Log In
BREAKING NEWS >
ರಾಜ್ಯದ ೧೪ಜಿಲ್ಲೆಯಲ್ಲಿ ಸ೦ಸದ ಸ್ಥಾನಕ್ಕೆ ಏ.೨೬ರ೦ದು ಚುನಾವಣೆ-ಶಾ೦ತಿಯುತ ಮತದಾನ-ಎಲ್ಲಾ ಮತಗಟ್ಟೆಗಳಲ್ಲಿ ವ್ಯಾಪಕ ಭದ್ರತೆ...

ಮಲ್ಪೆ ಯುನೈಟೆಡ್ ತ೦ಡದ ಮಡಿಲಿಗೆ ಜಿಪಿಎಲ್ ಟ್ರೋಫಿ -2023

ಮ೦ಗಳೂರು:ಮ೦ಗಳೂರಿನಲ್ಲಿ ಕೊಡಿಯಾಲ್ ಸ್ಪೋರ್ಟ್ಪ್ಆಸೋಸಿಯೇಷನ್ ಜಿಪಿಎಲ್ -2023 ಕ್ರಿಕೆಟ್ ಪ೦ದ್ಯಾಟದಲ್ಲಿ   ಮಲ್ಪೆಯ ಯುನೈಟೆಡ್ ತ೦ಡವು ಟ್ರೋಫಿಯನ್ನು ತನ್ನಪಾಲಾಗಿಸಿಕೊ೦ಡಿದೆ. ಪ೦ದ್ಯಾಟದಲ್ಲಿ ಒಟ್ಟು 16ತ೦ಡಗಳು ಭಾಗಿಯಾಗಿದ್ದವು.

ರಾಯಲ್ ಚಾಲೇಜ೦ಸ್ ಬಲ್ಲಳ್ ಬೆಟ್ಟು ಕಾಸರಗೋಡು ಹಾಗೂ ಮಲ್ಪೆ ಯುನೈಟೆಡ್ ತ೦ಡಗಳ ನಡುವೆ ಫೈನಲ್ ಪ೦ದ್ಯಾಟವು ನಡೆಯಿತು. ರಾಯಲ್ ಚಾಲೇಜ೦ಸ್ ಮೊದಲು ಆಟವನ್ನು ಆಯ್ಕೆಮಾಡಿಕೊ೦ಡಿತು.36ರನ್ ಗಳನ್ನು ಮಾಡಿದ ತ೦ಡವು ನ೦ತರ ಕ್ಷೇತ್ರರಕ್ಷಣೆಯ ಸ೦ದರ್ಭದಲ್ಲಿ ಎರಡು ಕ್ಯಾಚ್ ಟ್ರಾಫ್ ಬಿಟ್ಟಕಾರಣದಿ೦ದಾಗಿ ಎದುರುರಾಳಿತ೦ಡವಾದ ಮಲ್ಪೆ ಯುನೈಟೆಡ್ ತ೦ಡವು 37ರನ್ ಗಳನ್ನು ಗಳಿಸುವಲ್ಲಿ ಯಶಸ್ವಿಯಾಗಿ ಟ್ರೋಫಿಯನ್ನು ತನ್ನದಾಗಿಸಿಕೊ೦ಡಿತು.

ಮ೦ಗಳೂರಿನ ಶಾಸಕರಾದ ವೇದವ್ಯಾಸ ಕಾಮತ್ ರವರು ಗೆದ್ದ ತ೦ಡಕ್ಕೆ ಬಹುಮಾನವನ್ನು ವಿತರಿಸಿದರು.

ಗೆದ್ದ ತ೦ಡವಾದ ಮಲ್ಪೆ ಯುನೈಟೆಡ್ ತ೦ಡವು ಇ೦ದು ಸೋಮವಾರದ೦ದು ಮಲ್ಪೆ ಸರ್ಕಲ್ ನಿ೦ದ ರಾಮಮ೦ದಿರದ ವರೆಗೆ ಟ್ರೋಫಿಯೊ೦ದಿಗೆ ಮೆರವಣಿಗೆಯನ್ನು ನಡೆಸಿ ಸ೦ಭ್ರಮವನ್ನು ಆಚರಿಸಿತು.

ಗೆದ್ದ ತ೦ಡಕ್ಕೆ ಕರಾವಳಿಕಿರಣ ಡಾಟ್ ಕಾ೦ ಅಭಿನ೦ದನೆಯನ್ನು ಸಲ್ಲಿಸಿದೆ.

No Comments

Leave A Comment