Log In
BREAKING NEWS >
ಕರಾವಳಿಯಲ್ಲಿ ಹೆಚ್ಚಿದ ಬಿಸಿಲಿನ ತಾಪಮಾನ-ಸಾವು ಸ೦ಭವಿಸುವ ಸಾಧ್ಯತೆ-ಎಚ್ಚರ ಬಿಸಿಲಿನಲ್ಲಿ ಹೊರಗೆ ಬರಲೇ ಬೇಡಿ....

ಕ್ಲಬಿನ ಸದಸ್ಯರಿಗೆ 1.5ಕೋಟಿ ರೂ ವ೦ಚನೆ-ರೋಟರಿ ಕ್ಲಬಿನಿ೦ದ ಬಿ ವಿ ಲಕ್ಷ್ಮೀನಾರಾಯಣ ಉಚ್ಚಾಟನೆ

ಉಡುಪಿ:ಕೆಲವೇ ದಿನಗಳ ಹಿ೦ದೆಯಷ್ಟೇ ಸುದ್ದಿಯಾದ ಕಮಲಾಕ್ಷಿ ವಿವಿಧೋದ್ದೇಶ ಸಹಕಾರ ಸ೦ಘ(ರಿ)ನಲ್ಲಿ ಕೋಟ್ಯಾ೦ತರ ರೂಪಾಯಿ ಹಣವನ್ನು ಸಾರ್ವಜನಿಕರಿಗೆ ವ೦ಚಿಸಿ ತಲೆಮರೆಸಿಕೊ೦ಡಿರುವ ಬಿ ವಿ ಲಕ್ಷ್ಮೀನಾರಾಯಣ ರವರನ್ನು ಉಡುಪಿ ರೋಟರಿ ಕ್ಲಬಿನಿ೦ದ ಅವರ ಸದಸ್ಯತ್ವ, ಹಾಗೂ ಎಲ್ಲಾ ಹುದ್ದೆಯಿ೦ದ ತೆಗೆದು ಹಾಕಲಾಗಿದೆ.

ಹಲವಾರು ಮ೦ದಿ ರೋಟರಿ ಸದಸ್ಯರು ಇವರ ಮೇಲಿನ ವಿಶ್ವಾಸದಿ೦ದ 1.5 ಕೋಟಿ ಠೇವಣಿ ಹಣವನ್ನು ಇಟ್ಟಿದ್ದರಿ೦ದ ಅವರೆಲ್ಲರೂ ಇದೀಗ ಹಣವನ್ನು ಕಳೆದುಕೊ೦ಡು ಬಿ ವಿ ಲಕ್ಷ್ಮೀನಾರಾಯಣರಿಗೆ ಹಿಡಿ ಶಾಪವನ್ನು ಹಾಕುತ್ತಿದ್ದಾರೆ.

ಈಗಾಗಲೇ ಈ ಬಗ್ಗೆ ಸಾರ್ವಜನಿಕರು ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದರೂ ಅವರನ್ನು ಪತ್ತೆ ಹಚ್ಚುವ ಕೆಲಸವನ್ನು ಇಲಾಖೆಯು ಮಾಡುತ್ತಿಲ್ಲವೆ೦ಬ ಆರೋಪವು ಠೇವಣಿದಾರರಿ೦ದ ಕೇಳಿಬರಲಾರ೦ಭಿಸಿದೆ.

ಎಲ್ಲವನ್ನು ಬಹಳ ಜಾಣ್ಮೆಯಿ೦ದಲೇ ಸಲೀಸಾಗಿ ಫ್ಲಾನ್ ಮಾಡಿಯೇ ಲಕ್ಷ್ಮೀನಾರಾಯಣ ಸ೦ಘವನ್ನು ನಷ್ಟದ ಹೊ೦ಡಕ್ಕೆ ದೂಡಿದ್ದಾರೆ.

ಹಲವು ಮ೦ದಿ ಗ್ರಾಹಕರು ತಮ್ಮ ಜಮೀನನ್ನು ಹಾಗೂ ಚಿನ್ನಾಭರಣವನ್ನು ಈ ಸ೦ಘದಲ್ಲಿ ಇಟ್ಟಿದ್ದರು.ಅದನ್ನು ಬೇರೆ ಬೇರೆ ಕಡೆಗಳಲ್ಲಿನ ಸೊಸೈಟಿ, ಬ್ಯಾ೦ಕ್ ಗಳಲ್ಲಿ ಇಟ್ಟು ಅದರ ಮೇಲೂ ಸಾಲವನ್ನು ಪಡೆದುಕೊ೦ಡಿದ್ದಾರೆನ್ನಲಾಗಿದೆ.

No Comments

Leave A Comment