Log In
BREAKING NEWS >
"ಕರಾವಳಿಕಿರಣ ಡಾಟ್ ಕಾ೦"ನ ಎಲ್ಲಾ ಓದುಗರಿಗೆ,ಜಾಹೀರಾತುದಾರರಿಗೆ ಮತ್ತು ಅಭಿಮಾನಿಗಳಿಗೆ "ಶ್ರೀಅನ೦ತವೃತ"ದ ಶುಭಾಶಯಗಳು...

ಮಧ್ಯಪ್ರದೇಶ: ಕನ್ಹಾ ಅಭಯಾರಣ್ಯದಲ್ಲಿ 5 ಮರಿಗಳಿಗೆ ಜನ್ಮ ನೀಡಿದ ಹುಲಿ

ಭೋಪಾಲ್: ಮಧ್ಯಪ್ರದೇಶದ ಕನ್ಹಾ ಹುಲಿ ಸಂರಕ್ಷಿತ ಪ್ರದೇಶದಲ್ಲಿ (ಕೆಟಿಆರ್‌) ಹುಲಿಯೊಂದು ಐದು ಮರಿಗಳಿಗೆ ಜನ್ಮ ನೀಡಿದೆ ಎಂದು ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ.

ಮಧ್ಯಪ್ರದೇಶದ ಕನ್ಹಾ ಹುಲಿ ಸಂರಕ್ಷಿತ ಪ್ರದೇಶದಲ್ಲಿ (ಕೆಟಿಆರ್) ಹುಲಿಯೊಂದು ಐದು ಮರಿಗಳಿಗೆ ಜನ್ಮ ನೀಡಿದೆ ಎಂದು ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ. ಮಂಡ್ಲಾ ಜಿಲ್ಲೆಯ ಮೀಸಲು ಪ್ರದೇಶದ ಮುಕ್ಕಿ ವಲಯದಲ್ಲಿ ಶನಿವಾರ ಮೊದಲ ಬಾರಿಗೆ ಐದು ಮರಿಗಳೊಂದಿಗೆ ಟಿ-27 ಹೆಸರಿನ ಹೆಣ್ಣು ಹುಲಿ ಕಾಣಿಸಿಕೊಂಡಿದೆ ಎಂದು ಕೆಟಿಆರ್‌ನ ಕ್ಷೇತ್ರ ನಿರ್ದೇಶಕ ಎಸ್‌ಕೆ ಸಿಂಗ್ ತಿಳಿಸಿದ್ದಾರೆ.

ಸುಮಾರು ಒಂಬತ್ತು ವರ್ಷ ವಯಸ್ಸಿನ ಹುಲಿ, ಬಹುಶಃ ಕಳೆದ ವರ್ಷ ನವೆಂಬರ್‌ನಲ್ಲಿ ಮರಿಗಳಿಗೆ ಜನ್ಮ ನೀಡಿದೆ. ಈ ಮರಿಗಳಿಗೆ ಈಗ ಸುಮಾರು ಮೂರು ತಿಂಗಳ ವಯಸ್ಸಾಗಿದೆ. ಕೆಟಿಆರ್‌ಗೆ ಬರುವ ಪ್ರವಾಸಿಗರು ಮರಿಗಳೊಂದಿಗೆ ಡಿಜೆ ಎಂದು ಜನಪ್ರಿಯವಾಗಿರುವ ಹುಲಿಯನ್ನು ನೋಡಿ ಉತ್ಸುಕರಾಗಿದ್ದಾರೆ ಎಂದು ಕೆಟಿಆರ್‌ನ ಹಿರಿಯ ವನ್ಯಜೀವಿ ಪಶುವೈದ್ಯ ಸಂದೀಪ್ ಅಗರವಾಲ್ ಹೇಳಿದ್ದಾರೆ.

ಅಖಿಲ ಭಾರತ ಹುಲಿ ಗಣತಿ ವರದಿ 2018 ರ ಪ್ರಕಾರ, ಮಧ್ಯಪ್ರದೇಶವು 526 ಹುಲಿಗಳಿಗೆ ನೆಲೆಯಾಗಿದ್ದು, ಇದು ದೇಶದ ಯಾವುದೇ ರಾಜ್ಯದಲ್ಲಿ ಅತಿ ಹೆಚ್ಚು ಎನ್ನಲಾಗಿದೆ. ದೇಶದಲ್ಲಿ ಮುಂದಿನ ಹುಲಿ ಗಣತಿ ಕಾರ್ಯ ಕಳೆದ ವರ್ಷ ಪೂರ್ಣಗೊಂಡಿದ್ದು, ಇದೀಗ ವರದಿ ಬರಬೇಕಿದೆ.

ಮಧ್ಯಪ್ರದೇಶವು ಕನ್ಹಾ, ಬಾಂಧವಗಢ, ಪೆಂಚ್, ಸತ್ಪುರ ಮತ್ತು ಪನ್ನಾ ಸೇರಿದಂತೆ ಹಲವಾರು ಹುಲಿ ಸಂರಕ್ಷಿತ ಪ್ರದೇಶಗಳನ್ನು ಹೊಂದಿದೆ.

No Comments

Leave A Comment