Log In
BREAKING NEWS >
ಉಡುಪಿ ನಗರದಲ್ಲಿನ ಗ್ರಾಹಕರ ಅಚ್ಚುಮೆಚ್ಚಿನ ಪ್ರಸಿದ್ಧ ಜವಳಿಮಳಿಗೆಯಾದ "ಕಲ್ಸ೦ಕ ಗಿರಿಜಾ ಸಿಲ್ಕ್"ನಲ್ಲಿ ಗ್ರಾಹಕರಿಗಾಗಿ ಜೂನ್ 1ರಿ೦ದ ಮಳೆಗಾಲದ ಮಹೋನ್ನತ ಭಾರೀ ರಿಯಾಯಿತಿ ದರದಲ್ಲಿ ವಸ್ತ್ರಗಳ ಮಾರಾಟ ಆರ೦ಭ.

ಶ್ರದ್ಧಾ ವಾಲ್ಕರ್-ಅಫ್ತಾಬ್ ವಾದದ ಆಡಿಯೋ ಕ್ಲಿಪ್, ಧ್ವನಿ ಮಾದರಿ ಸಂಗ್ರಹಕ್ಕೆ ಮುಂದಾದ ಸಿಬಿಐ ವಿಧಿವಿಜ್ಞಾನ ಕಚೇರಿ

ನವದೆಹಲಿ: ದೆಹಲಿಯ ಮೆಹ್ರೌಲಿಯಲ್ಲಿ ನಡೆದ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ, ತನಿಖಾಧಿಕಾರಿಗಳು ಅಫ್ತಾಬ್ ಅಮಿನ್ ಪೂನಾವಾಲಾ ಮತ್ತು ಶ್ರದ್ಧಾ ವಾಲ್ಕರ್ ಆಡಿಯೋ ಕ್ಲಿಪ್ ಅನ್ನು ವಶಪಡಿಸಿಕೊಂಡಿದ್ದಾರೆ ಎಂದು ಮೂಲಗಳು ಸೋಮವಾರ ತಿಳಿಸಿವೆ.

ಈಮಧ್ಯೆ, ಧ್ವನಿ ಮಾದರಿ ಸಂಗ್ರಹಿಸಲು ಆಫ್ತಾಬ್‌ನನ್ನು ಲೋಧಿ ಕಾಲೋನಿಯಲ್ಲಿರುವ ಕೇಂದ್ರೀಯ ತನಿಖಾ ಸಂಸ್ಥೆ (ಸಿಬಿಐ) ವಿಧಿವಿಜ್ಞಾನ ಕಚೇರಿಗೆ ಕರೆದೊಯ್ಯಲಾಗಿದೆ.

ಫೋರೆನ್ಸಿಕ್ ತಜ್ಞರು, ಹೊಸದಾಗಿ ಸಂಗ್ರಹಿಸಲಾಗಿರುವ ಆಡಿಯೊ ಕ್ಲಿಪ್‌ನೊಂದಿಗೆ ಅಫ್ತಾಬ್‌ನ ಧ್ವನಿ ಮಾದರಿಯನ್ನು ಹೊಂದಿಸಲಿದ್ದಾರೆ.

ಮೂಲಗಳ ಪ್ರಕಾರ, ಆಡಿಯೊ ಕ್ಲಿಪ್‌ನಲ್ಲಿ ಇಬ್ಬರು ಜಗಳವಾಡುವುದನ್ನು ಕೇಳಬಹುದು ಮತ್ತು ಅಫ್ತಾಬ್ ಶ್ರದ್ಧಾರನ್ನು ನಿಂದಿಸುವುದನ್ನು ಕೇಳಬಹುದು. ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ನಿರೀಕ್ಷಿಸಲಾಗುತ್ತಿದೆ.
ಶುಕ್ರವಾರ, ಸಾಕೇತ್ ನ್ಯಾಯಾಲಯವು ತನ್ನ ಲಿವ್-ಇನ್ ಪಾರ್ಟನರ್ ಶ್ರದ್ಧಾ ವಾಲ್ಕರ್ ಅವರನ್ನು ಹತ್ಯೆ ಮಾಡಿದ ಆರೋಪಿ ಪೂನಾವಾಲಾ ಅವರ ನ್ಯಾಯಾಂಗ ಬಂಧನವನ್ನು ಮತ್ತೆ 14 ದಿನಗಳವರೆಗೆ ವಿಸ್ತರಿಸಿತ್ತು.

ತನಿಖೆಗೆ ಸಂಬಂಧಿಸಿದಂತೆ ಅವರ ಧ್ವನಿ ಮಾದರಿಯನ್ನು ಪಡೆಯಲು ದೆಹಲಿ ಪೊಲೀಸರ ಕೋರಿಕೆಯನ್ನು ನ್ಯಾಯಾಲಯ ಅಂಗೀಕರಿಸಿದೆ. ಡಿಸೆಂಬರ್ 22 ರಂದು ದೆಹಲಿ ಪೊಲೀಸರು ಪೂನಾವಾಲಾ ಅವರ ಧ್ವನಿಯನ್ನು ರೆಕಾರ್ಡ್ ಮಾಡಲು ಅನುಮತಿ ಕೋರಿ ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದ್ದರು.

ಶ್ರದ್ಧಾ ಮತ್ತು ಅಫ್ತಾಬ್ 2018 ರಲ್ಲಿ ಡೇಟಿಂಗ್ ಅಪ್ಲಿಕೇಶನ್ ‘ಬಂಬಲ್’ ಮೂಲಕ ಪರಿಚಯವಾಗಿದ್ದರು. ಅವರಿಬ್ಬರು ಮೇ 15 ರಂದು ಚತ್ತರ್‌ಪುರ ಪ್ರದೇಶಕ್ಕೆ ಸ್ಥಳಾಂತರಗೊಳ್ಳುವ ಮೊದಲು ಮೇ 8 ರಂದು ದೆಹಲಿಗೆ ಬಂದರು.

ಅಫ್ತಾಬ್ ಮೇ 18 ರಂದು ಶ್ರದ್ಧಾಳನ್ನು ಕೊಂದು ಆಕೆಯ ದೇಹವನ್ನು 35 ತುಂಡುಗಳಾಗಿ ಕತ್ತರಿಸಿ 18 ದಿನಗಳ ಅವಧಿಯಲ್ಲಿ ವಿವಿಧ ಸ್ಥಳಗಳಲ್ಲಿ ಎಸೆದಿದ್ದಾನೆ.

No Comments

Leave A Comment