Log In
BREAKING NEWS >
ಮಾ.28ರ೦ದು ಸ೦ಜೆ 6.30ಕ್ಕೆ ಪಣಿಯಾಡಿ ಶ್ರೀಅನ೦ತಾಸನ ಶ್ರೀಲಕ್ಷ್ಮೀಪದ್ಮನಾಭ ದೇವಸ್ಥಾನದ ವಠಾರದಲ್ಲಿ ಶ್ರೀಏಕದ೦ತ ಸೇವಾ ಸಮಿತಿ ಪಣಿಯಾಡಿ ಉದ್ಘಾಟನಾ ಸಮಾರ೦ಭ ಜರಗಲಿದೆ....

ಬಸವಲಿಂಗಶ್ರೀ ಆತ್ಮಹತ್ಯೆ ಪ್ರಕರಣ: ಇನ್ನೊಂದು ಡೆತ್​​ನೋಟ್​ ಇದೆ, SP ಸ್ಫೋಟಕ ಮಾಹಿತಿ

ರಾಮನಗರ: ವಿಡಿಯೋ ಮಾಡಿಸಿದ್ದವರು, ಲೀಕ್​ ಮಾಡಿದ್ದವರ ಬಗ್ಗೆ ಮತ್ತು ಶ್ರೀಗಳ ಆತ್ಮಹತ್ಯೆಗೆ ಪ್ರಚೋದನೆಗೆ ಕಾರಣರಾದವರ ಬಗ್ಗೆ ತನಿಖೆ ಮಾಡುತ್ತಿದ್ದೇವೆ. ಡೆತ್​​ನೋಟ್, ವಿಡಿಯೋ​ ಸೇರಿ ಎಲ್ಲ ಎವಿಡೆನ್ಸ್​​ ಸಂಗ್ರಹಿಸಿ ಪ್ರಕರಣದ ತನಿಖೆ ಮಾಡುತ್ತಿದ್ದೇವೆ. ಇನ್ನೊಂದು ಡೆತ್​​ನೋಟ್​ ಇದೆ ಎಂದು ನಮಗೆ ತಿಳಿದುಬಂದಿದೆ ಎಂದು ರಾಮನಗರ SP ಸಂತೋಷ್​ ಬಾಬು ಹೇಳಿದರು. ಈ ಬಗ್ಗೆ ತನಿಖೆ ಮಾಡಲು ನಾನು ಇನ್ಸ್​ಪೆಕ್ಟರ್​​ಗೆ ಸೂಚಿಸಿದ್ದೇನೆ. ಯಾರೇ ಭಾಗಿಯಾಗಿದ್ದರೂ ನಾವು ಕ್ರಮ ತೆಗೆದುಕೊಳ್ಳುತ್ತೇವೆ. ಈವರೆಗಿನ ವಿಚಾರಣೆಯಲ್ಲಿ ಲೇಡಿ ಬಗ್ಗೆ ಸಾಕ್ಷ್ಯಗಳು ದೊರೆತಿಲ್ಲ. ನಮಗೆ ಇದುವರೆಗೂ ಮೂರು ಪತ್ರಗಳು ದೊರೆತಿವೆ. ಒಟ್ಟು 6 ಪುಟಗಳ ಡೆತ್​​ನೋಟ್​​ನಲ್ಲಿ ನಮಗೆ 3 ಪುಟ ಸಿಕ್ಕಿವೆ. ಮಠದ ಸಿಬ್ಬಂದಿ ಕೈಯಲ್ಲಿ ಮತ್ತಷ್ಟು ಡೆತ್​​ನೋಟ್​ನ ಪುಟಗಳಿವೆ. ಸಂಜೆ ವೇಳೆಗೆ ಡೆತ್​ನೋಟ್​​ ಪುಟಗಳು ಪೊಲೀಸರ ಕೈಸೇರಲಿವೆ ಎಂದು ಹೇಳಿದರು. ಪ್ರಕರಣ ಕುರಿತಾಗಿ ಸಿಎಂ ಬಸವರಾಜ ಬೊಮ್ಮಾಯಿ ಬೆಂಗಳೂರಿನಲ್ಲಿ ಪ್ರತಿಕ್ರಿಯೆ ನೀಡಿದ್ದು, ಪ್ರಕರಣದ ತನಿಖೆ ನಡೆಯುತ್ತಿದೆ, ಈಗಲೇ ಏನು ಮಾತಾಡಲ್ಲ. ತನಿಖೆ ಮುಗಿದ ಬಳಿಕ ಸತ್ಯಾಸತ್ಯತೆ ತಿಳಿಯಲಿದೆ ಎಂದು ಹೇಳಿದರು. ಸ್ವಾಮೀಜಿ ಡೆತ್ ನೋಟ್​ನಲ್ಲಿ ಪ್ರಭಾವಿ ಸಚಿವರೊಬ್ಬರ ಹೆಸರಿದೆ ಎಂಬ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಅದನ್ನ ನೀವೆ ಹೇಳಬೇಕು. ಪ್ರಕರಣದ ತನಿಖೆ ನಡೆಯುತ್ತಿದೆ ಎಂದು ಹೇಳಿದರು.

ಬಸವಲಿಂಗ ಸ್ವಾಮೀಜಿ ಆತ್ಮಹತ್ಯೆಗೆ ಸಿಕ್ಕಿತಾ ಮೆಗಾ ಟ್ವಿಸ್ಟ್?

ಬಂಡೆಮಠದ ಬಸವಲಿಂಗ ಶ್ರೀ ಹನಿಟ್ರ್ಯಾಪ್​ಗೆ ಬಲಿಯಾದ್ರಾ ಎಂಬ ಶಂಕೆ ವ್ಯಕ್ತವಾಗಿದೆ. ಸಿ.ಡಿ.ಗಳಿಗೆ ಹೆದರಿ ಬಸವಲಿಂಗ ಸ್ವಾಮೀಜಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆಯಿದೆ. ಸಮಾಜದ ಮುಖಂಡನಿಂದಲೇ ಶ್ರೀಗಳ ವಿರುದ್ಧ ಮಸಲತ್ತು ನಡೆದಿತ್ತಾ? ಬೆಂಗಳೂರು ಮೂಲದ ಮಹಿಳೆಯನ್ನ ಬಳಸಿ ಹನಿಟ್ರ್ಯಾಪ್ ಮಾಡಲಾಗಿದೆಯಾ? ಕಷ್ಟ ಹೇಳಿಕೊಂಡು ಸ್ವಾಮೀಜಿ ಸ್ನೇಹ ಬೆಳೆಸಿದ್ದ ಆ ಮಹಿಳೆ, ಸ್ನೇಹದ ಬಳಿಕ ಸ್ವಾಮೀಜಿಯೊಂದಿಗೆ ಅನ್ಯೋನ್ಯತೆ ಬೆಳೆಸಿದ್ದಳು. ಬಸವಲಿಂಗ ಸ್ವಾಮೀಜಿ ಮಹಿಳೆಯ ಮಾತಿಗೆ ಮರುಳಾಗಿದ್ದರು. ಹಲವು ಬಾರಿ ಸ್ವಾಮೀಜಿ ಜೊತೆ ಮಹಿಳೆ ವಿಡಿಯೋ ಕಾಲ್ ಮಾಡಿದ್ದಾಳೆ. ಅದನ್ನು ವಿಡಿಯೋ ರೆಕಾರ್ಡಿಂಗ್ ಸಹ ಮಾಡಿಕೊಂಡಿದ್ದಾಳೆ ಎಂಬ ಮಾತುಗಳು ಕೇಳಿಬರುತ್ತಿವೆ.

ವಿಡಿಯೋ ಕಾಲ್ ಯುವತಿಗೆ ಪೊಲೀಸರಿಂದ ಗಾಳ:

ವಿಡಿಯೋ ಕಾಲ್ ಮಾಡಿರೋ ಯುವತಿಗೆ ಪೊಲೀಸರಿಂದ ಗಾಳ ಹಾಕಲಾಗಿದೆ. ಅಜ್ಞಾತ ‌ಸ್ಥಳದಲ್ಲಿ ಮೂವರು ಯುವತಿಯರ ವಿಚಾರಣೆ ನಡೆದಿದ್ದು, ಮೂವರನ್ನೂ ಪೊಲೀಸರು ಪ್ರತ್ಯೇಕವಾಗಿ ವಿಚಾರಣೆ ಮಾಡಿದ್ದಾರೆ. ಈ ಮಧ್ಯೆ, ಕುದೂರು ಠಾಣೆಯ ಪೊಲೀಸರು ಕಂಚುಗಲ್ ಬಂಡೆಮಠದ ಬಸವಲಿಂಗಶ್ರೀ ಆತ್ಮಹತ್ಯೆ ಪ್ರಕರಣದಲ್ಲಿ ವಿಚಾರಣೆ ತೀವ್ರಗೊಳಿಸಿದ್ದಾರೆ. ಈಗಾಗಲೇ ಕುದೂರು ಠಾಣೆಯಲ್ಲಿ ಐಪಿಸಿ‌ 306 ರ ಅಡಿ ಕೇಸ್ ಸ್ವಯಂಪ್ರೇರಿತ ಕೇಸ್ ದಾಖಲಿಸಿಕೊಂಡು ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.

ಪ್ರಾರಂಭದಲ್ಲಿ ‌ಯುಡಿಆರ್ ಮಾಡಿಕೊಂಡಿದ್ದ ಪೊಲೀಸರು, ಶಿಕ್ಷಕ ರಮೇಶ್ ದೂರಿನ ಆಧಾರದ ಮೇಲೆಯೂ UDR ದಾಖಲು ಮಾಡಿದ್ದಾರೆ. ಇನ್ಸ್​ಪೆಕ್ಟರ್ ಎ.ಪಿ.ಕುಮಾರ್ ನೇತೃತ್ವದಲ್ಲಿ ತನಿಖೆ ನಡೆದಿದ್ದು ಶ್ರೀಗಳ ಕಾಲ್ ಡಿಟೇಲ್ಸ್​​​ ಪಡೆಯಲು ಮುಂದಾಗಿದ್ದಾರೆ. ತನಿಖಾ ವರದಿ ನಂತರ ಮತ್ತಷ್ಟು ಮಾಹಿತಿ ಹೊರಬೀಳುವ ಸಾಧ್ಯತೆಯಿದೆ. ಯಾರೆಲ್ಲ ವಿಡಿಯೋ ಕಾಲ್ ಮಾಡಿದ್ದರೂ ಎಂಬುದನ್ನೂ ತಿಳಿದುಕೊಳ್ಳಲು ಪೊಲೀಸರು ಮುಂದಾಗಿದ್ದಾರೆ.

No Comments

Leave A Comment