Log In
BREAKING NEWS >
ಉಡುಪಿ ನಗರದಲ್ಲಿನ ಗ್ರಾಹಕರ ಅಚ್ಚುಮೆಚ್ಚಿನ ಪ್ರಸಿದ್ಧ ಜವಳಿಮಳಿಗೆಯಾದ "ಕಲ್ಸ೦ಕ ಗಿರಿಜಾ ಸಿಲ್ಕ್"ನಲ್ಲಿ ಗ್ರಾಹಕರಿಗಾಗಿ ಜೂನ್ 1ರಿ೦ದ ಮಳೆಗಾಲದ ಮಹೋನ್ನತ ಭಾರೀ ರಿಯಾಯಿತಿ ದರದಲ್ಲಿ ವಸ್ತ್ರಗಳ ಮಾರಾಟ ಆರ೦ಭ.

ಪಂಚಭೂತಗಳಲ್ಲಿ ಲೀನರಾದ ಪ್ರಧಾನಿ ಮೋದಿ ತಾಯಿ ಹೀರಾಬೆನ್ ಮೋದಿ

ಅಹ್ಮದಾಬಾದ್: ಪ್ರಧಾನಮಂತ್ರಿ ನರೇಂದ್ರ ಮೋದಿಯವರು ತಾಯಿ ಹೀರಾಬೆನ್ ಮೋದಿಯವರು ಶುಕ್ರವಾರ ಪಂಚಭೂತಗಳಲ್ಲಿ ಲೀನರಾದರು.

ಮೋದಿಯವರ ಸಹೋದರ ಪ್ರಹ್ಲಾದ್ ಮೋದಿಯವರ ಮನೆಯಿಂದ ಹೀರಾಬೆನ್ ಅವರ ಅಂತಿಮ ಯಾತ್ರೆ ಸಾಗಿತು. ಈ ವೇಳೆ ಪ್ರಧಾನಿ ಮೋದಿಯವರು ತಾಯಿಯ ಪಾರ್ಥೀವ ಶರೀರಕ್ಕೆ ಹೆಗಲುಕೊಟ್ಟು ನಡೆದರು.

ಬಳಿಕ ಪಾರ್ಥೀವ ಶರೀರವನ್ನು ಸೆಕ್ಟರ್ 30ರ ರುದ್ರಭೂಮಿಗೆ ತರಲಾಗಿತ್ತು. ಅಂತಿಮ ದರ್ಶನದ ಬಳಿಕ ಸಂಪ್ರದಾಯದಂತೆ ಹೀರಾಬೆನ್ ಅವರ ಅಂತ್ಯಸಂಸ್ಕಾರವನ್ನು ನೆರವೇರಿಸಲಾಯಿತು. ಹೀರಾಬೆನ್ ಅವರು ಪಾರ್ಥೀವ ಶರೀರಕ್ಕೆ ಪ್ರಧಾನಿ ಮೋದಿಯವರು ಅಗ್ನಿ ಸ್ಪರ್ಶ ಮಾಡಿದರು.

ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಹೀರಾಬೆನ್ ಅವರನ್ನು ಬುಧವಾರವಷ್ಟೇ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಇದೀಗ ಚಿಕಿತ್ಸೆ ಫಲಕಾರಿಯಾಗದೆ ಇಂದು ಮುಂಜಾನೆ 3.39ರ ಸುಮಾರಿಗೆ ಆಸ್ಪತ್ರೆಯಲ್ಲಿಯೇ ಕೊನೆಯುಸಿರೆಳೆದಿದ್ದಾರೆ.

ಶತಾಯುಷಿ ಹೀರಾಬೆನ್ ಅವರು ಐವರು ಪುತ್ರರು ಓರ್ವ ಪುತ್ರಿಯನ್ನು ಅಗಲಿದ್ದಾರೆ. ಸದ್ಯ ಹೀರಾಬೆನ್ ನಿಧನಕ್ಕೆ ಇಡೀ ದೇಶವೇ ಕಂಬನಿ ಮಿಡಿಯುತ್ತಿದೆ. ಗಣ್ಯರು ಸಂತಾಪಗಳನ್ನು ಸೂಚಿಸುತ್ತಿದ್ದಾರೆ. ಅಲ್ಲದೇ ಪ್ರಧಾನಿಯವರಿಗೆ ಧೈರ್ಯ ತುಂಬುತ್ತಿದ್ದಾರೆ.

ಕಾಲಿಗೆ ಚಕ್ರ ಕಟ್ಟಿಕೊಂಡಂತೆ ಮೋದಿ ನಾನ್ ಸ್ಟಾಪ್ ಕೆಲ್ಸದ ಹಿಂದೆ ಅಮ್ಮನ ಟಿಪ್ಸ್ ಇತ್ತು. ಪರಿಶ್ರಮವೇ- ಜೀವನದ ಮಂತ್ರ ಅಂತಾ ಅಮ್ಮ ಸದಾ ಮಗನಿಗೆ ಕಿವಿಮಾತು ಹೇಳುತ್ತಿದ್ದರು. ಪ್ರಾಮಾಣಿಕತೆ ಮತ್ತು ಸ್ವಾಭಿಮಾನದ ಪಾಠದ ಜೊತೆಗೆ ಸದಾ ಪರಿಶ್ರಮ ಪಡಬೇಕು ಸದಾ ಸಲಹೆ ಪಡೆಯುತ್ತಿದ್ದರು. ಯಾವುದೇ ಸವಾಲನ್ನು ಜಯಿಸಲು ನಿರಂತರ ಪರಿಶ್ರಮಪಡಬೇಕು ಎಂಬುದು ಅವರ ಪ್ರಮುಖ ಮಂತ್ರವಾಗಿತ್ತು. ಅದಕ್ಕಾಗಿಯೇ ನನ್ನ ಯಶಸ್ಸಿನ ಹಿಂದೆ ತಾಯಿಯಿದ್ದಾರೆ ಎಂದು ಮೋದಿ ಸದಾ ಹೇಳುತ್ತಿದ್ದರು.

No Comments

Leave A Comment