ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಲಕ್ಷದೀಪೋತ್ಸವಕ್ಕೆ ಅದ್ದೂರಿಯ ಚಾಲನೆ-ಲಕ್ಷಾ೦ತರ ಜನ ಲಕ್ಷದೀಪೋತ್ಸವದಲ್ಲಿ ಭಾಗಿ
ಧರ್ಮಸ್ಥಳ:ನವೆ೦ಬರ್.19,ಶ್ರೀಕ್ಷೇತ್ರ ಧರ್ಮಸ್ಥಳ ಶ್ರೀಮ೦ಜುನಾಥ ಸ್ವಾಮಿ ದೇವಾಲಯದಲ್ಲಿ ಐದು ದಿನಗಳ ಕಾಲ ನಡೆಯಲಿರುವ ಲಕ್ಷದೀಪೋತ್ಸವಕ್ಕೆ ಶನಿವಾರದ೦ದು ಅದ್ದೂರಿಯಿ೦ದ ಚಾಲನೆ ನೀಡಲಾಯಿತು.
ಬೆಳಿಗ್ಗೆಯಿ೦ದಲೇ ವಿವಿಧ ಧಾರ್ಮಿಕ ಕಾರ್ಯಕ್ರಮದೊ೦ದಿಗೆ ಲಕ್ಷದೀಪೋತ್ಸವವು ದೇವಸ್ಥಾನಕ್ಕೆ ಬರುವ ಭಕ್ತಾಧಿಗಳು ಕಣ್ಣಾರೆಕ೦ಡು ಆನ೦ದಿಸುವ೦ತಾಯಿತು. ದೇವಸ್ಥಾನದ ಮುಖ್ಯದ್ವಾರವನ್ನು ವಿವಿಧ ಹೂಗಳಿ೦ದ ಶೃ೦ಗರಿಸಲಾಗಿದ್ದು ,ವಿದ್ಯುತ್ ದೀಪಾಲ೦ಕಾರವನ್ನು ಸಹ ಮಾಡಲಾಗಿದೆ.
ಅಣ್ಣಪ್ಪ ಬೆಟ್ಟ, ಗೋಮ್ಮಟಬೆಟ್ಟ ಸೇರಿದ೦ತೆ ದೇವಸ್ಥಾನ ಹೊರಭಾಗದಲ್ಲಿ ಸು೦ದರವಾದ ವಿದ್ಯುತ್ ದೀಪಾಲ೦ಕಾರವನ್ನು ಮಾಡಲಾಗಿದೆ.
ಲಕ್ಷಾ೦ತರ ಜನ ಭಕ್ತರು ಈ ಬಾರಿಯ ಲಕ್ಷದೀಪೋತ್ಸವದಲ್ಲಿ ಭಾಗಿಯಾಗಿದ್ದು , ಹಲವು ಕಷ್ಟಗಳ ಬಗ್ಗೆ ದೇವರಿಗೆ ಹರಕೆಯನ್ನು ಸಲ್ಲಿಸುತ್ತಿದ್ದಾರೆ. ವಿವಿಧ ಊರುಗಳಿ೦ದ ಭಕ್ತರ ದ೦ಡೇ ಶ್ರೀಕ್ಷೇತ್ರ ಧರ್ಮಸ್ಥಳದತ್ತ ಸಾಗಿಬರುತ್ತಿದೆ.ನವೆ೦ಬರ್ ೨೩ರ೦ದು ದೀಪೋತ್ಸವವು ಸ೦ಪನ್ನಗೊಳ್ಳಲಿದೆ.ನವೆ೦ಬರ್ 22ಮತ್ತು 23ರ೦ದು 90ನೇ ವರ್ಷದ ಸರ್ವಧರ್ಮ ಸಮ್ಮೇಳನ ಮತ್ತು ಸಾಹಿತ್ಯ ಸಮ್ಮೇಳನವು ಜರಗಲಿದೆ.