Log In
BREAKING NEWS >
ಉಡುಪಿ ನಗರದಲ್ಲಿನ ಗ್ರಾಹಕರ ಅಚ್ಚುಮೆಚ್ಚಿನ ಪ್ರಸಿದ್ಧ ಜವಳಿಮಳಿಗೆಯಾದ "ಕಲ್ಸ೦ಕ ಗಿರಿಜಾ ಸಿಲ್ಕ್"ನಲ್ಲಿ ಗ್ರಾಹಕರಿಗಾಗಿ ಜೂನ್ 1ರಿ೦ದ ಮಳೆಗಾಲದ ಮಹೋನ್ನತ ಭಾರೀ ರಿಯಾಯಿತಿ ದರದಲ್ಲಿ ವಸ್ತ್ರಗಳ ಮಾರಾಟ ಆರ೦ಭ.

ಕನ್ನಡಿಗರ ಮುಂದೆ ‘ಗಂಧದ ಗುಡಿ’ ಪ್ರದರ್ಶನ, ಪ್ರೀತಿಯಿಂದ ಅಪ್ಪಿ-ಒಪ್ಪಿದ ಜನತೆ, ಹೌಸ್ ಫುಲ್ ಪ್ರದರ್ಶನ

ಕನ್ನಡಿಗರ ಪ್ರೀತಿಯ ಪವರ್ ಸ್ಟಾರ್, ಅಭಿಮಾನಿಗಳ ಪಾಲಿನ ಅಪ್ಪು ಸಹಜವಾಗಿ ನಟಿಸಿದ ಕೊನೆಯ ಚಿತ್ರ ‘ಗಂಧದ ಗುಡಿ’ (Gandhada Gudi)ಇಂದು ಶುಕ್ರವಾರ ಬಿಡುಗಡೆಯಾಗಿದ್ದು ಎಲ್ಲೆಡೆ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ. ಬೆಳಗ್ಗೆ 6 ಗಂಟೆಯಿಂದಲೇ ಥಿಯೇಟರ್ ಗಳ ಮುಂದೆ ಜನಸಾಗರ ಸೇರಿದೆ.

ಪುನೀತ್ ರಾಜ್ ಕುಮಾರ್(Puneet Rajkumar) ಅವರ ಬಹುನಿರೀಕ್ಷಿತ ಸಾಕ್ಷ್ಯಚಿತ್ರ ಕರ್ನಾಟಕದ 225ಕ್ಕೂ ಹೆಚ್ಚು ಥಿಯೇಟರ್ ಗಳಲ್ಲಿ ಬಿಡುಗಡೆಯಾಗಿದೆ. ಈಗಾಗಲೇ ಆನ್ ಲೈನ್ ನಲ್ಲಿ ಟಿಕೆಟ್ ಬುಕ್ಕಿಂಗ್ ಸೋಲ್ಡ್ ಔಟ್ ಆಗಿದೆ. 150 ಚಿತ್ರಮಂದಿರಗಳು,50-60 ಮಲ್ಟಿಪ್ಲೆಕ್ಸ್ ಗಳಲ್ಲಿ ಪರಮಾತ್ಮನ ದರ್ಶನವಾಗಿದೆ. ಅಪ್ಪು ತಮ್ಮ ಕೊನೆಯ ಚಿತ್ರದಲ್ಲಿ ಕನ್ನಡ ನಾಡು, ನುಡಿಯ ಮಹತ್ವ ಸಾರಿದ್ದಾರೆ.

ಬೆಂಗಳೂರಿನ ಅನೇಕ ಥಿಯೇಟರ್ ಗಳ ಮುಂದೆ ಜನಸಾಗರ ಸೇರಿದೆ. ಅಭಿಮಾನಿಗಳು ಜಾತ್ರೆಯಂತೆ, ಹಬ್ಬದ ರೀತಿಯಲ್ಲಿ ತಮ್ಮ ನೆಚ್ಚಿನ ನಟನ ಚಿತ್ರವನ್ನು ಆಚರಿಸುತ್ತಿದ್ದಾರೆ. ಡಾ ರಾಜ್ ಕುಮಾರ್ ಕುಟುಂಬಸ್ಥರು ಸಹ ಅಭಿಮಾನಿಗಳ ಜೊತೆ ಸಂತೋಷದಲ್ಲಿ ಭಾಗಿಯಾಗಿದ್ದಾರೆ.

ಅಪ್ಪು ನಟಿಸಿದ ಕೊನೆಯ ಚಿತ್ರ ಗಂಧದ ಗುಡಿ ಫಸ್ಟ್ ಡೇ ಫಸ್ಟ್ ಶೋ ನೋಡ್ಬೇಕು ಎಂಬ ಧಾವಂತದಲ್ಲಿ ಅಭಿಮಾನಿಗಳು ಥಿಯೇಟರ್ ಮುಂದೆ ಜಮಾಯಿಸುತ್ತಿದ್ದಾರೆ. ಇಂದಿನ ಬಹುತೇಕ ಎಲ್ಲಾ ಟಿಕೆಟ್​ಗಳು ಸೋಲ್ಡ್​ ಆಗಿವೆ. ಈಗಾಗಲೇ ಪ್ರೀಮಿಯರ್ ಶೋಗೆ ಅದ್ಭುತವಾದ ರೆಸ್ಪಾನ್ಸ್ ಸಿಕ್ಕಿದ್ದು, ಇದು ಅಭಿಮಾನಿಗಳ ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿದೆ.

ಕಂಠೀರವ ಸ್ಟುಡಿಯೋ ಬಳಿ ರಸ್ತೆಯುದ್ದಕ್ಕೂ ಕಟೌಟ್ ಗಳು 
ಇತ್ತ ಕಂಠೀರವ ಸ್ಟುಡಿಯೋ ಬಳಿ ರಸ್ತೆಯುದ್ದಕ್ಕೂ ಪುನೀತ್ ರಾಜ್​ಕುಮಾರ್ ಅವರ 40ಕ್ಕೂ ಅಧಿಕ ಕಟೌಟ್ ಗಳು ರಾರಾಜಿಸುತ್ತಿವೆ. ಒಂದೊಂದು ಕಟೌಟ್ 30 ಅಡಿ ಎತ್ತರವಿದ್ದು, ಎಲ್ಲ ಕಟೌಟ್ ಗೆ ದೊಡ್ಡ ದೊಡ್ಡ ಹೂವಿನ ಹಾರ ಹಾಕಿ ಅಲಂಕರಿಸಲಾಗಿದೆ. ಅಪ್ಪು ಕಟೌಡ್​ಗಳು ನೋಡುಗರ ಕಣ್ಮನ ಸೆಳೆಯುತ್ತಿವೆ.

ಚಿತ್ರಮಂದಿರದ ಬಳಿ ನೆರೆದ ಅಪ್ಪು ಫ್ಯಾನ್ಸ್
ಚಿತ್ರಮಂದಿರದ ಬಳಿ ಬಂದಿರುವ ಸಾವಿರಾರು ಅಪ್ಪು ಫ್ಯಾನ್ಸ್ ಪಟಾಕಿ ಸಿಡಿಸಿ ಗಂಧದಗುಡಿ ಚಿತ್ರವನ್ನು ವೆಲ್ ಕಮ್ ಮಾಡುತ್ತಿದ್ದಾರೆ. ಅಲ್ಲದೇ ಪರದೆ ಮೇಲೆ ಪುನೀತ್ ರಾಜ್ ಕಂಡು ಶಿಳ್ಳೆ ಹಾಕಿ ಕಣ್ತುಂಬಿದ್ದಾರೆ. ಮತ್ತೊಂದೆಡೆ ಅಪ್ಪು ಕಟ್ಔಟ್ ಅಭಿಮಾನಿಗಳು ಆರತಿಯನ್ನೂ ಬೆಳಗಿದ್ದಾರೆ. ಕಾಯಿ ಒಡೆದು ಅಪ್ಪುಗೆ ಜೈಕಾರ ಹಾಕಿದ್ದಾರೆ.

ಪ್ರೀಮಿಯರ್ ಶೋ: ಕಳೆದ ರಾತ್ರಿ ಬೆಂಗಳೂರಿನಲ್ಲಿ ಗಂಧದ ಗುಡಿ ಚಿತ್ರದ ಪ್ರೀಮಿಯರ್ ಶೋ ಏರ್ಪಡಿಸಲಾಗಿತ್ತು. ನಟರಾದ ರಿಷಬ್ ಶೆಟ್ಟಿ, ರಕ್ಷಿತ್ ಶೆಟ್ಟಿ, ನಟಿ ರಮ್ಯಾ, ಇನ್ಫೋಸಿಸ್ ಸುಧಾಮೂರ್ತಿ ಸೇರಿದಂತೆ ಹಲವರು ಭಾಗಿಯಾಗಿದ್ದರು.

No Comments

Leave A Comment