Log In
BREAKING NEWS >
ಎಲ್ಲೆಡೆಯಲ್ಲಿ ಶಾ೦ತಿಯುತವಾಗಿ ವಿಜೃ೦ಭಣೆಯ ಹನುಮಾನ್ ಜಯ೦ತಿ ಆಚರಣೆ.....

ಸಾ.ರಾ. ಮಹೇಶ್‌ ಜೊತೆ ರಾಜಿಗೆ ಯತ್ನ: ರೋಹಿಣಿ ಸಿಂಧೂರಿಗೆ ಪ್ರಶ್ನೆಗಳ ಸುರಿಮಳೆ ಸುರಿಸಿದ ಐಪಿಎಸ್ ಅಧಿಕಾರಿ ಡಿ.ರೂಪಾ

ಮೈಸೂರು: ಐಎಎಸ್‌ ಅಧಿಕಾರಿ ರೋಹಿಣಿ ಸಿಂಧೂರಿ ಶಾಸಕ ಸಾ.ರಾ ಮಹೇಶ್ ಅವರ ವಿರುದ್ಧ ಭೂ ಕಬಳಿಕೆ ಆರೋಪವನ್ನು ಮಾಡಿದ್ದರು. ಇದಕ್ಕೆ ಪ್ರತ್ಯುತ್ತರವಾಗಿ ಸಾ.ರಾ ಮಹೇಶ್ ಅವರು ಕೂಡ ಪ್ರತಿಕ್ರಿಯೆಗಳನ್ನು ನೀಡುತ್ತಾ ಬರುತ್ತಿದ್ದರು. ಇಬ್ಬರ ನಡುವಿನ ಜಟಾಪಟಿ ಇಡೀ ರಾಜ್ಯದ ಗಮನವನ್ನು ಸೆಳೆದಿತ್ತು. ಸದ್ಯ ಈ ಜಟಾಪಟಿಗೆ ಹೊಸ ಬೆಳವಣಿಗೆಯೊಂದು ನಡೆದಿದೆ.

ಐಎಎಸ್​​ ಅಧಿಕಾರಿ ರೋಹಿಣಿ ಸಿಂಧೂರಿ, ಮಾಜಿ ಸಚಿವ ಸಾ.ರಾ ಮಹೇಶ್​ ಅವರ ಜೊತೆಗೆ ಸಂಧಾನಕ್ಕೆ ಮುಂದಾಗಿದ್ದಾರೆಂದು ಹೇಳಲಾಗುತ್ತಿದೆ. ಈ ಕುರಿತ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

  • ಡಿ ಮಾಡಿದ ಸರ್ಕಾರದ ವಿರುದ್ಧ ಸೆಂಟ್ರಲ್ ಅಡ್ಮಿನಿಸ್ಟ್ರೇಟಿವ್ ಟ್ರಿಬ್ಯುನಲ್ (ಸಿಎಟಿ) ಇಲ್ಲಿ ದಾವೆ ಹೂಡಿದರು. ಆ ದಾವೆಗೆ ಅರ್ಜಿ ಬರೆದು ಕೊಟ್ಟಿದ್ದೇ ನನ್ನ ಪತಿ ಐಎಎಸ್​ ಮುನೀಶ್ ಮೌದ್ಗಿಲ್. ನನ್ನೆದುರಿಗೆ ಬರೆದು ಬರೆದು ಆಕೆಗೆ, ಆಕೆಯ ತಂದೆಗೆ, ಲಾಯರ್​ಗೆ ಕಳಿಸಿದ್ದರು. ಆದರೆ ಈಕೆ ಮೈಸೂರು ಡಿಸಿ ಆಗಿ ಹೋದದ್ದು ಹೇಗೆ? ತನಗಿಂತ ಕೇವಲ 29 ದಿನ ಮುಂಚೆ ಮೈಸೂರಿಗೆ ಡಿಸಿ ಎಂದು ವರ್ಗಾವಣೆ ಆಗಿದ್ದ ಕನ್ನಡ ಹುಡುಗ ಶರತ್ ಅವರನ್ನು ಒಕ್ಕಲೆಬ್ಬಿಸಿದ್ದು ನ್ಯಾಯವೇ? ತನ್ನಂತೆ ಪರರು ಎಂಬ ಭಾವನೆ ಇಲ್ಲವೇಕೆ? 29 ದಿನದಲ್ಲಿ ಯಾವುದೇ ಕಳಂಕ, ಆರೋಪ ಇಲ್ಲದ ಶರತ್​ರನ್ನು ರಿಪ್ಲೇಸ್ ಮಾಡಿದ್ದು ಈಕೆ ಯಾವ ಉನ್ನತ ಮಟ್ಟದ ಪ್ರಭಾವ ನಿಂದಾ?

  • ಐಎಎಸ್​ ಡಾ. ರವಿಶಂಕರ್ ಈಕೆಯ ಮೇಲೆ ಪ್ರಿಲಿಮಿನರಿ ತನಿಖೆಯಲ್ಲಿ ತಪ್ಪು ಮಾಡಿರುವುದು ಸಾಬೀತಾಗಿದೆ. ಮೈಸೂರಿನ ಡಿಸಿ ಮನೆ, ಹೆರಿಟೇಜ್ ಬಿಲ್ಡಿಂಗ್ ಅಂತಾ ಇದ್ದರೂ ಅಲ್ಲಿ ಟೈಲ್ಸ್ ಹಾಕಿದ್ದು, ಸ್ವಿಮ್ಮಿಂಗ್ ಪೂಲ್ ಮಾಡಿದ್ದು. ಮನುಷ್ಯತ್ವ ಇರೋರು ಕೊರೊನಾ ಸಮಯದಲ್ಲಿ ಜನ ಸಾಯುತ್ತಿರುವಾಗ ಸ್ವಿಮ್ಮಿಂಗ್ ಪೂಲ್ ಕಟ್ಟಿಸಿಕೊಳ್ತಾರ? ರೋಮ್ ಹೊತ್ತಿ ಉರಿಯುತ್ತಿದ್ದಾಗ ಜಾನ್ ಪಿಟೀಲು ಬಾರಿಸುತ್ತಿದ್ದ ಅಂದ ಹಾಗೆ. ಮೇರಿ ಅಂಟೋನೆಟ್ ಎಂಬ ರಾಣಿ, ಜನರು ಬ್ರೆಡ್​ ಇಲ್ಲದೆ ಸಾಯ್ತಿದ್ದಾರೆ ಅಂತ ಕೇಳಿಸಿಕೊಂಡಾಗ , ಬ್ರೆಡ್​ ಇಲ್ಲದೆ ಇದ್ದರೆ ಏನು, ಜನರು ಕೇಕ್​ ತಿನ್ನಲಿ ಅಂದಳಂತೆ. ಆ ರಾಣಿಯ ನೆನಪಾಯ್ತು.

  • ಹಿಂದೆ ನನಗೆ ಒಬ್ಬರು ವಾಟ್ಸ್​ಆ್ಯಪ್​ ಮೆಸೇಜ್ ಮಾಡಿ ತಾವು ಇವರ ಪರವಾಗಿ ನಡೆಸುವ ಸೋಷಿಯಲ್ ಮೀಡಿಯಾ ಒಂದರಲ್ಲಿ ಕೆಲಸ ಮಾಡಿದ್ದು, ಈಗ ಆ ಕೆಲಸ ಬಿಟ್ಟಿದ್ದೇನೆ ಎಂದು ಹೇಳುತ್ತ, ಹೇಗೆ ಅಲ್ಲಿ ಈಕೆಯ ಪರವಾಗಿ ಸುದ್ದಿ, ಫೋಟೋ, ವಿಡಿಯೋಗಳು ಕ್ರಿಯೇಟ್​ ಮಾಡುತ್ತಾರೆ. ಹೇಗೆ ಈಕೆಯ ವಿರುದ್ಧ ಇರುವವರ ಟ್ರೋಲ್ ಮಾಡುವ ಕಂಟೆಂಟ್ ಲ್​ಗಳು ತಯಾರಾಗುತ್ತವೆ ಎಂಬುದು ಹೇಳಿದ್ದರು. ನಾನು ಅದನ್ನು ಫೇಸ್​ಬುಕ್​ನಲ್ಲಿಯೂ ಹಾಕಿದ್ದೆ.

  • ಈಕೆಯ ಮೇಲೆ ಅಗ್ಗದ ಬ್ಯಾಗ್​ಗಳನ್ನೂ ಅತಿ ಹೆಚ್ಚು ಬೆಲೆಗೆ ಮಾರಾಟ ಮಾಡಿರುವ ಕಂಪ್ಲೈಂಟ್ ಲೋಕಾಯುಕ್ತದಲ್ಲಿ ರಿಜಿಸ್ಟರ್​ ಆಗಿದೆ. ಅದರ ತನಿಖೆ ಕೈಗೆತ್ತಿಕೊಳ್ಳಲು ಲೋಕಾಯುಕ್ತ ಈಗಾಗಲೇ ಸರ್ಕಾರಕ್ಕೆ ಬರೆದಿದ್ದರೂ ಸರ್ಕಾರ ಮಟ್ಟದಲ್ಲಿ ಕಾರಣ ಕೊಡದೆ ಆಕೆಯನ್ನು ತನಿಖೆಗೆ ಒಳಪಡಿಸಲು ಅನುಮತಿ ನಿರಾಕರಣೆ ಮಾಡಲಾಗಿದೆ. ಅದರ ಕಾಪಿ ನನ್ನ ಬಳಿ ಇದೆ. ಸಾಮಾನ್ಯವಾಗಿ ಅಧಿಕಾರಿಗಳಿಗೆ ಈ ರೀತಿಯ ಸಪೋರ್ಟ್ ಇರುತ್ತದೆಯೇ?

  • ಈಕೆ ಕೆಲವು ಐಎಎಸ್ ಅಧಿಕಾರಿಗಳಿಗೆ ಒಂದಲ್ಲ, ಎರಡಲ್ಲ, ಅನೇಕರಿಗೆ ತನ್ನ ಅಶ್ಲೀಲ ಚಿತ್ರಗಳನ್ನು ಕಳಿಸಿರುವ ಹಾಗೂ ಅವರನ್ನು ಉತ್ತೇಜಿಸುವ ಕಾರ್ಯ ಮಾಡಿರುವ ಆಪಾದನೆ ಇದೆ. ಆ ಪಿಕ್ಸ್​ಗಳು ನನಗೆ ಸಿಕ್ಕಿವೆ. ಇದು ಖಾಸಗಿ ವಿಷಯ ಆಗುವುದಿಲ್ಲ. ಆಲ್ ಇಂಡಿಯಾ ಸರ್ವಿಸ್ ಕಂಡಕ್ಟ್ ರೂಲ್ಸ್ ಪ್ರಕಾರ ಹಿರಿಯ ಅಧಿಕಾರಿಗಳು ಈ ರೀತಿಯ ಪಿಕ್ಸ್, ಸಂಭಾಷಣೆ ಮಾಡುವುದು ಅಪರಾಧ. ಈ ಆಪಾದನೆಗಳನ್ನು ಸರ್ಕಾರ ತನಿಖೆ ಮಾಡುವುದೇ, ನೋಡಬೇಕಿದೆ. ಏಕೆಂದರೆ ಸತ್ಯಾ ಸತ್ಯತೆ ಹೊರ ಬರಬೇಕಿದೆ.

  • ಮೊನ್ನೆ ಇವರ ಭಾವ ಮಧುಸೂಧನ್ ರೆಡ್ಡಿ ಅವರು, ಲಕ್ಕಿ ಅಲಿ ಎಂಬ ಗಾಯಕರ ಜಾಗಕ್ಕೆ 20- 30 ಜನ ಕರೆದುಕೊಂಡು ಹೋಗಿ ರೌಡಿಸಂ ಮಾಡಿರುವ ವಿಷಯ ಮಾಧ್ಯಮಗಳಲ್ಲಿ ಬಂತು. ಈಕೆಯು ತನ್ನ ಐಎಎಸ್ ಪ್ರಭಾವ ಬಳಸಿ ದುರುಪಯೋಗ ಮಾಡಿಕೊಂಡು ಇರುವುದಾಗಿ ಲಕ್ಕಿ ಅಲಿ ಆರೋಪ ಮಾಡಿದರು. ವ್ಯಾಜ್ಯದ ಜಮೀನಿಗೆ 20-30 ಜನ ಕರೆದುಕೊಂಡು ಹೋಗಿ ಕಾನೂನು ಕೈಗೆ ತೆಗೆದುಕೊಳ್ಳಬಹುದು? ಈ ರೀತಿಯ ಭಂಡ ಧೈರ್ಯ ಎಲ್ಲಿಂದ ಬರುತ್ತದೆ? ಐಎಎಸ್ ಅಧಿಕಾರದಿಂದ?

  • ಇವರ ಗಂಡ ಹಾಗೂ ಇವರ ಮಾವನವರು (ಈಗ ತೀರಿ ಹೋಗಿದ್ದಾರಂತೆ) ರಿಯಲ್​ ಎಸ್ಟೇಟ್​ ಬ್ಯುಸಿನೆಸ್ ನಡೆಸುತ್ತಾರೆ. ಅನೇಕ ಬಾರಿ ಸರ್ವೇ ಹಾಗೂ ಭೂ ದಾಖಲೆ ಕಚೇರಿಯ ಮೂಲಕ ತನ್ನ ಕುಟುಂಬದ ಬ್ಯುಸಿನೆಸ್​ಗೆ ಅಗತ್ಯ ಇರುವ ಅನೇಕ ಭೂಮಿಗೆ ಸಂಬಂಧಿಸಿದ ಮಾಹಿತಿ ಅಂದರೆ, ಒಂದು ಭೂಮಿಯ ಫೋಡಿ, ಇನ್ನೊಂದರ ಬಗ್ಗೆ ಅದು ವ್ಯಾಜ್ಯ ಇರುವ ಭೂಮಿಯೇ ಅಥವಾ ಖರೀದಿಸಲು ಯೋಗ್ಯವೇ ಎಂಬಂತಹ ಮಾಹಿತಿಗಳನ್ನು ತಮ್ಮ ಐಎಎಸ್ ಸ್ಥಾನ ಅಧಿಕಾರದಿಂದ ಪಡೆದು ಕೊಂಡಿರುವ ಮಾಹಿತಿ ದಾಖಲೆ ಸಮೇತ ಇದೆ. ಇದರ ಮೇಲೆ ಕ್ರಮ ಆಗುತ್ತದೆಯೇ? ನೋಡಬೇಕು.

  • ಅನೇಕ ಬಾರಿ ಸರ್ಕಾರ ಅಧಿಕಾರಿಗಳನ್ನು ವರ್ಗಾವಣೆ ಮಾಡಿದಾಗ ಆ ಜಾಗದಲ್ಲಿ ಇದ್ದವರು ಕ್ಯಾಟ್/ಕೋರ್ಟ್ ಗೆ ಹೋಗುವುದು ಸಹಜ. ನಾನು 3 ವರ್ಷ ದೂರದ ಯಾದಗಿರಿಯಲ್ಲಿ ಕೆಲಸ ಮಾಡಿ, ಬೆಂಗಳೂರಿಗೆ ನನಗೆ ವರ್ಗವಾದಾಗ ಆ ಜಾಗದಲ್ಲಿ ಇದ್ದ ಅಧಿಕಾರಿ, ಪವಾರ್ ನನ್ನ ವರ್ಗಾವಣೆ ಪ್ರಶ್ನಿಸಿ ಕ್ಯಾಟ್​ಗೆ ಹೋದರು. ಆದರೆ, ರೋಹಿಣಿ ಸಿಂಧೂರಿಗೆ ಸಾಕ್ಷಾತ್ ಅಡ್ವೊಕೇಟ್ ಜನರಲ್ ಅವರೇ ಬಂದು ವಾದ ಮಾಡಿದರಲ್ಲ. ಮೈಸೂರು ಡಿಸಿ ವರ್ಗಾವಣೆ ವಿಷಯದಲ್ಲಿ ಆ ಸೌಲಭ್ಯ ನನಗೇಕೆ ಸಿಗಲಿಲ್ಲ? ನನ್ನಂತ ಕನ್ನಡಿಗ ಅಧಿಕಾರಿಗಳು ಹೇಗೆ ನಡೆಸಿ ಕೊಂಡರೂ ಸುಮ್ಮನೆ ಇರ್ತಾರೆ ಅಂತಲೇ? ಸ್ವತಃ ಅಡ್ವೊಕೇಟ್ ಜನರಲ್ ಹಾಜರಾಗಿ ವಾದ ಮಾಡಿದ್ದು ಈಕೆಗಲ್ಲದೆ ಮತ್ಯಾವ ಅಧಿಕಾರಿಗೂ ಈ ಸೌಲಭ್ಯ ಸಿಕ್ಕಿಲ್ಲ. ಯಾಕೆ ಈ ಮಲತಾಯಿ ಧೋರಣೆ?

  • ಈಕೆ ಪ್ರೊಬೇಷನರಿಯಂತ ಇದ್ದಾಗ ಅಲ್ಲಿಯ ಡಿಸಿ ಹಾಗೂ ಅವರ ಪತ್ನಿ ನೆರೆಯ ಜಿಲ್ಲೆಯ ಡಿಸಿ, ಇವರಿಬ್ಬರ ಸಂಸಾರದಲ್ಲಿ ಹುಳಿ ಬಿದ್ದು ಅವರು ಬೇರ್ಪಟ್ಟಿದ್ದಾರೀಗ ಹಾಗೂ ಇದು ಈಕೆಯ ದೆಸೆಯಿಂದ ಎಂಬ ಮಾತು ಅನೇಕರ ಬಾಯಲ್ಲಿ ಕೇಳಿದ್ದೇನೆ.

  • ಜಾಲಹಳ್ಳಿಯಲ್ಲಿ ಈಕೆಯ (ಪತಿಯದ್ದು ಇದ್ದರೂ ಈಕೆಯದೂ ಆಗುತ್ತದೆ) ದೊಡ್ಡ ಮನೆ ಒಂದು ಕಟ್ಟುತ್ತಿದ್ದು, ಐಎಎಸ್ ಅಧಿಕಾರಿ ಸಲ್ಲಿಸಬೇಕಾದ immovable property returns ನಲ್ಲಿ ಈ ಮನೆಯ ಉಲ್ಲೇಖ ಇರದೇ ಬೇರೆಲ್ಲಾ ಲಂಗು ಲೊಟ್ಟು ಪ್ರಾಪರ್ಟಿ ಬಗ್ಗೆ ವರದಿ ಕೊಟ್ಟಿದ್ದಾರೆ. ಆ ಮನೆಗೆ ಕೋಟಿಗಟ್ಟಲೇ ಇಟಲಿ ಫರ್ನೀಚರ್, 26 ಲಕ್ಷದ ಜರ್ಮನ್ ವಸ್ತುಗಳು ಇರುವುದ ಬಗ್ಗೆ ಸರ್ಕಾರಕ್ಕೆ ಮಾಹಿತಿ ಸಿಕ್ಕಿದೆ. ಇದರ ಮೇಲೆ ಕೂಲಂಕುಷ ತನಿಖೆ ಆಗುವುದೇ ನೋಡಬೇಕಿದೆ.

  • ಇಷ್ಟೆಲ್ಲಾ ಆದ್ರೂ, ಯಾರು ಪ್ರತಿ ಬಾರಿ ಈಕೆಯನ್ನು ತನಿಖೆಗೂ ಒಳ ಪಡಿಸದೇ ಬಚಾವ್ ಮಾಡುತ್ತಾ ಇರುವುದು. ಈಕೆ ಕೆಮ್ಮಿದ್ದೂ ಕ್ಯಾಕರಿಸಿದ್ದೂ ಈಕೆಯನ್ನು ಹೀರೋ/ ಹೀರೋಯಿನ್ ಮಾಡುವ ಮೂಲಕ ಯಾವುದೇ ಶಿಕ್ಷೆಯಿಲ್ಲದೆ ಪ್ರತಿ ಬಾರಿ ಬಚಾವ್ ಆಗಿರುವುದೇ? ಅಥವಾ ಕಿಂದರಿ ಜೋಗಿ ಮಾಡಿದ ರೀತಿಯಲ್ಲಿ ಸರ್ಕಾರದಲ್ಲಿ ಇರುವ ಪ್ರಭಾವಿಗಳು ಕಿಂದರಿ ಜೋಗಿಯ ಪಾಶಕ್ಕೆ ಸಿಲುಕಿದರೆ? ಎಂದು ಪ್ರಶ್ನಿಸಿದ್ದಾರೆ.

No Comments

Leave A Comment