Log In
BREAKING NEWS >
ಉಡುಪಿಯ ಶ್ರೀಪುತ್ತಿಗೆ ಮಠಾಧೀಶರಾದ ಶ್ರೀಸುಗುಣೇ೦ದ್ರ ತೀರ್ಥಶ್ರೀಪಾದರ 4ನೇ ಪರ್ಯಾಯಕ್ಕೆ ಗುರುವಾರದ೦ದು ಅದ್ದೂರಿಯ ಅಕ್ಕಿಮುಹೂರ್ತ ಕಾರ್ಯಕ್ರಮ ಸ೦ಪನ್ನ.....

ರಷ್ಯಾದ ಖಾಸಗಿ ನರ್ಸಿಂಗ್ ಹೋಂನಲ್ಲಿ ಅಗ್ನಿ ದುರಂತ-20 ಸಾವು

ಮಾಸ್ಕೊ:ಡಿ 24.: ಖಾಸಗಿ ನರ್ಸಿಂಗ್ ಹೋಂವೊಂದರಲ್ಲಿ ಅಗ್ನಿ ದುರಂತ ಸಂಭವಿಸಿದ ಪರಿಣಾಮ 20 ಮಂದಿ ಸಾವನ್ನಪ್ಪಿದ ಘಟನೆ ಸೈಬೀರಿಯಾದ ಕೆಮೆರೊವೊ ನಗರದಲ್ಲಿ ನಡೆದಿದೆ.

ಕೆಮೆರೊವೊ ನಗರ ಮಾಸ್ಕೊದಿಂದ ಪೂರ್ವಕ್ಕೆ 3 ಸಾವಿರ ಕಿ.ಮೀ ದೂರದಲ್ಲಿದ್ದು, ಇಲ್ಲಿನ ಎರಡು ಅಂತಸ್ತುಗಳ ನರ್ಸಿಂಗ್ ಹೋಂನಲ್ಲಿ ಶನಿವಾರ ಮುಂಜಾನೆ ದುರಂತ ಸಂಭವಿಸಿದೆ. ಘಟನೆಯಲ್ಲಿ 20 ಮಂದಿ ಮೃತಪಟ್ಟಿದ್ದಾರೆ ಎಂದು ರಷ್ಯಾದ ತುರ್ತು ಸಂದರ್ಭದ ಸಚಿವಾಲಯ ಮಾಹಿತಿ ನೀಡಿದೆ.

ಅಗ್ನಿ ದುರಂತಕ್ಕೆ ಕಾರಣವೇನು ಎಂಬ ಮಾಹಿತಿ ಲಭ್ಯವಾಗಿಲ್ಲ. ಇನ್ನು ದುರಂತ ಘಟಿಸುವ ವೇಳೆ ಕಟ್ಟಡದೊಳಗೆ ಎಷ್ಟು ಮಂದಿರ ರೋಗಿಗಳು ಮತ್ತು ಸಿಬಂದಿ ಇದ್ದರು ಎಂಬ ಬಗ್ಗೆಯೂ ತಿಳಿದು ಬಂದಿಲ್ಲ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.

No Comments

Leave A Comment