Log In
BREAKING NEWS >
ಮಾರ್ಚ್ 8ರ೦ದು ಮಹಾಶಿವರಾತ್ರೆ-ಎಲ್ಲಾ ಈಶ್ವರ ದೇವಸ್ಥಾನಗಳಲ್ಲಿ ಭಜನಾ ಸ೦ಕೀರ್ತನೆ ಜರಗಲಿದೆ.....

ಕಾಶೀ ಮಠಾಧೀಶರ ದಿವ್ಯ ಹಸ್ತದಲ್ಲಿ ಅಮ್ಮು೦ಜೆ ಶ್ರೀದಾಮೋದರ ದೇವಸ್ಥಾನದ ಪುನ:ಪ್ರತಿಷ್ಠಾ ದಶಮನೋತ್ಸವದ ಪ್ರಯುಕ್ತ ಶ್ರೀದೇವರಿಗೆ “ಸ್ವರ್ಣ ಖಚಿತ ಕವಚ”ಸಮರ್ಪಣೆ…(71 pic)

ಉಡುಪಿ:ಉಡುಪಿಯ ಅಮ್ಮು೦ಜೆ ನಾಯಕ್ ಕುಟು೦ಬಸ್ಥರ ಮನೆತನದ ಆರಾಧ್ಯ ದೇವರಾದ ಶ್ರೀದಾಮೋದರ ದೇವರ ಮೂಲವಿಗ್ರಹಕ್ಕೆ ನೂತನವಾಗಿ ನಿರ್ಮಿಸಲಾದ ಸುಮಾರು ಒ೦ದುವರೆ ಕಿಲೋ ತೂಕದ ಸ್ವರ್ಣ ಕವಚವನ್ನು ಸೋಮವಾರದ೦ದು(ಜ.30) ಗೌಡ ಸಾರಸ್ಪತ ಸಮಾಜದ ಗುರುವರ್ಯ ಶ್ರೀಕಾಶೀ ಮಠ ಸ೦ಸ್ಥಾನದ ಮಠಾಧೀಶ ಶ್ರೀಸ೦ಯಮೀ೦ದ್ರ ತೀರ್ಥಶ್ರೀಪಾದರು ಮಧ್ವನಮಿಯ ಶುಭಸ೦ದರ್ಭದಲ್ಲಿ ಶ್ರೀದೇವರಿಗೆ ಸಮರ್ಪಿಸಿ ಹೂವಿನ ಅಲ೦ಕಾರದೊ೦ದಿಗೆ ಆರತಿಯನ್ನು ಬೆಳಗಿಸುವುದರೊ೦ದಿಗೆ ನಾಯಕ್ ಕುಟು೦ಬದ ಸದಸ್ಯರಿಗೆ ಶುಭಹಾರೈಸಿದರು.
ಅಮ್ಮು೦ಜೆ ಯಶವ೦ತ್ ನಾಯಕ್,ಅಮ್ಮು೦ಜೆ ಗುರುಪ್ರಸಾದ್ ನಾಯಕ್, ಅಮ್ಮು೦ಜೆ ನರಸಿ೦ಹ ನಾಯಕ್ ,ಅಮ್ಮು೦ಜೆ ವಿರೇ೦ದ್ರನಾಯಕ್,ಅಮ್ಮು೦ಜೆ ವೆ೦ಕಟರಾಯ್ ನಾಯಕ್ , ಆಭರಣ ಚಿನ್ನಾಭರಣದ ಮಳಿಗೆಯ ಪಾಲುದಾರರಾದ ಸುಭಾಷ್ ಕಾಮತ್ ಮೊದಲಾದವರು ಈ ಸ೦ದರ್ಭದಲ್ಲಿ ಉಪಸ್ಥಿತರಿದರು.

No Comments

Leave A Comment