Log In
BREAKING NEWS >
"ಕರಾವಳಿಕಿರಣ ಡಾಟ್ ಕಾ೦"ನ ಎಲ್ಲಾ ಓದುಗರಿಗೆ,ಜಾಹೀರಾತುದಾರರಿಗೆ ಮತ್ತು ಅಭಿಮಾನಿಗಳಿಗೆ "ಶ್ರೀಅನ೦ತವೃತ"ದ ಶುಭಾಶಯಗಳು...

ಗುಜರಾತ್‌ನಲ್ಲಿ ಭಾರತ-ಪಾಕ್ ಗಡಿ ಬಳಿ ಹೊಸ ವಾಯುನೆಲೆ, 411 ರಕ್ಷಣಾ ಸಂಬಂಧಿತ ಸರಕುಗಳ ಸ್ಥಳೀಯ ಉತ್ಪಾದನೆ: ಪ್ರಧಾನಿ ಮೋದಿ

ಗಾಂಧಿನಗರ: ಭಾರತ ದೇಶ ಬದಲಾಗಿದ್ದು, ದೇಶವು ಬಹಳ ದೂರ ಸಾಗಿದೆ, ಮೊದಲು ನಾವು ಪಾರಿವಾಳಗಳನ್ನು ಬಿಡುತ್ತಿದ್ದೆವು, ಈಗ ನಾವು ಚೀತಾಗಳನ್ನು ಬಿಡುತ್ತೇವೆ ಎಂದು ಪ್ರಧಾನಿ ನರೇಂದ್ರ ಮೋದಿ ಬುಧವಾ ಹೇಳಿದ್ದಾರೆ.

ಭಾರತ-ಪಾಕಿಸ್ತಾನ ಗಡಿಯ ಸಮೀಪ ಉತ್ತರ ಗುಜರಾತ್‌ನಲ್ಲಿ ಹೊಸ ವಾಯುನೆಲೆಗೆ ಬುಧವಾರ ಶಂಕುಸ್ಥಾಪನೆ ನೆರವೇರಿಸಿದ ಪ್ರಧಾನಿ ಮೋದಿ, ಈ ಕೇಂದ್ರ ದೇಶದ ಭದ್ರತೆಗೆ ಪರಿಣಾಮಕಾರಿ ಕೇಂದ್ರವಾಗಿ ಹೊರಹೊಮ್ಮಲಿದೆ ಎಂದು ಹೇಳಿದರು.

ಗುಜರಾತ್ ರಾಜಧಾನಿ ಗಾಂಧಿನಗರದಲ್ಲಿ ಡಿಫೆನ್ಸ್ ಎಕ್ಸ್‌ಪೋ 2022 ಅನ್ನು ಉದ್ಘಾಟಿಸಿದ ನಂತರ ಮಾತನಾಡಿದ ಪ್ರಧಾನಿ ಮೋದಿ, ರಕ್ಷಣಾ ಪಡೆಗಳು ಆಮದು ಮಾಡಿಕೊಳ್ಳಲಾಗದ ಇನ್ನೂ 101 ವಸ್ತುಗಳ ಪಟ್ಟಿಯನ್ನು ಬಿಡುಗಡೆ ಮಾಡುವುದಾಗಿ ಹೇಳಿದರು. ಇದರೊಂದಿಗೆ 411 ರಕ್ಷಣಾ ಸಂಬಂಧಿತ ಸರಕುಗಳನ್ನು ಸ್ಥಳೀಯವಾಗಿ ಮಾತ್ರ ಖರೀದಿಸಬಹುದಾಗಿದೆ ಎಂದರು.

 “ಇದು ಭಾರತೀಯ ರಕ್ಷಣಾ ಉದ್ಯಮಕ್ಕೆ ಪ್ರಮುಖ ಉತ್ತೇಜನವನ್ನು ನೀಡುತ್ತದೆ. ಇದು ಅಭೂತಪೂರ್ವ ಡಿಫೆಕ್ಸ್‌ಪೋ ಆಗಿದ್ದು, ಭಾರತೀಯ ಕಂಪನಿಗಳು ಮಾತ್ರ ಮೊದಲ ಬಾರಿಗೆ ಇದರಲ್ಲಿ ಭಾಗವಹಿಸುತ್ತಿವೆ. ಉತ್ತರದ ಬನಸ್ಕಾಂತದಲ್ಲಿರುವ ದೀಸಾದಲ್ಲಿ ಏರ್ ಬೇಸ್ ಬರಲಿದೆ. ಗುಜರಾತ್ ದೇಶದ ಭದ್ರತೆಗೆ ಪರಿಣಾಮಕಾರಿ ಕೇಂದ್ರವಾಗಿ ಹೊರಹೊಮ್ಮಲಿದೆ. ಕಳೆದ ಕೆಲವು ವರ್ಷಗಳಲ್ಲಿ ಭಾರತೀಯ ರಕ್ಷಣಾ ಉತ್ಪನ್ನಗಳ ರಫ್ತು 8 ಪಟ್ಟು ಹೆಚ್ಚಾಗಿದೆ ಎಂದು ಅವರು ಹೇಳಿದರು.

ಅಂತೆಯೇ  “ಮೊದಲು ನಾವು ಪಾರಿವಾಳಗಳನ್ನು ಬಿಡುತ್ತಿದ್ದೆವು ಮತ್ತು ಈಗ ನಾವು ಚೀತಾಗಳನ್ನು ಬಿಡುತ್ತೇವೆ” ಎಂದು ದೇಶವು ಬಹಳ ದೂರ ಸಾಗಿದೆ ಎಂದು ಅವರು ಹೇಳಿದರು.

No Comments

Leave A Comment