Log In
BREAKING NEWS >
ಮಾರ್ಚ್ 8ರ೦ದು ಮಹಾಶಿವರಾತ್ರೆ-ಎಲ್ಲಾ ಈಶ್ವರ ದೇವಸ್ಥಾನಗಳಲ್ಲಿ ಭಜನಾ ಸ೦ಕೀರ್ತನೆ ಜರಗಲಿದೆ.....

ವಿದ್ಯೋದಯ ಪಬ್ಲಿಕ್ ಸ್ಕೂಲ್ ಉಡುಪಿ : ಕರ್ನಾಟಕ ಬ್ಯಾಂಕ್‍ನಿಂದ ಶಾಲಾ ಬಸ್ ಕೊಡುಗೆ

ಉಡುಪಿ ಡಿಸೆಂಬರ್ 5: ವಿದ್ಯೋದಯ ಟ್ರಸ್ಟ್ (ರಿ)ನ ಅಂಗಸಂಸ್ಥೆ ವಿದ್ಯೋದಯ ಪಬ್ಲಿಕ್ ಸ್ಕೂಲ್‍ಗೆ ಕರ್ನಾಟಕ ಬ್ಯಾಂಕ್ , ಮಂಗಳೂರು ಸಿ.ಎಸ್.ಆರ್. ಉಪಕ್ರಮವಾಗಿ ಶಾಲಾ ಬಸ್‍ನ್ನು ಕೊಡುಗೆಯಾಗಿ ನೀಡಿದೆ. ಕರ್ನಾಟಕ ಬ್ಯಾಂಕ್ ಮಂಗಳೂರಿನ ಜನರಲ್ ಮ್ಯಾನೇಜರ್ ವಿನಯ ಭಟ್ ಪಿ.ಜೆ ಇವರು ವಿದ್ಯೋದಯ ಟ್ರಸ್ಟ್ (ರಿ.)ನ ಕಾರ್ಯಾಧ್ಯಕ್ಷರಾದ ಎನ್. ನಾಗರಾಜ್ ಬಲ್ಲಾಳ್‍ರಿಗೆ ರೂ. 27 ಲಕ್ಷ ಮೌಲ್ಯದ ಶಾಲಾಬಸ್ ಹಸ್ತಾಂತರಿಸಿದರು.

ಬ್ಯಾಂಕ್‍ನ ಉಡುಪಿ ರೀಜನಲ್ ಆಫೀಸ್ ಅಸಿಸ್ಟೆಂಟ್ ಜನರಲ್ ಮ್ಯಾನೇಜರ್ ಆಗಿರುವ ರಾಜಗೋಪಾಲ್, ರಥಬೀದಿ ಶಾಖೆಯ ಮ್ಯಾನೇಜರ್ ರಾಘವೇಂದ್ರ ಭಟ್, ವಿದ್ಯೋದಯ ಟ್ರಸ್ಟ್ (ರಿ.)ನ ಕಾರ್ಯದರ್ಶಿ ಕೆ. ಗಣೇಶ್ ರಾವ್, ಕೋಶಾಧಿಕಾರಿ ಪದ್ಮರಾಜ ಆಚಾರ್ಯ ಮತ್ತು ವಿದ್ಯೋದಯ ಪಬ್ಲಿಕ್ ಸ್ಕೂಲ್‍ನ ಪ್ರಾಂಶುಪಾಲೆ ಶ್ರೀಮತಿ ಅನಿತಾ ಪಿ. ರಾಜ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

No Comments

Leave A Comment