Log In
BREAKING NEWS >
"ಕರಾವಳಿಕಿರಣ ಡಾಟ್ ಕಾ೦"ನ ಎಲ್ಲಾ ಓದುಗರಿಗೆ,ಜಾಹೀರಾತುದಾರರಿಗೆ ಮತ್ತು ಅಭಿಮಾನಿಗಳಿಗೆ "ಶ್ರೀಅನ೦ತವೃತ"ದ ಶುಭಾಶಯಗಳು...

ಮಂಗಳೂರು: ಬೆಂಗಳೂರಿನಿಂದ ಕೇರಳಕ್ಕೆ ಅಕ್ರಮ ಗಾಂಜಾ ಸಾಗಾಟ-ನಾಲ್ವರು ಅರೆಸ್ಟ್

ಮಂಗಳೂರು:ಡಿ 26. ಬೆಂಗಳೂರಿನಿಂದ ಕೇರಳಕ್ಕೆ ಅಕ್ರಮವಾಗಿ ಗಾಂಜಾ ಸಾಗಾಟ ಮಾಡುತ್ತಿದ್ದ ನಾಲ್ವರನ್ನು ಕೊಣಾಜೆ ಠಾಣೆ ಪೊಲೀಸರು ಚೇಳೂರು ಚೆಕ್‌ಪೋಸ್ಟ್ ಬಳಿ ಬಂಧಿಸಿದ್ದಾರೆ.

ಕಾಸರಗೋಡು ಬಂಡಿಯೋಡು ನಿವಾಸಿ ಮಹಮ್ಮದ್ ನೌಫಲ್ (24), ಮಲಪ್ಪುರಂ ಪೊನ್ನಾನಿ ನಿವಾಸಿ ಜಮ್ಶೀರ್ ಎಂ. (24),ಮಂಜೇಶ್ವರ ಮಂಗಲ್ಪಾಡಿ ನಿವಾಸಿ ಮಹಮ್ಮದ್ ಬಾತೀಶ್ (37) ಮತ್ತು ಕಾಸರಗೋಡು ಮುತ್ತತೋಡಿ ನಿವಾಸಿ ಮೊಹಮ್ಮದ್ ಅಶ್ರಫ್ (42) ಬಂಧಿತರು.

ಬೆಂಗಳೂರಿನಿಂದ ಉಪ್ಪಿನಂಗಡಿ, ಮೆಲ್ಕಾರ್, ಬೋಳಿಯಾರ್ ರಸ್ತೆ ಮೂಲಕ ಕೇರಳಕ್ಕೆ ಆಲ್ಟೋ ಕಾರಿನಲ್ಲಿ ಡ್ರಗ್ಸ್ ಸಾಗಾಟ ಮಾಡುತ್ತಿದ್ದ ಬಗ್ಗೆ ಖಚಿತ ಮಾಹಿತಿ ಪಡೆದು ಆರೋಪಿಗಳನ್ನು ಪೊಲೀಸರು ಬಂಧಿಸಿದರು.

ಬಂಧಿತರಿಂದ 3,19,000 ರೂ. ಮೌಲ್ಯದ 32,195 ಕೆಜಿ ಗಾಂಜಾ, ಮಾದಕವಸ್ತು ಖರೀದಿಸಲು ಮತ್ತು ಮಾರಾಟ ಮಾಡಲು ಬಳಸುತ್ತಿದ್ದ 13,000 ರೂ. ಮೌಲ್ಯದ ಮೊಬೈಲ್ ಫೋನ್, 2 ಟ್ರಾವೆಲ್ ಬ್ಯಾಗ್ ಮತ್ತು 3 ಲಕ್ಷ ರೂ. ಮೌಲ್ಯದ ಆಲ್ಟೊ ಕಾರು ಸೇರಿ ಒಟ್ಟು 6,32,000 ರೂ. ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಕೊಣಾಜೆ ಠಾಣೆ ಇನ್ಸ್‌ಪೆಕ್ಟರ್ ಪ್ರಕಾಶ್ ದೇವಾಡಿಗ ನೇತೃತ್ವದಲ್ಲಿ ಎಸ್‌ಐ ಶರಣಪ್ಪ ಭಂಡಾರಿ, ಸಿಬ್ಬಂದಿಗಳಾದ ಶೈಲೇಂದ್ರ, ಮಹಮ್ಮದ್ ಷರೀಫ್, ಮಹೇಶ್, ಪುರುಷೋತ್ತಮ, ದೀಪಕ್, ಅಶ್ವಿನ್, ಸುರೇಶ್, ಅಂಬರೀಶ್, ಬರಮ ಬಡಿಗೇರ್, ರೇಷ್ಮಾ, ಸುನೀತಾ ಅವರು ಸಹಾಯಕ ಪೊಲೀಸ್ ಆಯುಕ್ತ ದಿನಕರ ಶೆಟ್ಟಿ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾದರು. ಎಲ್ಲಾ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

No Comments

Leave A Comment