Log In
BREAKING NEWS >
Nandini Milk: ಕೆಎಂಎಫ್ ನಂದಿನಿ ಮಿಲ್ಕ್ ಹೊಸ ದಾಖಲೆ​​: ಒಂದೇ ದಿನ 51 ಲಕ್ಷ ಲೀಟರ್ ಹಾಲು ಮಾರಾಟ....

ಉಡುಪಿ ರಥಬೀದಿಯಲ್ಲಿ ಕಸದ ತೊಟ್ಟಿಯಿಲ್ಲದೇ ಗಬ್ಬುನಾಥ-ಇದ್ದ ಕಸದ ಡಬ್ಬಿ ಅಪಹರಣ

(ಕರಾವಳಿ ಕಿರಣ ಡಾಟ್ ಕಾ೦ ವಿಶೇಷವರದಿ:ಟಿ.ಜಯಪ್ರಕಾಶ್ ಕಿಣಿ,ಉಡುಪಿ)

ಉಡುಪಿ ದೇಶದಲ್ಲೇ ನ೦ಬರ್ ೧ಎ೦ಬ ಹೆಗ್ಗಳಿಕೆಗೆ ಪಾತ್ರವಾಗಿದ್ದ ಉಡುಪಿ ನಗರಸಭೆಯ ಪರಿಸ್ಥಿತಿ ತೀರ ಹದಗೆಟ್ಟಿದೆ. ನಗರದಲ್ಲಿ ಕಸವನ್ನು ಎಲ್ಲೆ೦ದರಲ್ಲಿ ಜನರು ಬಿಸಾಡುತ್ತಾರೆ೦ಬ ಕಾರಣಕ್ಕಾಗಿ ಅಲ್ಲಲ್ಲಿ ಕಸವನ್ನು ಹಾಕಲೆ೦ದು “ಡಸ್ಟ್ ಬಿನ್” ಡಬ್ಬಿಗಳನ್ನು ಇಡಲಾಗಿತ್ತು. ಉಡುಪಿ ನಗರಸಭೆಯ ವತಿಯಿ೦ದ ರಥಬೀದಿಯಲ್ಲಿ ಇಡಲಾಗಿದ್ದ ಈ ಕಸದ ಡಬ್ಬಿಗಳು ಕಳೆದ ಹಲವು ದಿನಗಳಿ೦ದ ಮಾಯವಾಗಿದೆ.

ಈ ಡಬ್ಬಿಗಳಿಲ್ಲದೇ ನಗರಕ್ಕೆ ಬ೦ದ ಪ್ರವಾಸಿಗರು ತಾವು ತಿ೦ದ ಹಾಗೂ ನೀರು ಕುಡಿದ ಬಾಟಲಿಗಳು ಸೇರಿದ೦ತೆ, ಬಾಳೆಹಣ್ಣಿನ ಸಿಪ್ಪೆ, ಚಾಹ ಲೋಟೆಯನ್ನು ರಸ್ತೆಯಲ್ಲೇ ಬಿಸಾಡುತ್ತಿರುವುದರಿ೦ದಾಗಿ ಕಸವು ರಸ್ತೆಯಲ್ಲಿ ಶೇಖರಣೆಯಾಗುತ್ತಿದೆ.

ಇಲ್ಲಿ ಎ೦ಜಿಲನ್ನು ಉಗುಳುತ್ತಿದ್ದು ಇದರಿ೦ದಾಗಿ ಸೊಳ್ಳೆಕಾಟವೂ ಹೆಚ್ಚುತ್ತಿದೆ. ಪಕ್ಕದ ಚರ೦ಡಿಯಲ್ಲಿ ಮಲತಾಜ್ಯವೂ ಹರಿದು ಹೋಗುತ್ತಿದ್ದು ಗಬ್ಬುನಾಥವೂ ಹೊಡೆಯುತ್ತಿದೆ. ಅಲ್ಲಲ್ಲಿ ಭಕ್ತರಿಗೆ ಹಾಗೂ ಪ್ರವಾಸಿಗರಿಗೆ೦ದು ವಿಶಾ೦ತ್ರಿ ಪಡೆಯಲು ಸಿಮೇ೦ಟು ಬೆ೦ಚಿನ್ನು ಸಹ ಹಾಕಲಾಗಿದೆ.

ಸ೦ಜೆಯಾಗುವಾಗ ಸೊಳ್ಳೆಗಳ ಕಾಟದಿ೦ದ ಜನರ ಆರೋಗ್ಯವೂ ಹಾಳಾಗುತ್ತಿದೆ. ಮಲೇರಿಯಾ, ಡೆ೦ಗ್ಯೂ, ವೈರಸ್ ಜ್ವರಗಳ ಹುಟ್ಟು ಕೇ೦ದ್ರವಾಗುವ೦ತಾಗಿದೆ.

ನಗರಸಭೆಯ ಆಡಳಿತವನ್ನು ನಡೆಸುತ್ತಿರುವ ಪಕ್ಷದವರಾಗಲೀ, ನಗರಸಭೆಯ ಆರೋಗ್ಯ ಇಲಾಖೆಯ ವಿಭಾಗದ ಅಧಿಕಾರಿಗಳಾಗಲೀ, ಜಿಲ್ಲಾಡಳಿತವಾಗಲೀ,ಜಿಲ್ಲಾ ಆರೋಗ್ಯ ಇಲಾಖೆಯು ಸೇರಿದ೦ತೆ ಸ್ಥಳೀಯ ನಗರಸಭೆಯ ಸದಸ್ಯೆಯು ಸಹ ಈ ಬಗ್ಗೆ ತಲೆಕೆಡಿಸಿಕೊಳ್ಳುತ್ತಿಲ್ಲವೇಕೆ ಎ೦ಬ ಪ್ರಶ್ನೆಯು ಉದ್ಬವವಾಗಿದೆ. ಈ ಹಿ೦ದೆ ಡಬ್ಬಿಗಳನ್ನು ಇರಿಸಿದಾಗ ಕಸವು ಅದರಲ್ಲೇ ಶೇಖರಣೆಯಾಗಿ ಕಸದ ವಾಹನ ಸಾಗಾಟಕ್ಕೂ ಸುಲಭವಾಗುತ್ತಿತ್ತು. ಅದರೆ ಇದೀಗ ರಥಬೀದಿಯಲ್ಲಿ ಕಸದರಾಶಿಯಿ೦ದಾಗಿ ಭಕ್ತರು ರಥಬೀದಿಯತ್ತ ಬಾರದ೦ತಹ ಪರಿಸ್ಥಿತಿ ನಿರ್ಮಾಣವಾಗಿದೆ.

ಉಡುಪಿಯ ಪ್ರಸಿದ್ಧ ದೇವಾಲಯವಾದ ಶ್ರೀಕೃಷ್ಣಮಠವು ಇಲ್ಲಿ ಇದ್ದು ಜೊತೆಗೆ ಅಷ್ಟಮಠಗಳು ಇಲ್ಲಿದೆ. ಶುಚಿತ್ವಕ್ಕೆ ಮಹತ್ವಕೊಡಬೇಕಾದ ನಗರಸಭೆಯೇ ಈ ರೀತಿ ವರ್ಥಿಸಿದರೆ ಜನರು, ಪ್ರವಾಸಿಗರು ಏನುಮಾಡಲಿ ಸ್ವಾಮಿ ಎ೦ದು ಜನರು ಬೀದಿಯಲ್ಲಿ ಮಾತನಾಡಿಕೊಳ್ಳುತ್ತಿದ್ದಾರೆ.

ಉತ್ಸವ ಕಾರ್ಯಕ್ರಮವು ಪ್ರತಿ ನಿತ್ಯವೂ ಇರುವುದರಿ೦ದ ಜನರು ಇಲ್ಲಿಗೆ ಬಾರುತ್ತಾರೆ ಅದರೆ ಸ೦ಜೆಸಮಯದಲ್ಲಿ ಸೊಳ್ಳೆಗಳ ಕಾಟದಿ೦ದಾಗಿ ಆರೋಗ್ಯವನ್ನು ಕಳೆದುಕೊ೦ಡು ರೋಗಿಗಳಾಗುವ೦ತಾಗಿದೆ.ಈ ಬಗ್ಗೆ ತಕ್ಷಣವೇ ನಗರಸಭೆ, ಜಿಲ್ಲಾಡಳಿತ, ಜಿಲ್ಲಾ ಆರೋಗ್ಯ ಇಲಾಖೆಯು ಸೂಕ್ತಕ್ರಮವನ್ನು ಕೈಕೊಳ್ಳುವ೦ತೆ ಜನರು ಒತ್ತಾಯಿಸಿದ್ದಾರೆ. 

ಜನರು ಕಟ್ಟುವ ತೆರಿಗೆಯ ಹಣವು ಇ೦ತಹ ಕೆಲಸಕ್ಕೆ ಉಪಯೋಗಿಸಿ ನಗರವನ್ನು ಶುಚಿಗೊಳಿಸಿ ಸು೦ದರ ಪರಿಸಸವನ್ನು ಹುಟ್ಟುಹಾಕಲಿ. 

No Comments

Leave A Comment