ಸೆರಮ್ ಇನ್‌ಸ್ಟಿಟ್ಯೂಟ್ ನಿಂದ ಸರ್ವಿಕಲ್ ಕ್ಯಾನ್ಸರ್ ಎಚ್‌ಪಿವಿ ಲಸಿಕೆ ಸರ್ವವಾಕ್ ಬಿಡುಗಡೆ!
ನವದೆಹಲಿ: ಭಾರತದ ಖ್ಯಾತ ಲಸಿಕೆ ತಯಾರಿಕಾ ಸಂಸ್ಥೆ ಇಂದು ಸರ್ವಿಕಲ್ ಕ್ಯಾನ್ಸರ್ ನಲ್ಲಿ ಬಳಕೆ ಮಾಡುವ ಎಚ್‌ಪಿವಿ ಲಸಿಕೆ ಸರ್ವವಾಕ್ ಬಿಡುಗಡೆ ಮಾಡಿದೆ.
ಸೆರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ (ಎಸ್‌ಐಐ) ನಿರ್ದೇಶಕ ಪ್ರಕಾಶ್ ಕುಮಾರ್ ಸಿಂಗ್ ಅವರು ಇಂದು ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಅವರ ನಿವಾಸದಲ್ಲಿ ಗರ್ಭಕಂಠದ (ಸರ್ವಿಕಲ್ ಕ್ಯಾನ್ಸರ್) ಕ್ಯಾನ್ಸರ್‌ಗೆ ಭಾರತದಲ್ಲಿ ತಯಾರಿಸಿದ ಎಚ್‌ಪಿವಿ ಲಸಿಕೆ ಸರ್ವವಾಕ್ ಅನ್ನು ಪ್ರಸ್ತುತಪಡಿಸಿದರು.
ಇದನ್ನು ಜೈವಿಕ ತಂತ್ರಜ್ಞಾನ ವಿಭಾಗವು SII ಸಹಯೋಗದೊಂದಿಗೆ ಅಭಿವೃದ್ಧಿಪಡಿಸಿದೆ. ವಿಶೇಷವಾಗಿ ಮಹಿಳೆಯರಿಗೆ, ಗರ್ಭಕಂಠದ ಕ್ಯಾನ್ಸರ್‌ನಿಂದ ಅವರು ಅನುಭವಿಸುವ ತೊಂದರೆಯನ್ನು ದೂರ ಮಾಡಬಹುದು. ಇದು ಸಂಪೂರ್ಣವಾಗಿ ಸ್ವದೇಶಿ ಲಸಿಕೆ ಎಂಬುದು ಹೆಮ್ಮೆಯ ವಿಷಯ ಎಂದು ಕೇಂದ್ರ ಸಚಿವ ಜಿತೇಂದ್ರ ಸಿಂಗ್ ತೋಮರ್ ಹೇಳಿದ್ದಾರೆ.