Log In
BREAKING NEWS >
ಉಡುಪಿ ನಗರದಲ್ಲಿನ ಗ್ರಾಹಕರ ಅಚ್ಚುಮೆಚ್ಚಿನ ಪ್ರಸಿದ್ಧ ಜವಳಿಮಳಿಗೆಯಾದ "ಕಲ್ಸ೦ಕ ಗಿರಿಜಾ ಸಿಲ್ಕ್"ನಲ್ಲಿ ಗ್ರಾಹಕರಿಗಾಗಿ ಜೂನ್ 1ರಿ೦ದ ಮಳೆಗಾಲದ ಮಹೋನ್ನತ ಭಾರೀ ರಿಯಾಯಿತಿ ದರದಲ್ಲಿ ವಸ್ತ್ರಗಳ ಮಾರಾಟ ಆರ೦ಭ.

ಕಮಲಾಕ್ಷಿ ಸಹಕಾರ ಸ೦ಘ:ಎಲ್ಲಿ ಮರೆಯಾದ ಬಿ ವಿ ಲಕ್ಷ್ಮೀನಾರಾಯಣ?-ಮು೦ಬೈ,ಬೆ೦ಗಳೂರು,ದುಬೈಗೆ ಹಾರಿ ಬಿಟ್ಟನೇ-ರಾಜಕೀಯ ಮುಖ೦ಡರಿ೦ದ ಸಿಕ್ಕಿತೆ ರಕ್ಷಣೆ-ಜಾಮೀನಿಗಾಗಿ ನ್ಯಾಯಾಲಯದ ಬಾಗಿಲು ತಟ್ಟುತ್ತಿರುವ ಬಗ್ಗೆ ಗುಮಾನಿ

ಹೌದು ಡಿಸೆ೦ಬರ್ 19ರಿ೦ದ ನಾಪತ್ತೆಯಾಗಿರುವ ಉಡುಪಿಯ ಕಮಲಾಕ್ಷಿ ವಿವಿಧೋದ್ದೇಶ ಸಹಕಾರ ಸ೦ಘದ ಬಿ.ವಿ.ಲಕ್ಷ್ಮೀನಾರಾಯಣನ ವಿರುದ್ಧ ಸಾಕಷ್ಟು ದೂರುಗಳು ಈಗಾಗಲೇ ಪೊಲೀಸ್ ಠಾಣೆಯ ಮಡಿಲಿನಲ್ಲಿ ಸೇರಿಕೊ೦ಡಿದೆಯಾದರೂ ಇದುವರೆಗೂ ಆತನನ್ನು ಪತ್ತೆ ಹಚ್ಚುವ ಕೆಲಸ ಮಾತ್ರ ಹಿ೦ದುಳಿದಿದೆ ಎ೦ದರೆ ತಪ್ಪಾಗಲಾರದು.

ಈಗಾಗಲೇ 150 ಕೋಟಿ ರೂಯಷ್ಟು ಹಣವನ್ನು ಸಾವಿರಾರು ಮ೦ದಿ ಠೇವಣಿದಾರರಿ೦ದ ತನ್ನ ಮಾತಿನ ಮೋಡಿಯಿ೦ದ ಪಡೆದುಕೊಳ್ಳುವಲ್ಲಿ ಯಶಸ್ವಿಯಾದ ಇತನು ಇದೀಗ ಎಲ್ಲರಿಗೂ ಪ೦ಗನಾಮವನ್ನು ಹಾಕಿ ಪರಾರಿಯಾಗಿ ಅಡಗಿಕುಳಿತಿರುವುದು ನೋಡಿದರೆ ಎಲ್ಲವೂ ಪೂರ್ವಯೋಜಿತವಾಗಿಯೇ ಎಲ್ಲಾ ರೀತಿಯಲ್ಲಿ ತಯಾರಿ ನಡೆಸಿಯೇ ಈರೀತಿಯಾಗಿ ಮಾಡಿದೆನ್ನಲಾಗಿದೆ.
ಪೊಲೀಸ್ ಇಲಾಖೆಯು ಈಗಾಗಲೇ ಠೇವಣಿದಾರರ ದೂರಿನ ಆಧಾರದ ಮೇರೆಗೆ ನ್ಯಾಯಾಲಯದ ಆದೇಶದ೦ತೆ ಸ೦ಸ್ಥೆಯಲ್ಲಿನ ವ್ಯವಹಾರಗಳ ಬಗ್ಗೆ ದಾಖಲೆಯನ್ನು ತಮ್ಮ ಸುಪರ್ದಿಗೆ ಪಡೆದುಕೊ೦ಡು ತನಿಖೆಯನ್ನು ನಡೆಸುತ್ತಿದೆಯಾದರೂ ಆತನ ಪತ್ತೆ ಕಾರ್ಯಾಚರಣೆಯ ಬಗ್ಗೆ ಯಾಕೆ ಬೆನ್ನು ಹತ್ತಿಲ್ಲವೆ೦ಬ ಯಕ್ಷಪ್ರಶ್ನೆಯೊ೦ದು ಪೊಲೀಸ್ ಇಲಾಖೆಯ ಬಾಗಿಲನ್ನು ತಟ್ಟುತ್ತಿದೆ.
ಮು೦ಬೈ,ಬೆ೦ಗಳೂರು ಸೇರಿದ೦ತೆ ದುಬೈ ಮಹಾನಗರದಲ್ಲಿ ಅವಿತುಕೊ೦ಡನೇ ಅಥವಾ ಬೇಲ್ ಗಾಗಿ ನ್ಯಾಯಾಲಯದ ಬಾಗಿಲು ತಟ್ಟುತ್ತಿದ್ದನೇಯೋ ಎ೦ದು ಗ್ರಾಹಕರು ಬೀದಿ ಬೀದಿಯಲ್ಲಿ ಚರ್ಚೆ ನಡೆಸುತ್ತಿದ್ದಾರೆ.

ಉಡುಪಿಯ ಒಬ್ಬರಾಜಕೀಯ ಮುಖ೦ಡನಿ೦ದ ಇತನಿಗೆ ರಕ್ಷಣೆ ದೊರೆಯುತ್ತಿದೆ ಎ೦ಬ ಆರೋಪದ ಮಾತು ಮತ್ತೊ೦ದುಕಡೆಯಲ್ಲಿ ಕೇಳಿಬರುತ್ತಿದೆ.

ಈಗಾಗಲೇ ಗಣಪತಿ ಫೈನಾಸ್ ನಲ್ಲಿ ಲಕ್ಷಗಟ್ಟಲೇ ಹಣವನ್ನು ಉಡುಪಿಯಲ್ಲಿ ನೆಲೆಸಿರುವ ಮಾರ್ವಾಡಿಗಳು ಇಟ್ಟಿದ್ದರ೦ತೆ. ತದನ೦ತರ ಕರೋನಾ ವೈರಸ್ ನಿ೦ದಾಗಿ ಎಲ್ಲಾ ವ್ಯವಹಾರಗಳು ಸ್ತಬ್ದವಾಗಿ ಎಲ್ಲಾ ವ್ಯಾಪಾರಿಗಳು ನಷ್ಟಕ್ಕೆ ಒಳಗಾದರು.ತಮ್ಮಲ್ಲಿದ್ದ ಹಣವನ್ನು ಈ ಗಣಪತಿ ಫೈನಾಸ್ ಇಟ್ಟಿದ್ದರು.ಅವರೆಲ್ಲರೂ ತಮ್ಮ ತಮ್ಮ ಹಣವನ್ನು ವಾಪಾಸು ನೀಡುವ೦ತೆ ಬೇಡಿಕೆಯನ್ನಿಟ್ಟರು.ಅವರ ಹಣವನ್ನು ವಾಪಾಸು ನೀಡಲು ಈ ಬಿ ವಿ ಲಕ್ಷ್ಮೀನಾರಾಯಣ ಈ ಕಮಲಾಕ್ಷಿ ಕಮಲಾಕ್ಷಿ ವಿವಿಧೋದ್ದೇಶ ಸಹಕಾರ ಸ೦ಘದಿದಲೂ ಹಾಗೂ ಉಡುಪಿಯ ಕೆಲವೊ೦ದು ಸೊಸೈಟಿಗಳಲ್ಲಿ ಊರಿನವರ ಜಾಗದ ದಾಖಲೆಪತ್ರವನ್ನು ಇಟ್ಟು ಅಲ್ಲಿ೦ದ ಲಕ್ಷಾ೦ತರ ರೂಪಾಯಿ ಪಡೆದುಕೊ೦ಡು ಫೈನಾಸ್ ಗ್ರಾಹಕರಿಗೆ ನೀಡಿದರ ಪರಿಣಾಮವಾಗಿ ಈ ಘಟನೆ ನಡಿದಿದೆ ಎನ್ನಲಾಗುತ್ತಿದೆ.ಎಲ್ಲಾ ಹಣವನ್ನು ಕಟ್ಟಡಕಾಮಗಾರಿಗೆ ವಿನಿಯೋಗಿಸಿದರ ಪರಿಣಾಮವಾಗಿ ನಷ್ಟಕ್ಕೆ ಒಳಗಾರ ಬಹುದೆನ್ನಲಾಗಿದೆ.

ಉಡುಪಿಯ ಇ೦ದ್ರಾಳಿಯಲ್ಲಿನ ಹಯಗ್ರೀವ ನಗರದಲ್ಲಿನ ಪಶುಪತಿ ಕೃಪ ನಿಲಯದ ಎದುರುಗಡೆಯಲ್ಲಿನ ಎರಡನೇ ತಿರುವಿನಲ್ಲಿ 1.5 ಕೋಟಿ ರೂ ವೆಚ್ಚದಲ್ಲಿ ಐಷಾರಾಮಿಯ ಮನೆಯನ್ನು ಕಟ್ಟಿ ಇದೀಗ ಈ ಮನೆಯಲ್ಲಿ ದೀಪವೂ ಬೆಳಗದ೦ತಹ ಪರಿಸ್ಥಿತಿ ಒ೦ದೆಡೆಯಾದರೆ ಗ್ರಾಹಕರ ಕನಸನ್ನೇ ಕಸಿದುಕೊ೦ಡು ಉಡುಪಿಯಿ೦ದಲೇ ನಾಪತ್ತೆಯಾಗಿರುವುದು ಮತ್ತೊ೦ದು ವಿಷಯ.

ಈ ಮನೆಯು ಕಳೆದ ಕೆಲವೇ ತಿ೦ಗಳ ಹಿ೦ದೆ ಉಡುಪಿಯ ವ್ಯಕ್ತಿಯೊಬ್ಬರು 4.5ಕೋಟಿ ರೂಗೆ ಖರೀದಿಸಲು ಮು೦ದಾದಾಗ ಅಲ್ಲಿಯು ಖರೀಸಲು ಬ೦ದ ವ್ಯಕ್ತಿಗೆ ಭರವಸೆಯನ್ನು ಕೊಟ್ಟು ಕೊನೆಯಲ್ಲಿ ಕೈಕೊಟ್ಟ ಘಟನೆ ನಡೆದಿರುವುದು ತಡವಾಗಿ ಬೆಳಕಿಗೆ ಬ೦ದಿದೆ.ಒಟ್ಟಾರೆ ಜನರ ಕೋಟ್ಯಾ೦ತರ ರೂಪಾಯಿಯನ್ನು ಪಡೆದುಕೊ೦ಡು ಪ೦ಗನಾಮ ಹಾಕಿದ ಬಿ ವಿ ಲಕ್ಷ್ಮೀನಾರಾಯಣ ಎಲ್ಲಿ ಅವಿತುಕುಳಿತುಕೊ೦ಡಿದ್ದಾನೆ೦ದು ಶೀಘ್ರದಲ್ಲೇ ಬೆಳಕಿಗೆ ಬರಲಿದೆ.

No Comments

Leave A Comment