Log In
BREAKING NEWS >
ಕರಾವಳಿಯಲ್ಲಿ ಹೆಚ್ಚಿದ ಬಿಸಿಲಿನ ತಾಪಮಾನ-ಸಾವು ಸ೦ಭವಿಸುವ ಸಾಧ್ಯತೆ-ಎಚ್ಚರ ಬಿಸಿಲಿನಲ್ಲಿ ಹೊರಗೆ ಬರಲೇ ಬೇಡಿ....

ಹಿಮಾಚಲ ಪ್ರದೇಶದ ಲಾಹೌಲ್-ಸ್ಪಿತಿಯಲ್ಲಿ ಹಿಮಪಾತ: ಇಬ್ಬರು ಕಾರ್ಮಿಕರ ಸಾವು, ಓರ್ವ ನಾಪತ್ತೆ!

ಹಿಮಾಚಲ ಪ್ರದೇಶದ ಲಾಹೌಲ್ ಸ್ಪಿತಿ ಬುಡಕಟ್ಟು ಜಿಲ್ಲೆಯಲ್ಲಿ ಹಿಮಪಾತ ಸಂಭವಿಸಿದ್ದು ಪರಿಣಾಮ ಬಾರ್ಡರ್ ರೋಡ್ಸ್ ಆರ್ಗನೈಸೇಶನ್ (BRO) ಕಾರ್ಮಿಕರು ಸಾವನ್ನಪ್ಪಿದ್ದು ಓರ್ವ ಕಾರ್ಮಿಕ ಕಾಣೆಯಾಗಿದ್ದಾರೆ.

ರಕ್ಷಣಾ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ತೊಡಗಿದ್ದು ಎರಡೂ ಮೃತದೇಹಗಳನ್ನು ಹೊರತೆಗೆದಿದ್ದು, ನಾಪತ್ತೆಯಾದ ಯುವಕನಿಗಾಗಿ ಶೋಧ ಕಾರ್ಯ ನಡೆಯುತ್ತಿದ್ದಾರೆ.

ಮೃತ ಕಾರ್ಮಿಕರನ್ನು ನೇಪಾಳದ ನಿವಾಸಿಗಳಾದ 19 ವರ್ಷದ ರಾಮ್ ಬುದ್ಧ ಮತ್ತು ಚಂಬಾ ನಿವಾಸಿ ರಾಕೇಶ್ ಎಂದು ಗುರುತಿಸಲಾಗಿದೆ. ಅದೇ ಸಮಯದಲ್ಲಿ, ನಾಪತ್ತೆಯಾದ ವ್ಯಕ್ತಿಯನ್ನು ನೇಪಾಳದ ನಿವಾಸಿ 27 ವರ್ಷದ ತ್ಶೆರಿಂಗ್ ಲಾಮಾ ಎಂದು ಗುರುತಿಸಲಾಗಿದೆ. ಜಿಲ್ಲಾ ಕೇಂದ್ರ ಕೀಲಾಂಗ್‌ನಿಂದ 35 ಕಿಮೀ ದೂರದಲ್ಲಿರುವ ಶಿಕುನ್ಲಾ ಪಾಸ್ ಬಳಿ ಅಪಘಾತ ಸಂಭವಿಸಿದೆ.

ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ವಕ್ತಾರರ ಪ್ರಕಾರ, ಲಾಹೌಲ್ ಉಪವಿಭಾಗದ ದರ್ಚಾ-ಶಿಂಕುಲಾ ರಸ್ತೆಯ ಚಿಕಾ ಗ್ರಾಮದ ಬಳಿ ಭಾನುವಾರ ಸಂಜೆ 4 ಗಂಟೆ ಸುಮಾರಿಗೆ ಹಿಮಪಾತವಾಗಿದೆ. ಈ ವೇಳೆ ಬಾರ್ಡರ್ ರೋಡ್ಸ್ ಆರ್ಗನೈಸೇಶನ್ ಕಾರ್ಮಿಕರು ರಸ್ತೆಯಲ್ಲಿದ್ದ ಹಿಮ ತೆಗೆಯುತ್ತಿದ್ದರು. ಹಠಾತ್ ಹಿಮಕುಸಿತದಿಂದ ಸ್ಥಳದಲ್ಲಿ ಅಸ್ತವ್ಯಸ್ತವಾಗಿತ್ತು. ಮೂವರು ಕಾರ್ಮಿಕರ ಜೊತೆಗೆ ಸ್ನೋ ಕಟರ್ ಮತ್ತು ಯಂತ್ರೋಪಕರಣಗಳು ಸಹ ಹಿಮಪಾತಕ್ಕೆ ಸಿಲುಕಿದೆ.

ಈ ಹಿಂದೆ ಲಾಹೌಲ್-ಸ್ಪಿತಿಯಲ್ಲಿ ಭಾರೀ ಹಿಮಪಾತವಾಗಿತ್ತು. ಇದರಿಂದಾಗಿ ಹಲವು ರಸ್ತೆಗಳು ಬಂದ್‌ ಆಗಿವೆ. ರಸ್ತೆಗಳಲ್ಲಿ ಹಿಮ ತೆಗೆಯುವ ಕೆಲಸ ನಡೆಯುತ್ತಿದೆ. ಜಿಲ್ಲೆಯಲ್ಲಿ ಇನ್ನೂ 131 ರಸ್ತೆಗಳು ಬಂದ್ ಆಗಿವೆ. ಲಾಹೌಲ್ ಸ್ಪಿತಿಯಲ್ಲಿ ಕಳೆದ ನಾಲ್ಕೈದು ದಿನಗಳಿಂದ ಸ್ಪಷ್ಟ ವಾತಾವರಣವಿದ್ದು, ಬಿಸಿಲಿನ ಝಳಕ್ಕೆ ಹಿಮ ಕರಗುತ್ತಿದ್ದು, ಮಂಜುಗಡ್ಡೆಗಳು ಕುಸಿಯುವ ಸಾಧ್ಯತೆ ಇದೆ.

No Comments

Leave A Comment