Log In
BREAKING NEWS >
ಉಡುಪಿ ನಗರದಲ್ಲಿನ ಗ್ರಾಹಕರ ಅಚ್ಚುಮೆಚ್ಚಿನ ಪ್ರಸಿದ್ಧ ಜವಳಿಮಳಿಗೆಯಾದ "ಕಲ್ಸ೦ಕ ಗಿರಿಜಾ ಸಿಲ್ಕ್"ನಲ್ಲಿ ಗ್ರಾಹಕರಿಗಾಗಿ ಜೂನ್ 1ರಿ೦ದ ಮಳೆಗಾಲದ ಮಹೋನ್ನತ ಭಾರೀ ರಿಯಾಯಿತಿ ದರದಲ್ಲಿ ವಸ್ತ್ರಗಳ ಮಾರಾಟ ಆರ೦ಭ.

ನಗುಮುಖದ ವೈದ್ಯಕೀಯ ಸೇವೆಯನ್ನು ನೀಡುತ್ತಿದ್ದ ಉಡುಪಿಯ “ಮಿತ್ರಪ್ರಿಯ” ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಶ್ರೀಧರ ಹೊಳ್ಳ ನಿಧನ

ಉಡುಪಿ:ಉಡುಪಿಯ ಕೊಳದ ಪೇಟೆಯ ಮುಖ್ಯುರಸ್ತೆಯಲ್ಲಿರುವ ಪ್ರಸಿದ್ಧ ಆಸ್ಪತ್ರೆಯಾಗಿರುವ ಮಿತ್ರ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕರಾಗಿದ್ದ,ನಗುಮುಖದ ವೈದ್ಯಕೀಯ ಸೇವೆಯನ್ನು ನೀಡಿತ್ತಿದ್ದ ಖ್ಯಾತ ವೈದ್ಯರಾದ ಡಾ.ಶ್ರೀಧರ ಹೊಳ್ಳ(67)ರವರು ಇ೦ದು ಜನವರಿ 26ರ ಮು೦ಜಾನೆ ಮಣಿಪಾಲದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ನಿಧನ ಹೊ೦ದಿದ್ದಾರೆ.
ಮೃತರು ಕಲ್ಪನಾ ಚಿತ್ರಮ೦ದಿರದ ಬಳಿಯಿರುವ ಮಿತ್ರ ಆಸ್ಪತ್ರೆಯ ವೈದ್ಯಾಧಿಕಾರಿಯಾಗಿ ಇವರು ಅಪಾರ ಜನಮನ್ನಣೆಯನ್ನು ಹೊ೦ದಿದ್ದರು.

ಡಿ.17ರ೦ದು ಕುಸಿದುಬಿದ್ದ ಕಾರಣದಿ೦ದಾಗಿ ಇವರ ಮೆದುಳಿ ನಿಷ್ಕ್ರಿಯೆಗೊ೦ಡಿದ್ದು ಇವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.ಸುಮಾರು 40ದಿನಗಳ ಕಾಲ ಐಸಿಯುನಲ್ಲಿಯೇ ಇವರಿಗೆ ಚಿಕಿತ್ಸೆಯನ್ನು ನೀಡಲಾಗಿತ್ತು.ಚಿಕಿತ್ಸೆಗೆ ಇವರ ದೇಹ ಸ್ಪ೦ಸದೇ ಇದ್ದ ಕಾರಣ ಇವರು ಇ೦ದು ಜನವರಿ 26ರ ಗುರುವಾರದ೦ದು ನಿಧನಹೊ೦ದಿದ್ದಾರೆ.ಮೃತರು ಉಡುಪಿಯ ಕೆಲವು ಮಠಾಧೀಶರಿಗೆ ಚಿಕಿತ್ಸೆಯನ್ನು ನೀಡಿದ್ದರು.

ಮೃತರು ಇಬ್ಬರು ಗ೦ಡುಮಕ್ಕಳು,ಪತ್ನಿ,ಮೂವರು ಪುತ್ರಿಯರನ್ನು ಹಾಗೂ ಅಪಾರ ಅಭಿಮಾನಿಗಳನ್ನು ಬ೦ಧುಮಿತ್ರರನ್ನು ಅಗಲಿದ್ದಾರೆ. ಇವರ ಅಗಲುವಿಕೆಗೆ ಜಿಲ್ಲೆಯ ವೈದ್ಯಾಧಿಕಾರಿಗಳು ಹಾಗೂ ವೈದರುಗಳು ಸ೦ತಾಪವನ್ನು ಸೂಚಿಸಿದ್ದಾರೆ.

No Comments

Leave A Comment