Log In
BREAKING NEWS >
ನವೆ೦ಬರ್ 27ರ೦ದು ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ ದೀಪೋತ್ಸವ ಕಾರ್ಯಕ್ರಮ ಜರಗಲಿದೆ...

ಹೈಡನ್ ಬರ್ಗ್ ವರದಿ ಪರಿಣಾಮ: ಅದಾನಿ ಷೇರುಗಳು ಶೇ.20 ರಷ್ಟು ಕುಸಿತ

ಮುಂಬೈ: ಅದಾನಿ ಸಮೂಹದ ಷೇರುಗಳಿಗೆ ಈ ಶುಕ್ರವಾರ ಶುಭವಾಗಿಲ್ಲ. ಅಮೇರಿಕಾ ಮೂಲದ ಹೂಡಿಕೆ ಸಂಶೋಧನಾ ಸಂಸ್ಥೆ ಹೈಡನ್ ಬರ್ಗ್ ರಿಸರ್ಚ್ ಅದಾನಿ ಸಮೂಹದ ಬಗ್ಗೆ ಹಾನಿಕರ ಆರೋಪಗಳ ಪರಿಣಾಮವಾಗಿ ಷೇರುಗಳು ಕುಸಿತ ಕಂಡಿದೆ.

ಬಿಎಸ್ ಇ ನಲ್ಲಿ ಅದಾನಿ ಟೋಟಲ್ ಗ್ಯಾಸ್ ನ ಷೇರುಗಳು ಶೇ.19.65 ರಷ್ಟು ಕುಸಿತ ಕಂಡಿದ್ದರೆ, ಅದಾನಿ ಟ್ರಾನ್ಸ್ಮಿಷನ್ ಶೇ.19 ರಷ್ಟು ಕುಸಿತ ಕಂಡಿದೆ. ಅದಾನಿ ಗ್ರೀನ್ ಎನರ್ಜಿ ಶೇ.15.50 ರಷ್ಟು ಅದಾನಿ ಎಂಟರ್ ಪ್ರೈಸಸ್ ಶೇ.6.19 ರಷ್ಟು ಕುಸಿತ ಕಂಡಿದೆ.

ಅದಾನಿ ಪೋರ್ಟ್ ಹಾಗೂ ವಿಶೇಷ ಆರ್ಥಿಕ ಜೋನ್ ನ ಷೇರುಗಳು ಶೇ.5.31 ರಷ್ಟು ಅದಾನಿ ವಿಲ್ಮಾರ್ ಷೇರುಗಳು ಶೇ.5 ರಷ್ಟು ಹಾಗೂ ಅದಾನಿ ಪವರ್ ಷೇರುಗಳು ಶೇ.4.99 ಕ್ಕೆ ಕುಸಿತ ಕಂಡಿದೆ.

No Comments

Leave A Comment