Log In
BREAKING NEWS >
ಕರಾವಳಿಯಲ್ಲಿ ಹೆಚ್ಚಿದ ಬಿಸಿಲಿನ ತಾಪಮಾನ-ಸಾವು ಸ೦ಭವಿಸುವ ಸಾಧ್ಯತೆ-ಎಚ್ಚರ ಬಿಸಿಲಿನಲ್ಲಿ ಹೊರಗೆ ಬರಲೇ ಬೇಡಿ....

ಪಠಾಣ್ ಸಿನಿಮಾಗೆ ಇಂಡಿಯನ್ ಪಠಾಣ್ ಅಂತ ಮರುನಾಮಕರಣ ಮಾಡ್ತಾರಂತೆ ಕಂಗನಾ, ಯಾಕೆ ಅಂದರೆ…

ಮುಂಬೈ: ನಟಿ ಕಂಗಣಾ ರನೌತ್, ಶಾರೂಖ್ ಖಾನ್ ನಟನೆಯ ಪಠಾಣ್ ಚಿತ್ರದ ಬಗ್ಗೆ ಮಾತನಾಡಿದ್ದು ತಾವು ಆ ಸಿನಿಮಾಗೆ ಇಂಡಿಯನ್ ಪಠಾಣ್ ಎಂದು ಮರುನಾಮಕರಣ ಮಾಡುವುದಾಗಿ ಹೇಳಿದ್ದಾರೆ.

ಟ್ವಿಟರ್ ಹ್ಯಾಂಡಲ್ ನಲ್ಲಿ ಬರೆದಿರುವ ಕಂಗನಾ,  ಸಿನಿಮಾವನ್ನು ದ್ವೇಷದ ಮೇಲೆ ಪ್ರೀತಿಯ ಗೆಲುವು ಎಂದು ಹೇಳುತ್ತಿರುವವರಿಗೆ ಕೇಳುತ್ತೇನೆ, ಯಾರ ಪ್ರೀತಿಯ ಮೇಲೆ ಯಾರ ಗೆಲುವು? ಯಾರು ಟಿಕೆಟ್ ಖರೀದಿಸಿ ಸಿನಿಮಾವನ್ನು ಯಶಸ್ವಿಗೊಳಿಸುತ್ತಿದ್ದಾರೆ ಎಂಬುದರ ಬಗ್ಗೆ ನಿಖರವಾಗಿರೋಣ.

ಹೌದು, ಇದು ಶೇ.80 ರಷ್ಟು ಹಿಂದೂಗಳು ಜೀವಿಸುತ್ತಿರುವ ಆದರೂ ಪಠಾಣ್ ಅಂತಹ ಸಿನಿಮಾ ಬಂದಿರುವುದು ಭಾರತದ ಪ್ರೀತಿ ಹಾಗೂ ಸಮಗ್ರತೆ ಎಂದು ಕಂಗಣಾ ಹೇಳಿದ್ದಾರೆ.

ಅಷ್ಟೇ ಅಲ್ಲದೇ ಪಠಾಣ್ ಸಿನಿಮಾವನ್ನು ತಾವು ಇಂಡಿಯನ್ ಪಠಾಣ್ ಎಂದು ಮರುನಾಮಕರಣ ಮಾಡುವುದಾಗಿ ಹೇಳಿರುವ ಕಂಗನಾ, ಅದಕ್ಕೆ ಕಾರಣವನ್ನೂ ನೀಡಿದ್ದು, ಭಾರತೀಯ ಮುಸ್ಲಿಮರು ದೇಶಭಕ್ತರು ಹಾಗೂ ಅಫ್ಘಾನ್ ನ ಪಠಾಣರಿಗಿಂತಲೂ ಭಿನ್ನರಾಗಿರುವವರು ಎಂದು ಹೇಳಿದ್ದಾರೆ.

ನಮ್ಮ ಶತ್ರು ದೇಶ ಪಾಕಿಸ್ತಾನ ಹಾಗೂ ಐಎಸ್ಐಎಸ್ ನ್ನು ಒಳ್ಳೆಯ ರೀತಿಯಲ್ಲಿ ತೋರಿಸಿರುವ ಸಿನಿಮಾ ಯಶಸ್ವಿಯಾಗಿ ಪ್ರದರ್ಶನವಾಗುತ್ತಿದ್ದು, ಇದು ದ್ವೇಷ ಹಾಗೂ ನಿರ್ಣಯಗಳನ್ನೂ ಮೀರಿದ ಭಾರತದ ಆತ್ಮವಾಗಿದೆ ಇದೇ ಭಾರತವನ್ನು ಶ್ರೇಷ್ಠವಾಗಿರಿಸಿದೆ.  ಇದು ಶತ್ರುಗಳ ಸಣ್ಣ ರಾಜಕೀಯ ಹಾಗೂ ದ್ವೇಷದ ವಿರುದ್ಧ ಭಾರತದ ಪ್ರೀತಿಯ ಗೆಲುವಾಗಿದೆ. ಇದನ್ನು ಅತಿಯಾದ ನಿರೀಕ್ಷೆಗಳಿಟ್ಟುಕೊಂಡಿರುವವರು ಗಮನಿಸಬೇಕು ಎಂದು ಕಂಗನಾ ಹೇಳಿದ್ದಾರೆ.

No Comments

Leave A Comment