Log In
BREAKING NEWS >
ಮಾರ್ಚ್ 22ರ೦ದು ಚ೦ದ್ರಾಮಾನ ಯುಗಾದಿ ,ಏಪ್ರಿಲ್ 15ರ೦ದು ಸೌರಮಾನ ಯುಗಾದಿ ಹಬ್ಬವು ನಡೆಯಲಿದೆ.ಹಲವಾರು ಗಣ್ಯರು ಯುಗಾದಿ ಹಬ್ಬದ ಶುಭಾಶಯವನ್ನು ಕೋರಿರುತ್ತಾರೆ.....ಮಾ.21,22 ಕಾಪು ಸುಗ್ಗಿ ಮಾರಿಪೂಜೆ ದಿನ ನಿಗದಿ....

ಕಾಸರಗೋಡು: ಚೂಡಿಧಾರ್‌ನ ಶಾಲ್ ಯಂತ್ರಕ್ಕೆ ಸಿಲುಕಿ ಹುಟ್ಟು ಹಬ್ಬದಂದೇ ಮಹಿಳೆ ಮೃತ್ಯು

ಕಾಸರಗೋಡು, ಫೆ 11. ಹುಟ್ಟು ಹಬ್ಬದ ದಿನದಂದೇ ಚೂಡಿಧಾರ್‌ನ ಶಾಲ್ ಯಂತ್ರಕ್ಕೆ ಸಿಲುಕಿ ಮಹಿಳೆಯೊಬ್ಬರು ದಾರುಣವಾಗಿ ಮೃತಪಟ್ಟ ಘಟನೆ ಇಂದು ಮಧ್ಯಾಹ್ನ ಮಂಜೇಶ್ವರ ತೂಮಿನಾಡಿನಲ್ಲಿ ನಡೆದಿದೆ.

ತೂಮಿನಾಡಿನ ರಂಜನ್ ಎಂಬವರ ಪತ್ನಿ ಜಯಶೀಲ (22) ಮೃತಪಟ್ಟವರು.

ತೂಮಿನಾಡುನಲ್ಲಿರುವ ಬೇಕರಿಯೊಂದರ ಕಾರ್ಮಿಕೆಯಾಗಿದ್ದು, ಎಂದಿನಂತೆ ಬೇಕರಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದಾಗ ಯಂತ್ರಕ್ಕೆ ಚೂಡಿಧಾರ್ ಶಾಲು ಸಿಲುಕಿ ದುರ್ಘಟನೆ ನಡೆದಿದೆ. ಗಂಭೀರ ಸ್ಥಿತಿಯಲ್ಲಿದ್ದ ಜಯಶೀಲರನ್ನು ಅಲ್ಲಿದ್ದವರು ಆಸ್ಪತ್ರೆಗೆ ತಲಪಿಸಿದರೂ ಜೀವ ಉಳಿಸಲಾಗಲಿಲ್ಲ ಇಂದು ಜಯಶೀಲರ ಹುಟ್ಟು ಹಬ್ಬವಾಗಿದ್ದು, ಇದರ ನಡುವೆ ಧಾರುಣ ಘಟನೆ ನಡೆದಿದೆ.

ಇನ್ನು ಒಂದೂವರೆ ವರ್ಷಗಳ ಹಿಂದೆ ವಿವಾಹವಾಗಿದ್ದರು. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಮಂಜೇಶ್ವರ ತಾಲೂಕು ಆಸ್ಪತ್ರೆಯಲ್ಲಿರಿಸಲಾಗಿದೆ.

No Comments

Leave A Comment