
ಅಪ್ಪ-ಅಮ್ಮನ ಜಗಳ: 2 ವರ್ಷದ ಮಗುವನ್ನು ಮೊದಲ ಮಹಡಿಯಿಂದ ಎಸೆದ ತಂದೆ!
ನವದೆಹಲಿ: ಅಪ್ಪ ಅಮ್ಮನ ಜಗಳದಲ್ಲಿ ಕೂಸು ಬಡವಾಯ್ತು ಎಂಬ ಮಾತು ಗೊತ್ತೇ ಇದೆ. ಆದರೆ ಇತ್ತೀಚಿನ ದಿನಗಳಲ್ಲಿ ಮಕ್ಕಳು ಜೀವ ಕಳೆದುಕೊಳ್ಳುವ ಹಂತಕ್ಕೆ ಹೋಗುವುದು ಹೆಚ್ಚು ವರದಿಯಾಗ ತೊಡಗಿದೆ.
ವ್ಯಕ್ತಿಯೋರ್ವ ತನ್ನ ಪತ್ನಿಯೊಂದಿಗಿನ ಜಗಳದಲ್ಲಿ, ಮಗುವನ್ನು ಮೊದಲ ಮಹಡಿಯಿಂದ ಎಸೆದು 2 ವರ್ಷದ ಮಗನನ್ನು ಎಸೆದು ತಾನೂ ಜಿಗಿದಿರುವ ಘಟನೆ ಆಗ್ನೇಯ ದೆಹಲಿಯ ಕಲ್ಕಾಜಿ ಪ್ರದೇಶದಲ್ಲಿ ನಡೆದಿದೆ.
ಮಾನ್ ಸಿಂಗ್ ಎಂಬ ವ್ಯಕ್ತಿ ತನ್ನ ಮಗನನ್ನು ಮಹಡಿಯಿಂದ ಎಸೆದಿದ್ದು, ತಾನೂ ಜಿಗಿದಿದ್ದರ ಪರಿಣಾಮ ಇಬ್ಬರಿಗೂ ಗಂಭೀರ ಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಘಟನೆ ಶುಕ್ರವಾರದಂದು ರಾತ್ರಿ 10: 30 ಕ್ಕೆ ಈ ಘಟನೆ ನಡೆದಿದೆ. ವ್ಯಕ್ತಿಯ ಪತ್ನಿ ಪೂಜಾ, ತನ್ನ ಹಾಗೂ ತನ್ನ ಪತಿಯ ಸಂಬಂಧ ಕಡಿದುಹೋಗಿದ್ದು, ತಾನು ಅಜ್ಜಿಯ ಜೊತೆ ಮಗನೊಂದಿಗೆ ಜೀವಿಸುತ್ತಿರುವುದಾಗಿ ಹೇಳಿದ್ದಾರೆ.
ಸಂಜೆ 7 ಗಂಟೆಗೆ ತಾನಿದ್ದ ಮನೆಗೆ ಮತ್ತೇರಿದ ಸ್ಥಿತಿಯಲ್ಲಿ ಆಗಮಿಸಿದ ಪತಿ, ಜಗಳ ಆಡಲು ಪ್ರಾರಂಭಿಸಿದ್ದಾನೆ. ಈ ರೀತಿ ಜಗಳವಾಡುತ್ತಾ, ಮಗನನ್ನು ಮೊದಲ ಮಹಡಿ (21 ಅಡಿ ಎತ್ತರ) ದಿಂದ ಎಸೆದಿದ್ದಾನೆ, ಈ ಬಳಿಕ ತಾನೂ ಜಿಗಿದಿದ್ದಾನೆ.
307 ರ ಅಡಿಯಲ್ಲಿ ಹತ್ಯೆ ಯತ್ನ ಪ್ರಕರಣವನ್ನು ದಾಖಲಿಸಲಾಗಿದೆ.