Log In
BREAKING NEWS >
ಮಾರ್ಚ್ 8ರ೦ದು ಮಹಾಶಿವರಾತ್ರೆ-ಎಲ್ಲಾ ಈಶ್ವರ ದೇವಸ್ಥಾನಗಳಲ್ಲಿ ಭಜನಾ ಸ೦ಕೀರ್ತನೆ ಜರಗಲಿದೆ.....

ಶರಣ್ ಪಂಪ್​ವೆಲ್ ವಿರುದ್ದ ಎಫ್​ಐಆರ್​ ದಾಖಲು

ತುಮಕೂರು:ಫೆ 01: ಪ್ರಚೋದನಕಾರಿ ಭಾಷಣ ಮಾಡಿದ್ದ ವಿಶ್ವ ಹಿಂದೂ ಪರಿಷತ್ ಪ್ರಾಂತ್ಯ ಕಾರ್ಯದರ್ಶಿ ಶರಣ್ ಪಂಪ್​ವೆಲ್​ ವಿರುದ್ಧ ತುಮಕೂರು ಜಿಲ್ಲೆಯ ತಿಲಕ್​ಪಾರ್ಕ್​ ಪೊಲೀಸ್ ಠಾಣೆಯಲ್ಲಿ ಎಫ್​ಐಆರ್​ ದಾಖಲು ಮಾಡಲಾಗಿದೆ.

ನಗರದ ಬಾರ್​ಲೈನ್​ ನಿವಾಸಿಯಾಗಿರುವ ಸೈಯದ್ ಬುರ್ಹಾನ್​ ಉದ್ದೀನ್​​ ಅವರು ನೀಡಿದ ದೂರಿನನ್ವಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ತುಮಕೂರಿನಲ್ಲಿ ಇತ್ತೀಚೆಗೆ ನಡೆದ ಶೌರ್ಯಯಾತ್ರೆಯಲ್ಲಿ ಭಾಗವಹಿಸಿ ಮಾತನಾಡಿದ್ದ ಶರಣ್ ಪಂಪ್ ವೆಲ್,ಬಿಜೆಪಿ ಮುಖಂಡ ಪ್ರವೀಣ್ ‌ನೆಟ್ಟಾರು ಹತ್ಯೆಯ ಪ್ರತೀಕಾರಕ್ಕಾಗಿಯೇ ಫಾಜಿಲ್ ಹತ್ಯೆಯಾಗಿದೆ. ಜಿಲ್ಲೆಯನ್ನು ಹಿಂದುತ್ವದ ಫ್ಯಾಕ್ಟರಿ ಮಾಡುತ್ತೇವೆ. ಗುಜರಾತ್ ಹತ್ಯಾಕಾಂಡವನ್ನು ಹಿಂದೂ ಪರಾಕ್ರಮ ಎಂದು ಹೊಗಳಿದ್ದರು. ಶರಣ್ ಭಾಷಣದಿಂದ ತುಮಕೂರಿನಲ್ಲಿ ಶಾಂತಿಭಂಗವಾಗಿ ಎಂದು ಆರೋಪಿಸಿದ್ದು, ಪ್ರಕರಣ ದಾಖಲಿಸಿಕೊಂಡು ತಿಲಕ್​ಪಾರ್ಕ್​ ಪೊಲೀಸರಿಂದ ತನಿಖೆ ನಡೆಸಲಾಗುತ್ತಿದೆ

No Comments

Leave A Comment