Log In
BREAKING NEWS >
"ಕರಾವಳಿಕಿರಣ ಡಾಟ್ ಕಾ೦"ನ ಎಲ್ಲಾ ಓದುಗರಿಗೆ,ಜಾಹೀರಾತುದಾರರಿಗೆ ಮತ್ತು ಅಭಿಮಾನಿಗಳಿಗೆ "ಶ್ರೀಅನ೦ತವೃತ"ದ ಶುಭಾಶಯಗಳು...

ಚಾಮರಾಜನಗರ: ಬಿಸಲವಾಡಿಯಲ್ಲಿ ಕಲ್ಲು ಕ್ವಾರಿ ಕುಸಿದು ಮೂವರ ದುರ್ಮರಣ

ಚಾಮರಾಜನಗರ: ಬಿಸಲವಾಡಿಯಲ್ಲಿ ಕಲ್ಲು ಕ್ವಾರಿ ಕುಸಿದು ಮೂವರು ಕಾರ್ಮಿಕರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಚಾಮರಾಜನಗರದಲ್ಲಿ ನಡೆದಿದೆ.

ಮೃತರನ್ನು 28 ವರ್ಷದ ಕುಮಾರ್ ಹಾಗೂ 35 ವರ್ಷದ ಶಿವರಾಜು ಮೃತ ದುರ್ದೈವಿಗಳು. ಘಟನೆಯಲ್ಲಿ ಮತ್ತೊಬ್ಬ ಕಾರ್ಮಿಕ ಸಿದ್ದರಾಜು ಪರಿಸ್ಥಿತಿ ಗಂಭೀರವಾಗಿದ್ದು ಆತನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸುವ ಮಾರ್ಗಮಧ್ಯೆ ಮೃತಪಟ್ಟಿದ್ದಾನೆ.

ಮೃತರು ಕಾಗಲವಾಡಿಯ ಮೊಳೆ ಗ್ರಾಮದವರಾಗಿದ್ದು ಕ್ವಾರಿಗೆ ಕುಳಿ ಹೊಡೆಯಬೇಕಾದರೆ ಈ ಅವಘಡ ಸಂಭವಿಸಿದೆ. ಕಲ್ಲುಬಂಡೆಗಳ ರಾಶಿ ಕಾರ್ಮಿಕರ ಮೇಲೆ ಬಿದ್ದಿದ್ದರಿಂದ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಘಟನಾ ಸ್ಥಳಕ್ಕೆ ಗ್ರಾಮಾಂತರ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

No Comments

Leave A Comment