Log In
BREAKING NEWS >
ಮಾರ್ಚ್ 22ರ೦ದು ಚ೦ದ್ರಾಮಾನ ಯುಗಾದಿ ,ಏಪ್ರಿಲ್ 15ರ೦ದು ಸೌರಮಾನ ಯುಗಾದಿ ಹಬ್ಬವು ನಡೆಯಲಿದೆ.ಹಲವಾರು ಗಣ್ಯರು ಯುಗಾದಿ ಹಬ್ಬದ ಶುಭಾಶಯವನ್ನು ಕೋರಿರುತ್ತಾರೆ.....ಮಾ.21,22 ಕಾಪು ಸುಗ್ಗಿ ಮಾರಿಪೂಜೆ ದಿನ ನಿಗದಿ....

ಮಂಗಳೂರು: ಅಕ್ರಮ ಚಿನ್ನ ಸಾಗಣೆಯ ಪ್ರತ್ಯೇಕ ಪ್ರಕರಣ – 90 ಲಕ್ಷ ರೂ. ಮೌಲ್ಯದ ಚಿನ್ನ ವಶ

ಮಂಗಳೂರು:ಫೆ 04: ಪ್ಯಾಂಟ್ ಹುಕ್ಸ್, ಬಾಬಾ ಸೂಟ್ ಬಟನ್ ,ಟ್ರಾಲಿ ಬ್ಯಾಗ್ ಮತ್ತು ಗುದನಾಳದಲ್ಲಿ ಅಕ್ರಮವಾಗಿ ಚಿನ್ನ ಸಾಗಣೆ ಮಾಡುತ್ತಿರುವ ಪ್ರತ್ಯೆಕ ಪ್ರಕರಣಗಳನ್ನು ಮಂಗಳೂರು ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ.

ಜನವರಿ 19 ರಿಂದ 31 ರವರೆಗೆ ಮಂಗಳೂರು ವಿಮಾನ ನಿಲ್ದಾಣದಲ್ಲಿ 24 ಕ್ಯಾರೆಟ್ ಶುದ್ದತೆಯ 1617.0 ಗ್ರಾಂ ಚಿನ್ನವನ್ನು ವಶಪಡಿಸಿಕೊಳ್ಳಲಾಗಿದೆ. ಇದರ ಮೌಲ್ಯ 90,34,970 ಲಕ್ಷ ರೂ. ಎಂದು ಅಂದಾಜಿಸಲಾಗಿದೆ.

ದುಬೈ ನಿಂದ ಮಂಗಳೂರಿಗೆ ವಿಮಾನದಲ್ಲಿ ಆಗಮಿಸಿದ ಪ್ರಯಾಣಿಕರನ್ನು ತಪಾಸಣೆ ನಡೆಸಿದಾಗ ಅಕ್ರಮ ಚಿನ್ನ ಸಾಗಾಟ ಪತ್ತೆಯಾಗಿದೆ.

ದುಬೈ ನಿಂದ ಆಗಮಿಸಿದ ಐವರು ಪುರುಷ ಪ್ರಯಾಣಿಕರು ಅಕ್ರಮವಾಗಿ ಚಿನ್ನ ಸಾಗಣೆ ಮಾಡುತ್ತಿದ್ದು, ಪ್ಯಾಂಟ್, ಮಕ್ಕಳ ಅಂಗಿಯ ಬಟನ್ , ಟ್ರಾಲಿ ಬ್ಯಾಗ್ ನ ಬೀಡಿಂಗ್‌ ರ್ಪ್ದಲ್ಲಿ ಸೇರಿದಂತೆ ಗುದನಾಳದಲ್ಲಿ ಚಿನ್ನ ಇಟ್ಟು ಸಾಗಣೆ ಮಾಡುವುದನ್ನು ಕಸ್ಟಮ್ಸ್ ಅಧಿಕಾರಿಗಳು ಪತ್ತೆ ಹಚ್ಚಿ ಆರೋಪಿಗಳ ವಿಚಾರಣೆ ನಡೆಸಿದ್ದಾರೆ.

ಇದಲ್ಲದೆ ಅಕ್ರಮವಾಗಿ ಸಾಗಿಸುತ್ತಿದ್ದ ಮತ್ತೋರ್ವ ಪ್ರಯಾಣಿಕನ ಬಳಿಯಿಂದ 6,42,740 ರೂ. ಮೌಲ್ಯದ ಸಿಗರೇಟ್ ಹಾಗೂ ಇ -ಸಿಗರೇಟ್ ವಶಪಡಿಸಿಕೊಳ್ಳಲಾಗಿದೆ.

No Comments

Leave A Comment