Log In
BREAKING NEWS >
Nandini Milk: ಕೆಎಂಎಫ್ ನಂದಿನಿ ಮಿಲ್ಕ್ ಹೊಸ ದಾಖಲೆ​​: ಒಂದೇ ದಿನ 51 ಲಕ್ಷ ಲೀಟರ್ ಹಾಲು ಮಾರಾಟ....

ಮಹಾರಾಷ್ಟ್ರದಲ್ಲಿ 6 ಹೊಸ ಪರಮಾಣು ವಿದ್ಯುತ್ ರಿಯಾಕ್ಟರ್‌ಗಳ ಸ್ಥಾಪನೆ

ನವದೆಹಲಿ: ದೇಶದಲ್ಲಿ ಪರಮಾಣು ಸ್ಥಾವರಗಳಿಂದ ವಿದ್ಯುತ್ ಉತ್ಪಾದನೆಯನ್ನು ಹೆಚ್ಚಿಸಲು ಜಂಟಿ ಸಹಯೋಗದೊಂದಿಗೆ ಮಹಾರಾಷ್ಟ್ರದ ರತ್ನಾಗಿರಿ ಜಿಲ್ಲೆಯ ಜೈತಾಪುರದಲ್ಲಿ ಆರು ಹೊಸ ಯುರೋಪಿಯನ್ ಪ್ರೆಶರೈಸ್ಡ್ ನ್ಯೂಕ್ಲಿಯರ್ ಪವರ್ ರಿಯಾಕ್ಟರ್‌ಗಳನ್ನು(ಎನ್‌ಪಿಆರ್) ಸ್ಥಾಪಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ.

ಈ ಬೃಹತ್ ಯೋಜನೆಗೆ ಸಂಬಂಧಿಸಿದಂತೆ, ಚೆರಿಸೌಲಾ ಜಚರೋಪೌಲೌ ನೇತೃತ್ವದ ಫ್ರೆಂಚ್ ನಿಯೋಗ  ಮಂಗಳವಾರ ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಮತ್ತು ಬಾಹ್ಯಾಕಾಶ, ಪರಮಾಣು ವಿದ್ಯುತ್ ಖಾತೆ  ರಾಜ್ಯ ಸಚಿವ ಡಾ ಜಿತೇಂದ್ರ ಸಿಂಗ್ ಅವರನ್ನು ಭೇಟಿ ಮಾಡಿದ್ದು, ತಾತ್ವಿಕ ಅನುಮೋದನೆ ನೀಡಲಾಗಿದೆ.

ಆರು ಪರಮಾಣು ಶಕ್ತಿ ರಿಯಾಕ್ಟರ್‌ಗಳು, ತಲಾ 1,650 ಮೆಗಾವ್ಯಾಟ್ ಸಾಮರ್ಥ್ಯ ಹೊಂದಿದ್ದು, ಫ್ರಾನ್ಸ್‌ನ ತಾಂತ್ರಿಕ ಸಹಕಾರದೊಂದಿಗೆ ಸ್ಥಾಪಿಸಲಾಗುತ್ತಿದೆ. ಇದು ಒಟ್ಟು 9,900 ಮೆಗಾ ವ್ಯಾಟ್ ಸಾಮರ್ಥ್ಯದೊಂದಿಗೆ ಭಾರತದ ಅತಿದೊಡ್ಡ ಪರಮಾಣು ವಿದ್ಯುತ್ ಉತ್ಪಾದನಾ ತಾಣವಾಗಲಿದೆ.

“ಪರಮಾಣು ವಿದ್ಯುತ್ ರಿಯಾಕ್ಟರ್‌ಗಳ ಸ್ಥಾಪನೆಯ ಕಾರ್ಯವನ್ನು ತ್ವರಿತಗೊಳಿಸುವ ಮಾರ್ಗಗಳ ಕುರಿತು ಫ್ರೆಂಚ್ ನಿಯೋಗ ಕೇಂದ್ರ ಸಚಿವರೊಂದಿಗೆ ಚರ್ಚಿಸಿದೆ. ಭಾರತದಲ್ಲಿರುವ ಫ್ರಾನ್ಸ್ ರಾಯಭಾರಿ ಎಮ್ಯಾನುಯೆಲ್ ಲೆನೈನ್ ಮತ್ತು ಪರಮಾಣು ಸಲಹೆಗಾರ ಥಾಮಸ್ ಮಿಯುಸೆಟ್ ಸೇರಿದಂತೆ ಇತರ ಫ್ರೆಂಚ್ ಅಧಿಕಾರಿಗಳು ಸಹ ಚರ್ಚೆಯಲ್ಲಿ ಪಾಲ್ಗೊಂಡಿದ್ದರು” ಎಂದು ಪರಮಾಣು ವಿದ್ಯುತ್ ಇಲಾಖೆ ತಿಳಿಸಿದೆ.

ಸೆಪ್ಟೆಂಬರ್ 2008 ರಲ್ಲಿ ಫ್ರಾನ್ಸ್‌ನೊಂದಿಗೆ ಸಹಿ ಹಾಕಲಾದ ಪರಮಾಣು ಒಪ್ಪಂದದ ಭಾಗವಾಗಿ 9900 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆಯ ಸಾಮರ್ಥ್ಯದೊಂದಿಗೆ ಫ್ರಾನ್ಸ್‌ನೊಂದಿಗೆ ತಾಂತ್ರಿಕ ಸಹಕಾರದೊಂದಿಗೆ ತಲಾ 1650 ಮೆಗಾವ್ಯಾಟ್‌ನ ಆರು ಪರಮಾಣು ರಿಯಾಕ್ಟರ್‌ಗಳನ್ನು ಸ್ಥಾಪಿಸಲು ಕೇಂದ್ರ ಸರ್ಕಾರ ಈಗಾಗಲೇ ತಾತ್ವಿಕ ಅನುಮೋದನೆಯನ್ನು ನೀಡಿದೆ ಎಂದು ಹೇಳಲಾಗಿದೆ.

No Comments

Leave A Comment