Log In
BREAKING NEWS >
ಉಡುಪಿ ನಗರದಲ್ಲಿನ ಗ್ರಾಹಕರ ಅಚ್ಚುಮೆಚ್ಚಿನ ಪ್ರಸಿದ್ಧ ಜವಳಿಮಳಿಗೆಯಾದ "ಕಲ್ಸ೦ಕ ಗಿರಿಜಾ ಸಿಲ್ಕ್"ನಲ್ಲಿ ಗ್ರಾಹಕರಿಗಾಗಿ ಜೂನ್ 1ರಿ೦ದ ಮಳೆಗಾಲದ ಮಹೋನ್ನತ ಭಾರೀ ರಿಯಾಯಿತಿ ದರದಲ್ಲಿ ವಸ್ತ್ರಗಳ ಮಾರಾಟ ಆರ೦ಭ.

ಟಿ20 ವಿಶ್ವಕಪ್ 2022: ಆಸ್ಟ್ರೇಲಿಯಾ ವಿರುದ್ಧ ನ್ಯೂಜಿಲ್ಯಾಂಡ್ ಗೆ 89 ರನ್ ಗಳ ಭರ್ಜರಿ ಜಯ!

ಸಿಡ್ನಿ: ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಆಸೀಸ್ ವಿರುದ್ಧ ನ್ಯೂಜಿಲ್ಯಾಂಡ್ 89 ರನ್ ಗಳಿಂದ ಭರ್ಜರಿ ಜಯ ಗಳಿಸಿದೆ.

ಸಿಡ್ನಿಯಲ್ಲಿ ನಡೆದ ಗ್ರೂಪ್ 1 ಹಂತದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ನ್ಯೂಜಿಲ್ಯಾಂಡ್ ತಂಡ ಭರ್ಜರಿ ರನ್ ಕಲೆ ಹಾಕಿತ್ತು. ಡೆವೊನ್ ಕಾನ್ವೇ ಅಜೇಯ 92 ರನ್ ಹಾಗೂ ಫಿನ್ ಅಲೇನ್ 42 ರನ್ ಬಾರಿಸಿ ತಂಡಕ್ಕೆ ಉತ್ತಮ ಆರಂಭ ತಂದುಕೊಟ್ಟರು.

ಇನ್ನು ನಾಯಕ ಕೇನ್ ವಿಲಿಯಮ್ಸನ್ 23 ರನ್ ಗಳಿಸಿ ಔಟಾದರೆ, ಪಿಲಿಪ್ಸ್ 12 ಹಾಗೂ ಜೇಮ್ಸ್ ನೀಶಾಮ್ ಅಜೇಯ 26 ರನ್ ಗಳಿಸಿದ್ದು ನ್ಯೂಜಿಲ್ಯಾಂಡ್ ನಿಗದಿತ ಓವರ್ ನಲ್ಲಿ 3 ವಿಕೆಟ್ ನಷ್ಟಕ್ಕೆ 200 ರನ್ ಗಳಿಸಿತ್ತು. ನ್ಯೂಜಿಲ್ಯಾಂಡ್ ನೀಡಿದ 201 ರನ್ ಗಳ ಬೃಹತ್ ಮೊತ್ತ ಬೆನ್ನಟ್ಟಿದ ಆಸ್ಟ್ರೇಲಿಯಾ 111 ರನ್ ಗಳಿಗೆ ಆಲೌಟ್ ಆಗಿದ್ದು ಈ ಮೂಲಕ ನ್ಯೂಜಿಲ್ಯಾಂಡ್ ಗೆ 89 ರನ್ ಗಳಿಂದ ಶರಣಾಗಿದೆ.

ನ್ಯೂಜಿಲ್ಯಾಂಡ್ ಪರ ಬೌಲಿಂಗ್ ನಲ್ಲಿ ಟೀಮ್ ಸೌಥಿ ಮತ್ತು ಮಿಚೆಲ್ ಸ್ಯಾಂಟ್ನರ್ ತಲಾ 3 ವಿಕೆಟ್ ಪಡೆದಿದ್ದಾರೆ. ಟ್ರೆಂಟ್ ಬೌಲ್ಟ್ 2 ವಿಕೆಟ್ ಪಡೆದಿದ್ದರೆ, ಫೆರ್ಗ್ಯೂಸನ್ ಮತ್ತು ಸೋಧಿ ತಲಾ 1 ವಿಕೆಟ್ ಪಡೆದಿದ್ದಾರೆ.

No Comments

Leave A Comment