Log In
BREAKING NEWS >
ಕರಾವಳಿಯಲ್ಲಿ ಹೆಚ್ಚಿದ ಬಿಸಿಲಿನ ತಾಪಮಾನ-ಸಾವು ಸ೦ಭವಿಸುವ ಸಾಧ್ಯತೆ-ಎಚ್ಚರ ಬಿಸಿಲಿನಲ್ಲಿ ಹೊರಗೆ ಬರಲೇ ಬೇಡಿ....

ಧರ್ಮಸ್ಥಳ: ಸೂರ್ಯಗ್ರಹಣ ಹಿನ್ನೆಲೆ – ದರ್ಶನ ಸಮಯದಲ್ಲಿ ವ್ಯತ್ಯಯ

ಬೆಳ್ತಂಗಡಿ, ಅ 19: ಸೂರ್ಯಗ್ರಹಣ ಹಿನ್ನೆಲೆಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥ ಸ್ವಾಮಿ ದೇವಸ್ಥಾನದಲ್ಲಿ ಅ.25 ರಂದು ಭಕ್ತರಿಗೆ ದೇವರ ದರ್ಶನಕ್ಕೆ ಅವಕಾಶವಿಲ್ಲವೆಂದು ದೇವಸ್ಥಾನದ ಆಡಳಿತ ಮಂಡಳಿಯ ಪ್ರಕಟನೆ ತಿಳಿಸಿದೆ.

ಸೂರ್ಯಗ್ರಹಣದ ಪ್ರಯುಕ್ತ ಮಧ್ಯಾಹ್ನ 2.30 ರಿಂದ ರಾತ್ರಿ 7.30 ರ ವರೆಗೆ ದೇವರ ದರ್ಶನಕ್ಕೆ ಅವಕಾಶವಿರುವುದಿಲ್ಲ. ಇದರೊಂದಿಗೆ ಬೋಜನ ಪ್ರಸಾದವೂ ಮಧ್ಯಾಹ್ನ 2.30 ಕ್ಕೆ ಕೊನೆಗೊಂಡು ರಾತ್ರಿ 7.30 ರ ನಂತರವೇ ನಡೆಯಲಿದೆ.

ಅ.25 ರಂದು ಸಂಜೆ 5.11ಕ್ಕೆ ಗ್ರಹಣ ಸ್ವರ್ಶವಾಗಲಿದ್ದು, ಸಂಜೆ 6.28ಕ್ಕೆ ಗ್ರಹಣ ಮೋಕ್ಷವಾಗಲಿದೆ. ಅ. 26 ರಿಂದ ಎಂದಿನಂತೆ ದೇವರ ದರ್ಶನಕ್ಕೆ ಅವಕಾಶ ಇರಲಿದೆ.

No Comments

Leave A Comment