Log In
BREAKING NEWS >
ಕರಾವಳಿಯಲ್ಲಿ ಹೆಚ್ಚಿದ ಬಿಸಿಲಿನ ತಾಪಮಾನ-ಸಾವು ಸ೦ಭವಿಸುವ ಸಾಧ್ಯತೆ-ಎಚ್ಚರ ಬಿಸಿಲಿನಲ್ಲಿ ಹೊರಗೆ ಬರಲೇ ಬೇಡಿ....

ಗುಜರಾತ್ ನಲ್ಲಿ ಭೀಕರ ರಸ್ತೆ ಅಪಘಾತ: ಟ್ರಕ್‌ಗೆ ಜೀಪ್ ಡಿಕ್ಕಿ, 7 ಮಂದಿ ದಾರುಣ ಸಾವು; ಚಾಲಕ ಪರಾರಿ

ಪಟಾನ್: ಗುಜರಾತ್‌ನ ಪಟಾನ್ ಜಿಲ್ಲೆಯ ವರಾಹಿ ಬಳಿ ಬುಧವಾರ ಮಧ್ಯಾಹ್ನ ನಿಂತಿದ್ದ ಟ್ರಕ್‌ಗೆ ಜೀಪ್ ಡಿಕ್ಕಿ ಹೊಡೆದ ಪರಿಣಾಮ ಏಳು ಜನರು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಬುಧವಾರ ರಾತ್ರಿ ಅಪಘಾತ ಸಂಭವಿಸಿದೆ, ರಾತ್ರಿಯಿಡಿ ತನಿಖೆ ನಡೆಸಿ ಎಫ್ ಐಆರ್ ದಾಖಲಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಜೀಪ್ ಸುಮಾರು 18 ಜನರನ್ನು ಹೊತ್ತೊಯ್ದಿತ್ತು, ಅದರಲ್ಲಿ 11 ಮಂದಿ ಗಾಯಗೊಂಡಿದ್ದರು, ಐವರು ಸ್ಥಳದಲ್ಲೇ ಸಾವನ್ನಪ್ಪಿದರು ಮತ್ತು ಇಬ್ಬರು ಆಸ್ಪತ್ರೆಯಲ್ಲಿ ಅಸು ನೀಗಿದ್ದಾರೆ ಎಂದು ಎಫ್ ಐ ಆರ್ ನಲ್ಲಿ ದಾಖಲಿಸಲಾಗಿದೆ.

ಮೃತರನ್ನು ಪಿನಾಲ್ ಮಿಥುನ್‌ಭಾಯ್ ವಂಜಾರಾ (7), ಕಾಜಲ್ ಮೋಹನ್‌ಭಾಯ್ ಪರ್ಮಾರ್ (9), ಅಮಿತಾ ಖೇಮರಾಜಭಾಯ್ ವಂಜಾರಾ (15), ಸೀಮಾಬೆನ್ ಮಿಥುನ್‌ಭಾಯ್ ವಂಜಾರಾ (24), ರಾಘಬೆನ್ ಮೋಹನ್‌ಭಾಯ್ ಪರ್ಮಾರ್ (35), ಸಂಜುಭಾಯ್ ಬಾಬುಭಾಯ್ ಹೂಗಾರ (50), ಮತ್ತು ದುಘಾಭಾಯಿ,  ಸೇಜಾಭಾಯಿ ರಾಥೋಡ್ (50) ಎಂದು ಗುರುತಿಸಲಾಗಿದೆ.

ಜೀಪ್ ಚಾಲಕನ ನಿರ್ಲಕ್ಷ್ಯದಿಂದ ಈ ಅಪಘಾತ ಸಂಭವಿಸಿದೆ ಎಂದು ಹೇಳಲಾಗಿದ್ದು, ಕಾರಿನ ಮುಂಭಾಗದ ಟೈರ್ ಬಸ್ಟ್ ಆದ ನಂತರ ವಾಹನದಿಂದ ಜಿಗಿದಿದ್ದಾನೆ ಎಂದು ಆರೋಪಿಸಲಾಗಿದೆ.  ವೇಗವಾಗಿ ಬಂದ ಜೀಪ್ ನಿಂತಿದ್ದ ಟ್ರಕ್‌ಗೆ ಡಿಕ್ಕಿ ಹೊಡೆದಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

No Comments

Leave A Comment