Log In
BREAKING NEWS >
ಕರಾವಳಿಯಲ್ಲಿ ಹೆಚ್ಚಿದ ಬಿಸಿಲಿನ ತಾಪಮಾನ-ಸಾವು ಸ೦ಭವಿಸುವ ಸಾಧ್ಯತೆ-ಎಚ್ಚರ ಬಿಸಿಲಿನಲ್ಲಿ ಹೊರಗೆ ಬರಲೇ ಬೇಡಿ....

ಕಿಡ್ನಿ ಸಮಸ್ಯೆ ಕೆಎಂಸಿ ಆಸ್ಪತ್ರೆಯಲ್ಲಿದ್ದ ವ್ಯಕ್ತಿಗೆ ಹುಟ್ಟುಹಬ್ಬದ ದಿನದಂದು ಭಾಸ್ಕರ್ ಸೇರಿಗಾರ್ ರವರಿ೦ದ ಧನಸಹಾಯದ ಚೆಕ್ ವಿತರಣೆ

ಉಡುಪಿ:ಪೆರಂಪಳ್ಳಿ ವ್ಯಕ್ತಿಯಾದ ಅರುಣ್ ರವರು ಕಿಡ್ನಿ ಸಮಸ್ಯೆಯಿಂದ ಮಣಿಪಾಲ ಕೆಎಂಸಿ ಆಸ್ಪತ್ರೆಯಲ್ಲಿ ದಾಖಲಾಗಿದ್ದು ಅವರ ಹೆಚ್ಚಿನ ಚಿಕಿತ್ಸೆಗಾಗಿ ಅವರ ಪತ್ನಿ ಸವಿತಾ ರವರಿಗೆ ಸೋಮವಾರ ದಿನಾ೦ಕ 30-01-2023ರ ಮಹಿಷ ಮರ್ದಿನಿ ಲ್ಯಾಂಡ್ ಲಿಂಕ್ಸ್ ನ ಮಾಲಕರಾದ ಭಾಸ್ಕರ್ ಸೇರಿಗಾರ್ ರವರ ಹುಟ್ಟುಹಬ್ಬದ ಪ್ರಯುಕ್ತ ಅಲೆವೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ದಲ್ಲಿ ಚಂಡಿಕಯಾಗ ಮತ್ತು ಹೂವಿನ ಪೂಜೆ ಯನ್ನು ನೀಡುವುದರೊ೦ದಿಗೆ ರಾತ್ರಿ “ಕಾಂತರಾ”ಚಲನಚಿತ್ರವನ್ನು ಎಲ್ಇಡಿ ಕಾರ್ಯಕ್ರಮದಲ್ಲಿ ಉಡುಪಿಯ ಯಶೋಧ ಆಟೋ ಯೂನಿಯನ್ ನ ಮನವಿಯ ಮೇರೆಗೆ ವಿಶಿಷ್ಟ ರೀತಿಯಲ್ಲಿ ಅವರಿಗೆ ಸಹಾಯ ಮಾಡಿ ಹುಟ್ಟುಹಬ್ಬವನ್ನು ಆಚರಿಸಿದರು.

ಈ ಸಂದರ್ಭದಲ್ಲಿ ಅವರ ಧರ್ಮಪತ್ನಿ ಶ್ಯಾಮಲಾ ಮತ್ತು ಕೀರ್ತೇಶ್ ಶ್ರೀಮತಿ ಮಾಲಾ ಹಾಗೂ ಯೂನಿಯನ್ ಸದಸ್ಯರುಗಳಾದ ಪ್ರವೀಣ್ ಕುಂಜಿಬೆಟ್ಟು,ಹರೀಶ್ ಅಮೀನ್, ಶ್ರೀನಿವಾಸ್ ಕಪ್ಪೆಟು, ಹರೀಶ್ ಕಾಂಚನ್,ಸಂತೋಷ್ ಶೇರಿಗಾರ್, ಸದಾನಂದ ಸೇರಿಗಾರ್, ಪ್ರಸಾದ್ ಆಚಾರ್ಯ,ರವಿ ರಥಬೀದಿ ಇವರು ಉಪಸ್ಥಿತರಿದ್ದರು.

No Comments

Leave A Comment