕ್ಷೀಯವಾಗಿ ಬದಲಾಯಿಸುವ ಯಾವುದೇ ಪ್ರಯತ್ನವನ್ನು ನಾವು ಒಪ್ಪುವುದಿಲ್ಲ ಎಂದು ಅವರು ಸ್ಪಷ್ಟವಾಗಿ ಹೇಳಿದರು.

No Comments

Leave A Comment