Log In
BREAKING NEWS >
ಡಿ.7ರ ಗುರುವಾರದ೦ದು ಸಾಯಂಕಾಲ 4.00 ಘಂಟೆಗೆ ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನ ಗೋಕರ್ಣಮಠಾಧೀಶರ ಪ್ರಥಮ ಭೇಟಿ....

ಸುರತ್ಕಲ್: ದ್ವಿಚಕ್ರ ವಾಹನಗಳಿಗೆ ಕಂಟೈನರ್ ಲಾರಿ ಢಿಕ್ಕಿ – ಸವಾರರಿಬ್ಬರು ಸೇರಿ ಮೂವರಿಗೆ ಗಂಭೀರ ಗಾಯ

ಸುರತ್ಕಲ್:ಡಿ 24 . ಕುಳಾಯಿ ಹೊನ್ನಕಟ್ಟೆ ಬಳಿ ಕಂಟೈನರ್ ಲಾರಿಯೊಂದು ದ್ವಿಚಕ್ರ ವಾಹನಗಳಿಗೆ ಢಿಕ್ಕಿಹೊಡೆದ ಪರಿಣಾಮ ಬೈಕ್ ಸವಾರರು ಹಾಗೂ ಒರ್ವ ಪಾದಚಾರಿ ಮಹಿಳೆಗೆ ಗಂಭೀರ ಗಾಯಗೊಂಡಿರುವ ಘಟನೆ ನಡೆದಿದೆ.

ಮಂಗಳೂರು ಕಡೆಯಿಂದ ಸುರತ್ಕಲ್‌ ಭಾಗಕ್ಕೆ ಮಲ್ಟಿ ಚೇಸ್ ಕಂಟೈನರ್ ಹೋಗುತ್ತಿದ್ದ ವೇಳೆ ಏಕಾಏಕಿ ಸಿಗ್ನಲ್ ಬಿದ್ದಿದೆ ಎನ್ನಲಾಗಿದ್ದು, ಲಾರಿ ಅತಿಯಾದ ವೇಗದಲ್ಲಿದ್ದ ಕಾರಣ ಚಾಲಕನ ನಿಯಂತ್ರಣ ತಪ್ಪಿ ಬಲಭಾಗಕ್ಕೆ ತಿರುಗಿಸಿದ್ದಾನೆ ಎನ್ನಲಾಗಿದೆ.

ಇನ್ನು ಈ ವೇಳೆ ಲಾರಿ ಡಿವೈಡರ್ ಏರಿಕೊಂಡು ಎದುರಿನಿಂದ ಬರುತ್ತಿದ್ದ ಒಂದು ಸ್ಕೂಟಿ ಮತ್ತು ಒಂದು ಬೈಕ್ ಗೆ ಢಿಕ್ಕಿ ಹೊಡೆದಿದ್ದು, ಗಾಯಾಳುಗಳನ್ನು ತಕ್ಷಣ ಸಾರ್ವಜನಿಕರು ಆಸ್ಪತ್ರೆಗೆ ರವಾನಿಸಿದ್ದಾರೆ ಎಂದು ತಿಳಿದು ಬಂದಿದೆ.

ಘಟನಾ ಸ್ಥಳಕ್ಕೆ ಮಂಗಳೂರು ಉತ್ತರ ಸಂಚಾರ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ.

No Comments

Leave A Comment