Log In
BREAKING NEWS >
ಜೂ.26ರ೦ದು ಉಡುಪಿ ಶ್ರೀಪುತ್ತಿಗೆ ಮಠದ ೪ನೇ ಪರ್ಯಾಯಕ್ಕೆ ಕಟ್ಟಿಗೆ ಮುಹೂರ್ತ ಕಾರ್ಯಕ್ರಮ ಜರಗಲಿದೆ.....

ವಲಸೆ ಕಾರ್ಮಿಕರಿಗೆ ಕಾರ್ಯಕ್ಷೇತ್ರದಿಂದಲೇ ಮತದಾನ ಅವಕಾಶ-ಬರಲಿದೆ ರಿಮೋಟ್ ಮತಯಂತ್ರ

ನವದೆಹಲಿ:ಡಿ 29.ಮುಂಬರುವ ಸಾರ್ವತ್ರಿಕ ಚುನಾವಣೆ ವೇಳೆ ಭಾರತೀಯ ಚುನಾವಣಾ ಆಯೋಗವು ಮತದಾನ ಪ್ರಕ್ರಿಯಲ್ಲಿ ರಿಮೋಟ್ ಎಲೆಕ್ಟ್ರಾನಿಕ್ ಮತಯಂತ್ರವನ್ನು ಪರಿಚಯಿಸಲು ಸಿದ್ದತೆ ನಡೆಸಿದೆ. ವಲಸೆ ಕಾರ್ಮಿಕರಿಗೆ ಕೆಲಸದ ಸ್ಥಳದಿಂದಲೇ ಮತದಾನಕ್ಕೆ ಅವಕಾಶ ಕಲ್ಪಿಸುವುದು ಈ ಮತಯಂತ್ರದ ಉದ್ದೇಶ.

ರಿಮೋಟ್ ಎಲೆಕ್ಟ್ರಾನಿಕ್ ಮತಯಂತ್ರದ ಅಭಿವೃದ್ದಿಪಡಿಸುವಿಕೆಯಿಂದ ಮತ್ತು ಬಳಕೆ ಮಾಡುವುದರಿಂದ ವಲಸೆ ಮತದಾರರು ಮತ ಚಲಾವಣೆಗಾಗಿಯೇ ಊರಿಗೆ ಹೋಗುವ ಅನಿವಾರ್ಯತೆ ತಪ್ಪಲಿದೆ. ತಮ್ಮ ಕಾರ್ಯಕ್ಷೇತ್ರದ ಮತಗಟ್ಟೆಯಿಂದಲೇ ತಮ್ಮಿಷ್ಟದ ಅಭ್ಯರ್ಥಿಗೆ ಮತ ಹಾಕಬಹುದು. ಒಂದೇ ರಿಮೋಟ್ ಮತಗಟ್ಟೆಯಿಂದ ಒಂದಕ್ಕಿಂತ ಹೆಚ್ಚು ಕ್ಷೇತ್ರಗಳನ್‌ಉ ನಿಭಾಯಿಸುವ ಸಾಮರ್ಥ್ಯವನ್ನು ಈ ಮತಯಂತ್ರ ಹೊಂದಲಿದೆ.

ಇನ್ನು ಚುನಾವಣಾ ಆಯೋಗವು ಇದನ್ನು ಪರಿಚಯಿಸುವುದಕ್ಕೂ ಮುನ್ನ ರಾಜಕೀಯ ಪಕ್ಷಗಳಿಂದ ಅಭಿಪ್ರಾಯವನ್ನು ಆಹ್ವಾನಿಸಿದೆ. ಕಾನೂನು, ಕಾರ್ಯಾಚರಣೆ, ಆಡಳಿತಾತ್ಮಕ ಮತ್ತು ತಾಂತ್ರಿಕ ಸವಾಲುಗಳ ಬಗ್ಗೆ ರಾಜಕೀಯ ಪಕ್ಷಗಳ ಅಭಿಪ್ರಾಯ ಆಲಿಸಿ ಮುಂದಿನ ಹೆಜ್ಜೆ ಇಡಲು ನಿರ್ಧರಿಸಲಾಗಿದೆ ಎಂದು ಚುನಾವಣಾ ಆಯೋಗ ಹೇಳಿದೆ.

2019ರ ಸಾರ್ವತ್ರಿಕ ಚುನಾವಣೆಯಲ್ಲಿ 30 ಕೋಟಿಗೂ ಮಿಕ್ಕಿ ಮತದಾರರು ಮತದಾನ ಮಾಡಿರಲಿಲ್ಲ. ಇದರಿಂದ ದೇಶದಲ್ಲಿ ಒಟ್ಟಾರೆ 67.4ರಷ್ಟು ಮತದಾನವಾಗಿತ್ತು. ಆಂತರಿಕ ವಲಸೆಯೂ ಇದಕ್ಕೆ ಕಾರಣ ಎನ್ನಲಾಗಿದ್ದು, ಈ ನಿಟ್ಟಿನಲ್ಲಿ ವಲಸೆ ಕಾರ್ಮಿಕರಿಗೆ ಮತದಾನಕ್ಕೆ ಕಾರ್ಯಸ್ಥಾನದಿಂದಲೇ ಅವಕಾಶ ಕಲ್ಪಿಸಿ ಮತದಾನ ಸುಧಾರಿಸುವ ದೃಷ್ಟಿಯಿಂದ ಈ ಹೊಸ ವ್ಯವಸ್ಥೆಯನ್ನು ಚುನಾವಣಾ ಆಯೋಗ ಅಭಿವೃದ್ದಿಪಡಿಸುತ್ತಿದೆ.

No Comments

Leave A Comment