Log In
BREAKING NEWS >
...........ನಾಡಿನ ಸಮಸ್ತ ಜನತೆಗೆ,ನಮ್ಮ ಎಲ್ಲಾ ಜಾಹೀರಾತುದಾರರಿಗೆ,ಓದುಗರಿಗೆ,ಅಭಿಮಾನಿಗಳಿಗೆ "ಶ್ರೀರಾಮನವಮಿ"ಯ ಶುಭಾಶಯಗಳು.......

ಚೀನಾದಲ್ಲಿ ಮತ್ತೆ ಕೊರೋನಾ ಅಬ್ಬರ; ಒಂದೇ ದಿನದಲ್ಲಿ ಕೋವಿಡ್ ಕೇಸ್ ದಾಖಲೆಯ ಏರಿಕೆ, ಲಾಕ್ ಡೌನ್ ವಿಸ್ತರಣೆ

ಬೀಜಿಂಗ್: ಚೀನಾದಲ್ಲಿ ಮತ್ತೆ ಕೊರೋನಾ ಅಬ್ಬರ ಉಂಟಾಗಿದ್ದು, ಒಂದೇ ದಿನದಲ್ಲಿ ಕೋವಿಡ್-19 ಪ್ರಕರಣಗಳ ಸಂಖ್ಯೆ ದಾಖಲೆಯ ಏರಿಕೆ ಕಂಡಿದೆ. ಈ ಹಿನ್ನೆಲೆಯಲ್ಲಿ ಲಾಕ್ ಡೌನ್ ವಿಸ್ತರಣೆ ಮಾಡಲಾಗಿದೆ.

ಚೀನಾದಾದ್ಯಂತ ಪ್ಯಾಂಡಮಿಕ್ ಲಾಕ್ ಡೌನ್ ಗಳು ವಿಸ್ತರಣೆಯಾಗುತ್ತಿದ್ದು, ಚೀನಾದ ಅತಿ ದೊಡ್ಡ ಐಫೋನ್ ತಯಾರಕ ಕಾರ್ಖಾನೆಯಲ್ಲಿ ನೌಕರರು ಲಾಕ್ ಡೌನ್ ನಿಯಮಗಳನ್ನು ವಿರೋಧಿಸಿ ಪ್ರತಿಭಟನೆ ನಡೆಸಿದ್ದರು.

6.6 ಮಿಲಿಯನ್ ಜನರಿರುವ ಝೆಂಗ್ಝೌ ಎಂಬ ಪ್ರದೇಶದ 8 ಜಿಲ್ಲೆಗಳಲ್ಲಿನ ನಿವಾಸಿಗಳಿಗೆ 5 ದಿನಗಳ ಕಾಲ ಮನೆಯಲ್ಲಿಯೇ ಇರಲು ಸರ್ಕಾರ ಸೂಚಿಸಿದೆ. ಸ್ಥಳೀಯ ಆಡಳಿತ ಹೆಚ್ಚಿನ ಸಂಖ್ಯೆಯಲ್ಲಿ ಕೋವಿಡ್-19 ಸೋಂಕು ಪತ್ತೆ ಪರೀಕ್ಷೆ ನಡೆಸಲು ಸೂಚನೆ ನೀಡಿದೆ.

ಮಂಗಳವಾರ ಹಾಗೂ ಬುಧವಾರದಂದು ಝೆಂಗ್ಝೌ ನಲ್ಲಿರುವ ಅತಿ ದೊಡ್ಡ ಐಫೋನ್ ತಯಾರಿಕೆ ಕಾರ್ಖಾನೆಯಲ್ಲಿ ಲಾಕ್ ಡೌನ್ ವಿರೋಧಿಸಿ ಕಾರ್ಮಿಕರು ಪ್ರತಿಭಟನೆ ನಡೆಸಿದ್ದರು. ಈ ಪ್ರತಿಭಟನೆಯ ವೀಡಿಯೋ ವೈರಲ್ ಆಗತೊಡಗಿದೆ.

ಚೀನಾದಲ್ಲಿ ಕಳೆದ 24 ಗಂಟೆಗಳಲ್ಲಿ ಕೋವಿಡ್-19 ಪ್ರಕರಣಗಳು 31,444 ಕ್ಕೆ ಏರಿಕೆಯಾಗಿದ್ದು, 2019 ರಲ್ಲಿ ಚೀನಾದಲ್ಲಿ ಕೋವಿಡ್-19 ಸೋಂಕು ಕಾಣಿಸಿಕೊಂಡ ಬಳಿಕ ಮೊದಲ ಬಾರಿಗೆ ಕೋವಿಡ್-19 ಪ್ರಕರಣಗಳ ಸಂಖ್ಯೆ ದಾಖಲೆಯ ಪ್ರಮಾಣದಲ್ಲಿ ಏರಿಕೆ ಕಂಡಿದೆ.

No Comments

Leave A Comment