Log In
BREAKING NEWS >
```````ನಮ್ಮ ಎಲ್ಲಾ ಜಾಹೀರಾತುದಾರರಿಗೆ,ಓದುಗರಿಗೆಮತ್ತು ಅಭಿಮಾನಿಗಳಿಗೆ ಶ್ರೀಗೌರಿ-ಗಣೇಶ ಹಬ್ಬದ ಶುಭಾಶಯಗಳು````````

ವಿಟ್ಲ: ವಿದೇಶದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿ ಮಹಿಳೆ ಸೆರೆ

ವಿಟ್ಲ: ಫೆ, 09. ಕ್ರಿಮಿನಲ್ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಕಳೆದ ಐದು ವರ್ಷಗಳಿಂದ ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ ವಿದೇಶಕ್ಕೆ ಪರಾರಿಯಾಗಿದ್ದ 42 ವರ್ಷದ ಮಹಿಳೆಯನ್ನು ವಿಟ್ಲ ಪೊಲೀಸ್ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಆರೋಪಿಯನ್ನು ಕೇರಳದ ಪಯ್ಯನೂರಿನ ಕೆಳಕೆ, ವಿಟ್ಟಿಲ್ ತಂಬಾಯಿ ಟಿವಿ ಕುಂಞಿಮಂಗಲ ಪಾಣಚೇರಿ ನಿವಾಸಿ ಸುಜಾತಾ ಎಂದು ಗುರುತಿಸಲಾಗಿದೆ. ಆರೋಪಿಯ ವಿರುದ್ಧ ಪೊಲೀಸರು ಎಲ್ ಒಸಿ ಜಾರಿ ಮಾಡಿದ್ದರು.

ಆರೋಪಿ ಮಹಿಳೆ ಫೆಬ್ರವರಿ 8 ರಾತ್ರಿ 2.30 ಕ್ಕೆ ಬುಧವಾರ ಕೋಝಿಕ್ಕೋಡ್‌ನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದು ಈ ವೇಳೆ ವಿಮಾನ ನಿಲ್ದಾಣದಲ್ಲಿ ಆರೋಪಿಯ ಬಗ್ಗೆ ತಿಳಿದ ಇಮಿಗ್ರೇಷನ್ ಅಧಿಕಾರಿ ಆಕೆಯನ್ನು ವಶಕ್ಕೆ ಪಡೆದು ಸ್ಥಳೀಯ ಪೊಲೀಸ್ ಠಾಣೆಗೆ ಒಪ್ಪಿಸಿದ್ದಾರೆ.

ವಿಟ್ಲ ಪೊಲೀಸ್ ಎಎಸ್‌ಐ ಜಯರಾಮ್ ಮತ್ತು ಸಿಬ್ಬಂದಿ ಸಂಗೀತಾ ಅವರನ್ನು ಕೇರಳದ ಪೊಲೀಸ್ ಠಾಣೆಯಿಂದ ವಶಕ್ಕೆ ತೆಗೆದುಕೊಂಡು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

ಪೊಲೀಸರು ಐಪಿಸಿಯ 379, 311, 406, 417, 418, 419, 420.423.427.465,467,468,471, 504,506 r/w 34 ಅಡಿಯಲ್ಲಿ ಪ್ರಕರಣಗಳನ್ನು ದಾಖಲಿಸಿಕೊಂಡಿದ್ದಾರೆ.

No Comments

Leave A Comment