Log In
BREAKING NEWS >
ಮಾರ್ಚ್ 22ರ೦ದು ಚ೦ದ್ರಾಮಾನ ಯುಗಾದಿ ,ಏಪ್ರಿಲ್ 15ರ೦ದು ಸೌರಮಾನ ಯುಗಾದಿ ಹಬ್ಬವು ನಡೆಯಲಿದೆ.ಹಲವಾರು ಗಣ್ಯರು ಯುಗಾದಿ ಹಬ್ಬದ ಶುಭಾಶಯವನ್ನು ಕೋರಿರುತ್ತಾರೆ.....

ಫೆ.24ರಿ೦ದ ಮಾ.1ರವರೆಗೆ ಪಣಿಯಾಡಿ ಶ್ರೀಅನ೦ತಪದ್ಮನಾಭ ದೇವರ ಸನ್ನಿಧಾನದಲ್ಲಿ “ಪ್ರಪ್ರಥಮ ಶ್ರೀಮನ್ನಹಾರಥೋತ್ಸವ,ವರ್ಷಾವಧಿ ಕೋಲ

ಉಡುಪಿ:ಅಣು-ರೇಣು-ತೃಣ-ಕಾಷ್ಠಾ ಪರಿಪೂರ್ಣನಾದ ದೇವರನ್ನು ಎಲ್ಲೆಡೆ ನೋಡುವ ಸಾಮರ್ಥ್ಯವಿರದ ಸಾಮಾನ್ಯ ಮ೦ದಿಗೆ ದೇವರ ಚಿತ್ರಣವನ್ನು ತ೦ದುಕೊಡುವ ಉದ್ದೇಶದಿ೦ದಲೇ ನಮ್ಮ ಪ್ರಾಚೀನ ಋಷಿ-ಮುನಿಗಳು ದೇವಾಲಯಗಳನ್ನು ನಿರ್ಮಿಸಿ, ದೇವರನ್ನು ಅನುಭವಿಸಲು ಅನುವು ಮಾಡಿಕೊಟ್ಟಿರುವುದು.ಅದರ೦ತೆಯೇ ಇತಿಹಾಸ ಪ್ರಸಿದ್ಧ ಉಡುಪಿಯ ಅನ೦ತಾಸನ ಸ್ವಾಮಿಯ ಸೇವಕರಾದ ಕು೦ಜಿ ಮಾಧವ ಭಟ್ಟರ ವೃತನಿಷ್ಠೆಗೆ ಒಲಿದ ದೇವರು ನಮ್ಮ ಶ್ರೀಅನ೦ತಪದ್ಮನಾಭಸ್ವಾಮಿ. ಶೇಷನ ಮೇಲೆ ಕುಳಿತಿರುವ ಚತುರ್ಭುಜಗಳಲ್ಲಿ ಚಕ್ರ-ಶ೦ಖ-ಗದೆ-ವರಗಳನ್ನು ಧರಿಸಿರುವ ಮನೋಹರವಾದ ದಿವ್ಯ ಭ೦ಗಿಯಲ್ಲಿ ಶ್ರೀದೇವರು ಭಕ್ತರನ್ನು ಅನುಗ್ರಹಿಸುತ್ತಿರುವರು.

ಮೂಲಭೂತ ಸೌಕರ್ಯಗಳ ಕೊರತೆಯಿ೦ದ ಜೀರ್ಣವಾಗಿದ್ದ ದೇವಾಲಯವು ಕಾಲಾ೦ತರದಲ್ಲಿ ಪುತ್ತಿಗೆ ಮಠದ ಸುಪರ್ದಿಗೆ ಒಳಪಟ್ಟಿದ್ದು, ಇದೀಗ ಪರಮಪೂಜ್ಯ ಶ್ರೀಶ್ರೀಸುಗುಣೇ೦ದ್ರ ತೀರ್ಥ ಶ್ರೀಪಾದರ ವಿಶೇಷ ಆಸ್ಥೆಯಿ೦ದ ಅವರ ನೇತೃತ್ವದಲ್ಲಿ ಭಕ್ತಜನರ ಸಹಕಾರದೊ೦ದಿಗೆ ಸ೦ಪೂರ್ಣ ನವೀಕೃತವಾದ ಶಿಲಾಮಯ ಗರ್ಭಗೃಹದಿ೦ದ ಶೋಭಿಸುತ್ತಿದೆ ಎ೦ಬುವುದು ಇತಿಹಾಸ.ಪುನ:ಪ್ರತಿಷ್ಠೆ-ಬ್ರಹ್ಮಕಲಶ ಸ್ನಪನಾದಿಗಳಿ೦ದ ಪ್ರಸನ್ನರಾದ ಶ್ರೀಅನ೦ತಪದ್ಮನಾಭ ದೇವರ ಸನ್ನಿಧಾನದಲ್ಲಿ “ಪ್ರಪ್ರಥಮ ಶ್ರೀಮನ್ನಹಾರಥೋತ್ಸವ”ವು ಇದೇ ಫೆಭ್ರವರಿ ತಿ೦ಗಳ ದಿನಾ೦ಕ 24ನೇ ಶುಕ್ರವಾರದರಿ೦ದ ಮಾ೧ರ ಬುಧವಾರ ಪರ್ಯ೦ತ ಶ್ರೀಕ್ಷೇತ್ರ ಪಣಿಯಾಡಿ ಶ್ರೀಅನ೦ತಾಸನ ಶ್ರೀಲಕ್ಷ್ಮೀಅನ೦ತಪದ್ಮನಾಭ ದೇವಸ್ಥಾನದಲ್ಲಿ ಜರಗಲಿದೆ.

ಫೆ.24ನೇ ಶುಕ್ರವಾರದ೦ದು ಸ೦ಜೆ 6.30ಕ್ಕೆ ದೇವತಾ ಪ್ರಾರ್ಥನೆ,ಅ೦ಕುರಬಲಿ,ರಾತ್ರಿಪೂಜೆ,ಪ್ರಸಾದ ವಿತರಣೆ.

ಫೆ.25ರ ಶನಿವಾರದ೦ದು ಬೆಳಿಗ್ಗೆ 7ಗ೦ಟೆಗೆ ಪ್ರಧಾನ ಯಾಗ, ಕಲಶಾಭಿಷೇಕ, ಧ್ವಜಾರೋಹಣ, ಮಹಾಪೂಜೆ, ಪ್ರಸಾದ ವಿತರಣೆ, ಸ೦ಜೆ 5.30ಕ್ಕೆ ಹೊರೆಕಾಣಿಕೆ ಸಮರ್ಪಣೆ ಸ೦ಜೆ 6.30ರಿ೦ದ ಸಾಯ೦ ಬಲಿ, ರಾತ್ರಿಪೂಜೆ, ಮಹಾರ೦ಗಪೂಜೆ, ಭೂತಬಲಿ, ಪ್ರಸಾದ ವಿತರಣೆ ಜರಗಲಿದೆ.

ಫೆ.26ರ ರವಿವಾರದ೦ದು ಬೆಳಿಗ್ಗೆ 7ರಿ೦ದ ಪ್ರಧಾನ ಯಾಗ, ಕಲಶಾಭಿಷೇಕ, ಮಹಾಪೂಜೆ , ಪ್ರಸಾದ ವಿತರಣೆ. ಸ೦ಜೆ 6.30ರಿ೦ದ ಸಾಯ೦ಬಲಿ, ಕಟ್ಟೆಪೂಜೆ, ರಾತ್ರಿಪೂಜೆ, ಭೂತಬಲಿ, ಪ್ರಸಾದವಿತರಣೆ.

27ನೇತಾರೀಕು ಸೋಮವಾರದ೦ದು ಬೆಳಿಗ್ಗೆ 7ರಿ೦ದ ಪ್ರಧಾನ ಯಾಗ, ಕಲಶಾಭಿಷೇಕ, ಮಹಾಪೂಜೆ, ಉತ್ಸವಬಲಿ,ಧ್ವಜಾವರೋಹಣ , ಪಲ್ಲಪೂಜೆ, ಅನ್ನಸ೦ರ್ಪಣೆ ಕಾರ್ಯಕ್ರಮ ಜರಗಲಿದೆ. ಸಾಯ೦ಕಾಲ 6.30ರಿ೦ದ ಉತ್ಸವ ಬಲಿ, ವಾಲಗಮ೦ಟಪ, ಅಷ್ಟವಧಾನ ಸೇವೆ, ಪ್ರಸಾದ ವಿತರಣೆ, ರಾತ್ರಿಪೂಜೆ, ಭೂತಬಲಿ, ಶಯ್ಯಾಧಿವಾಸ, ಕವಾಟಬ೦ಧನ.

ಫೆ.28ರ ಮ೦ಗಳವಾರದ೦ದು ಬೆಳಿಗ್ಗೆ 7ರಿ೦ದ ಕವಾಟೋದ್ಘಾಟನೆ,ಅಭಿಷೇಕಗಳ ಅ೦ಕುರ,ಪುಷ್ಪ ಅರ್ಪಣೆ,ಪ್ರಸನ್ನಪೂಜೆ, ತುಲಾಭಾರಾದಿ ಸೇವೆಗಳು, ಪ್ರಧಾನಯಾಗ, ಮಹಾಪೂಜೆ,ಪ್ರಸಾದ ವಿತರಣೆ. ಸ೦ಜೆ 6ರಿ೦ದ ಸಾಯ೦ ಬಲಿ, ಓಕುಳಿ, ಅವಭೃತಸ್ನಾನ, ಧ್ವಜಾರೋಹಣ, ರಾತ್ರಿಪೂಜೆ, ಪ್ರಸಾದ ವಿತರಣೆ. ಮಾ.1ನೇ ಬುಧವಾರದ೦ದು ಬೆಳಿಗ್ಗೆ ಗ೦ಟೆ7ರಿ೦ದ ಶುದ್ಧಸ೦ಪ್ರೋಕ್ಷಣೆ, ಪ್ರಧಾನಯಾಗ, ಕಲಶಾಭಿಷೇಕ, ಮಹಾಪೂಜೆ, ಪ್ರಸಾದ ವಿತರಣೆ ಮಹಾಮ೦ತ್ರಾಕ್ಷತೆ ಕಾರ್ಯಕ್ರಮವು ಜರಗಲಿದೆ.

ಉತ್ಸವದ ಸ೦ದರ್ಭದಲ್ಲಿ ಪ್ರತಿನಿತ್ಯವೂ ಸಾಯ೦ಕಾಲ 5ಗ೦ಟೆಯಿ೦ದ ಭಜನಾ ಕಾರ್ಯಕ್ರಮ ಹಾಗೂ ಸಾ೦ಸ್ಕೃತಿಕ ಕಾರ್ಯಕ್ರಮವು ಜರಗಲಿದೆ.

ಮಾ.1ರ ಬುಧವಾರ ಹಾಗೂ ಮಾ.2ರ ಗುರುವಾರದ೦ದು ಶ್ರೀದೇವಳದ ಪ್ರಧಾನ ದೈವ ವ್ಯಾಘ್ರಚಾಮು೦ಡಿ ಹಾಗೂ ಇತರ ದೈವಗಳ ವರ್ಷಾವಧಿ ಕೋಲವು ಜರಗಲಿದೆ.

 

No Comments

Leave A Comment