Log In
BREAKING NEWS >
...........ನಾಡಿನ ಸಮಸ್ತ ಜನತೆಗೆ,ನಮ್ಮ ಎಲ್ಲಾ ಜಾಹೀರಾತುದಾರರಿಗೆ,ಓದುಗರಿಗೆ,ಅಭಿಮಾನಿಗಳಿಗೆ "ಶ್ರೀರಾಮನವಮಿ"ಯ ಶುಭಾಶಯಗಳು.......

ಇತಿಹಾಸ ತಿರುಚುವಿಕೆ, “ಕಾಲ್ಪನಿಕ ಕಥೆ” ಸೃಷ್ಟಿ ದೇಶಕ್ಕೆ ಅತ್ಯಂತ ಅಪಾಯ: ತಮಿಳುನಾಡು ಸಿಎಂ ಸ್ಟಾಲಿನ್ ಎಚ್ಚರಿಕೆ

ಚೆನ್ನೈ: ಇತಿಹಾಸ ತಿರುಚುವಿಕೆ ಮತ್ತು ಕೆಲವರು “ಕಾಲ್ಪನಿಕ ಕಥೆ”ಗಳನ್ನು ಸೃಷ್ಟಿಸುತ್ತಿರುವುದು ದೇಶಕ್ಕೆ ಅತ್ಯಂತ “ಅಪಾಯಕಾರಿ” ಎಂದು ತಮಿಳುನಾಡು ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್ ಅವರು ಮಂಗಳವಾರ ಎಚ್ಚರಿಕೆ ನೀಡಿದ್ದಾರೆ.

ಭಾರತೀಯ ಇತಿಹಾಸ ಕಾಂಗ್ರೆಸ್‌ನ 81ನೇ ವಾರ್ಷಿಕ ಸಮಾವೇಶದಲ್ಲಿ ಮಾತನಾಡಿದ ತಮಿಳುನಾಡು ಸಿಎಂ, ತಮ್ಮ ಸರ್ಕಾರ ಜಾತ್ಯತೀತವಾಗಿ ಉಳಿಯುವ ಅಗತ್ಯವನ್ನು ಒತ್ತಿ ಹೇಳಿದರು.

ಇತಿಹಾಸವನ್ನು ಅಧ್ಯಯನ ಮಾಡುವುದರಿಂದ ಯಾವುದೇ ಲಾಭ ಇಲ್ಲ. ಅದರಿಂದ ನೌಕರಿ ಸಿಗುತ್ತದೆಯೇ ಎಂದು ಹಲವರು ಪ್ರಶ್ನಿಸುತ್ತಾರೆ. ಆದರೆ ಕೇವಲ ಪದವಿ ಮತ್ತು ಸಂಬಳಕ್ಕಾಗಿ ಇತಿಹಾಸ ಅಧ್ಯಯನ ಮಾಡಬಾರದು ಸ್ಟಾಲಿನ್ ಹೇಳಿದರು.

“ನಮ್ಮನ್ನು ತಿಳಿದುಕೊಳ್ಳಲು ನಾವು ಇತಿಹಾಸವನ್ನು ಅಧ್ಯಯನ ಮಾಡಬೇಕು. ಭೂತಕಾಲವನ್ನು ಅಧ್ಯಯನ ಮಾಡಿದವರು ಮಾತ್ರ ವರ್ತಮಾನದಲ್ಲಿ ಇತಿಹಾಸವನ್ನು ಸೃಷ್ಟಿಸಬಹುದು; ಭವಿಷ್ಯವನ್ನು ಊಹಿಸಬಹುದು. ಅಂತಹ ಇತಿಹಾಸವು ವಿಜ್ಞಾನ ಆಧಾರಿತ ಸತ್ಯವಾಗಿರಬೇಕು. ಕೆಲವರು ಕಾಲ್ಪನಿಕ ಕಥೆಗಳನ್ನು ಸೃಷ್ಟಿಸಿ ಅದೇ ಇತಿಹಾಸ ಎಂದು ಹೇಳುತ್ತಾರೆ. ಜನ ಅವರನ್ನು ನಂಬಿ ಮೂರ್ಖರಾಗುತ್ತಾರೆ. ಆದರೆ ಅದನ್ನು ನಾವು ಒಪ್ಪಿಕೊಳ್ಳಬಾರದು ” ಎಂದು ಸ್ಟಾಲಿನ್ ಹೇಳಿದರು.

ಪ್ರಜ್ಞಾವಂತ ಸಮಾಜವು ಅಂತಹ ಸಿದ್ಧಾಂತಗಳನ್ನು ಒಪ್ಪಿಕೊಳ್ಳುವುದಿಲ್ಲ ಎಂದು ಸ್ಟಾಲಿನ್ ತಿಳಿಸಿದರು.

ಇಂದು ದೇಶವನ್ನು ಆವರಿಸಿರುವ ಅಪಾಯ ಎಂದರೆ ಈ ಇತಿಹಾಸ ತಿರುಚುವಿಕೆ. ಶಿಕ್ಷಣ, ಭಾಷೆ, ಸಂಸ್ಕೃತಿ, ಅಧಿಕಾರ, ಆರ್ಥಿಕತೆ ಮತ್ತು ಆಡಳಿತದಲ್ಲಿ ಸಂವಿಧಾನದ ಘನತೆ ಕಾಪಾಡಬೇಕು ಎಂದು ತಮಿಳುನಾಡು ಸಿಎಂ ಹೇಳಿದ್ದಾರೆ.

No Comments

Leave A Comment