Log In
BREAKING NEWS >
ಡಿ.7ರ ಗುರುವಾರದ೦ದು ಸಾಯಂಕಾಲ 4.00 ಘಂಟೆಗೆ ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನ ಗೋಕರ್ಣಮಠಾಧೀಶರ ಪ್ರಥಮ ಭೇಟಿ....

ಸಮಂತಾ, ಸಾಯಿ ಪಲ್ಲವಿ, ರಶ್ಮಿಕಾ, ದೀಪಿಕಾ ಪಡುಕೋಣೆಗೆ ಸ್ಯಾಂಡಲ್ ವುಡ್ ಕ್ವೀನ್ ಬೆಂಬಲ: ನಟಿ ರಮ್ಯಾ ಟ್ವೀಟ್ ನಲ್ಲಿ ಏನಿದೆ?

ಬೆಂಗಳೂರು: ರಾಜಕೀಯದ ನಂಟೂ ಹೊಂದಿರುವ ರಮ್ಯಾ, ಇದೀಗ ರಾಜಕೀಯದಿಂದ ದೂರಾಗಿ, ಮತ್ತೆ ಚಿತ್ರರಂಗದಲ್ಲಿ ತೊಡಗಿಕೊಂಡಿದ್ದಾರೆ. ಆದರೂ ಸಾಮಾಜಿಕ ವಿಷಯಗಳ ಬಗ್ಗೆ ನಿರ್ಭಿಡೆಯಿಂದ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಿರುತ್ತಾರೆ.

ಇದೀಗ ನಟಿ ದೀಪಿಕಾ ಪಡುಕೋಣೆ ‘ಪಠಾಣ್’ ಸಿನಿಮಾದ ಹಾಡೊಂದರಲ್ಲಿ ಕೇಸರಿ ಬಣ್ಣದ ಬಿಕಿನಿ ಧರಿಸಿದ್ದನ್ನು ಬಿಜೆಪಿಯ ಬೆಂಬಲಿಗರು, ಹಿಂದುಪರ ಸಂಘಟನೆಗಳು ವಿರೋಧಿಸಿವೆ. ‘ಪಠಾಣ್’ ಸಿನಿಮಾವನ್ನು ಬ್ಯಾನ್ ಮಾಡಬೇಕು ಎಂದು ಒತ್ತಾಯಿಸಿರುವುದರ ಜೊತೆಗೆ ದೀಪಿಕಾ ಪಡುಕೋಣೆ ವಿರುದ್ಧವೂ ವಾಗ್ದಾಳಿ ನಡೆಸಲಾಗುತ್ತಿದೆ. ಈ ಬಗ್ಗೆ ಟ್ವೀಟ್ ಮಾಡಿರುವ ರಮ್ಯಾ, ದೀಪಿಕಾ ಪಡುಕೋಣೆ ಸೇರಿದಂತೆ, ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಕ್ಕಾಗಿ ಟ್ರೋಲ್  ಒಳಗಾದ ಎಲ್ಲ ನಟಿಯರ ಪರವಾಗಿ ಮಾತನಾಡಿದ್ದಾರೆ.

ವಿಚ್ಛೇದನ ಪಡೆದಿದ್ದಾಗಿ ಸಮಂತಾರನ್ನು, ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಕ್ಕಾಗಿ ಸಾಯಿ ಪಲ್ಲವಿಯನ್ನು, ವ್ಯಕ್ತಿಯೊಬ್ಬರಿಂದ ದೂರಾಗಿದ್ದಕ್ಕಾಗಿ ರಶ್ಮಿಕಾರನ್ನು, ತೊಟ್ಟ ಬಟ್ಟೆಗಾಗಿ ದೀಪಿಕಾ ಪಡುಕೋಣೆಯನ್ನು ಟ್ರೋಲ್ ಮಾಡಲಾಗುತ್ತಿದೆ. ಇವರು ಮಾತ್ರವೇ ಅಲ್ಲದೆ ಇತರ ಅನೇಕ ಮಹಿಳೆಯರು ಅವರು ಮಾಡುವ ಹಲವು ವಿಷಯಕ್ಕಾಗಿ ದಿನವೂ ಟೀಕೆಗೆ ಒಳಗಾಗುತ್ತಲೇ ಇದ್ದಾರೆ. ಆಯ್ಕೆಯ ಸ್ವಾತಂತ್ರ್ಯ ಎಂಬುದು ಎಲ್ಲರ ಮೂಲಭೂತ ಹಕ್ಕು. ಮಹಿಳೆಯರು ತಾಯಿ ದುರ್ಗೆಯ ಸ್ವರೂಪ. ಈ ಸ್ತ್ರೀದ್ವೇಷದ ವಿರುದ್ಧ ನಾವು ಹೋರಾಡಲೇ ಬೇಕಿದೆ” ಎಂದಿದ್ದಾರೆ.

No Comments

Leave A Comment