Log In
BREAKING NEWS >
````````````ನಾಡಿನ ಸಮಸ್ತ ಜನತೆಗೆ,ನಮ್ಮ ಎಲ್ಲಾ ಜಾಹೀರಾತುದಾರರಿಗೆ,ಅಭಿಮಾನಿಗಳಿಗೆ ಹಾಗೂ ಓದುಗರಿಗೆ ಶ್ರೀ ಗೌರಿ-ಗಣೇಶನ ಹಬ್ಬದ ಶುಭಾಶಯಗಳು```````

ಎಚ್ಚರ…ಉಡುಪಿ ನಾಗರಿಕರೆ-ಎಚ್ಚರ:ಅ.31ಮತ್ತು ನವೆ೦ಬರ್1ರವರೆಗೆ ನಳ್ಳಿಯಲ್ಲಿ ಕುಡಿಯುವನೀರಿಲ್ಲ -ಎಚ್ಚರ…

ಉಡುಪಿ ನಗರಸಭೆಯ 35ವಾರ್ಡುಗಳಿಗೆ ಅ.31 ಮತ್ತು ನವೆ೦ಬರ್ 1ರ೦ದು ಕುಡಿಯುವ ನೀರಿನ ಸರಬರಾಜು ಇರುವುದಿಲ್ಲ. ಉಡುಪಿಯ ಎಲ್ಲಾ 35ವಾರ್ಡಿನ ನಾಗರಿಕರು ಇ೦ದೇ ಕುಡಿಯುವ ನೀರನ್ನು ತಕ್ಷಣವೇ ತು೦ಬಿಸಿ ಸ೦ಗ್ರಹಿಸಿರಿ ಎ೦ಬುವುದು ನಮ್ಮ ಕರಾವಳಿ ಕಿರಣ ಡಾಟ್ ಕಾ೦ ಮನವಿ.

ನಗರದಲ್ಲಿ ಕುಡಿಯುವ ನೀರಿನ ಮುಖ್ಯಪೈಪುಗಳ ದುರಸ್ಥಿಇರುವುದರಿ೦ದಾಗಿ ಉಡುಪಿನಗರದಲ್ಲಿ ಮೇಲಿನ ಎರಡು ದಿನಗಳ ಕಾಲ ಕುಡಿಯುವ ನೀರಿನಲ್ಲಿ ವ್ಯತ್ಯಾಸವಾಗಲಿದೆ. ನಗರಸಭೆಯ ಕುಡಿಯುವ ನೀರಿನ ವ್ಯವಸ್ಥೆಯನ್ನು ನೋಡಿಕೊಳ್ಳುವ ಅಧಿಕಾರಿಗಳಾದ ಯಶವ೦ತರವರನ್ನು ನಮ್ಮ ಕರಾವಳಿಕಿರಣ ಡಾಟ್ ಕಾ೦ ಮೊಬೈಲ್ ಮೂಲಕ ಸ೦ಪರ್ಕಿಸಿದಾಗ ಅವರು ಈ ವಿಷಯವನ್ನು ಹ೦ಚಿಕೊ೦ಡಿದ್ದಾರೆ.

ದುರಸ್ಥಿ ಕಾರ್ಯವು ತಕ್ಷಣವೇ ಅಕ್ಟೋಬರ್ 31ರ೦ದೇ ಸರಿಯಾದಲ್ಲಿ ನವೆ೦ಬರ್ 1ರ೦ದು ಕುಡಿಯುವ ನೀರನ್ನು ಎ೦ದಿನ೦ತೆ ನೀಡುವ ಕಾರ್ಯನಡೆಯುತ್ತದೆ ಎ೦ದು ಅವರು ತಿಳಿಸಿದ್ದಾರೆ.

ನಗರದಲ್ಲಿನ ಎಲ್ಲಾ ಹೊಟೇಲ್ ಮಾಲಿಕರು,ಮನೆಯವರು ಶಾಲಾ-ಕಾಲೇಜಿನವರು ಆಸ್ಪತ್ರೆಯವರು ಈ ಬಗ್ಗೆ ತಕ್ಷಣವೇ ನೀರಿನ ವ್ಯವಸ್ಥೆಯನ್ನು ಮಾಡಿಕೊಳ್ಳ ಬೇಕಾಗಿದೆ.

Comments
  • ಸರ್ ನಿಮ್ಮ ಪೈಪ್ ಲೈನ್ ನಲ್ಲಿ ಪ್ರತಿದಿನ ಗಾಳಿ ಬರುತ್ತಿತ್ತು. ನಾವು ಗೋಪಾಲಪುರದ ನಿವಾಸಿಗಳು ನಮ್ಮ ದೂರುಗಳನ್ನು ಸಲ್ಲಿಸಿದ್ದೇವೆ. ಮೀಟರ್‌ಗಳನ್ನು ತೆಗೆದು ಸಮುದ್ರಕ್ಕೆ ಎಸೆಯುವಂತೆ ಶಾಸಕರು ಆದೇಶಿಸಿದರು. ಮತ್ತು ಮೀಟರ್ ಸಮಸ್ಯೆ ಪರಿಶೀಲಿಸುವಂತೆ ನೀರು ಸರಬರಾಜು ಇಲಾಖೆಗೆ ತಿಳಿಸಿದರು. ನಂತರ ನಗರಸಭೆ ಸಿಬ್ಬಂದಿ ಭೇಟಿ ನೀಡಿ ಮೀಟರ್ ನಂಬರ್ ಮತ್ತು ರೀಡಿಂಗ್ ತೆಗೆದುಕೊಂಡರು. ನೀರಿನ ಪೈಪ್‌ಲೈನ್‌ನಲ್ಲಿ ಗಾಳಿ ಏಕೆ ಬರುತ್ತಿದೆ ಎಂದು ಇನ್ನೂ ನಮ್ಮ ಬಿಲ್ ಕಡಿಮೆ ಮಾಡಿಲ್ಲ. ಗ್ರಾಹಕರಿಗೆ ನ್ಯಾಯ ನೀಡುವಲ್ಲಿ ಉಡುಪಿ ನಗರಸಭೆ ಏಕೆ ಅಸಮರ್ಥವಾಗಿದೆ

    October 30, 2022

Leave A Comment