Log In
BREAKING NEWS >
"ಕರಾವಳಿಕಿರಣ ಡಾಟ್ ಕಾ೦"ನ ಎಲ್ಲಾ ಓದುಗರಿಗೆ,ಜಾಹೀರಾತುದಾರರಿಗೆ ಮತ್ತು ಅಭಿಮಾನಿಗಳಿಗೆ "ಶ್ರೀಅನ೦ತವೃತ"ದ ಶುಭಾಶಯಗಳು...

ಮಂಗಳೂರು: ವಿವಾಹಿತ ಯುವತಿ ನೇಣಿಗೆ ಶರಣು

ಮಂಗಳೂರು:ಜ 23. ವಿವಾಹಿತ ಯುವತಿಯೊಬ್ಬರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ಕೋಟೆಕಾರಿನ ಮಾಡೂರು ಎಂಬಲ್ಲಿ ಭಾನುವಾರ ಸಂಜೆ ನಡೆದಿದೆ.

ಕೋಟೆಕಾರಿನ ಮಾಡೂರು ನಿವಾಸಿ ಚಂದ್ರಶೇಖರ್- ಗಿರಿಜಾ ದಂಪತಿಯ ಪುತ್ರಿ, ಒಟ್ಟೆಕಾಯರ್ ಮನೆ ನಿವಾಸಿ ಹರೀಶ್ ಎಂಬವರ ಪತ್ನಿ ದಿವ್ಯಾ(26) ಮೃತ ಯುವತಿಯಾಗಿದ್ದಾರೆ.

ಜ.21ರಂದು ದಿವ್ಯಾ ತನ್ನ ಪತಿ ಹರೀಶ್ ಜೊತೆ ನೆರೆಮನೆಯಲ್ಲಿ ನಡೆದ ಕಾರ್ಯಕ್ರಮವೊಂದಕ್ಕೆ ತೆರಳಿದ್ದು, ಈ ವೇಳೆ ಪತಿ-ಪತ್ನಿ ನಡುವೆ ಮನಸ್ತಾಪವಾಗಿ ಬೇಸರಗೊಂಡು ದಿವ್ಯಾ ಒಬ್ಬರೇ ಮನೆಗೆ ಹಿಂದಿರುಗಿದ್ದರು ಎನ್ನಲಾಗಿದೆ.

ಈ ವಿಚಾರವಾಗಿ ಅಸಮಾಧಾನಗೊಂಡಿದ್ದ ದಿವ್ಯಾ ಜ.22ರಂದು ಸಂಜೆ ಮನೆಯ ಬೆಡ್ ರೂಂನಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಬಳಿಕ ತಾಯಿ ಗಿರಿಜಾ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ವೈದ್ಯರು ಪರೀಕ್ಷಿಸಿ ಅದಾಗಲೇ ಮೃತಪಟ್ಟಿದ್ದಾರೆ ಎಂದು ಹೇಳಿದ್ದಾರೆ.

ದಿವ್ಯಾ ಒಂದೂವರೆ ವರ್ಷದ ಹಿಂದೆ ಹರೀಶ್ ರನ್ನು ಪ್ರೀತಿಸಿ ವಿವಾಹವಾಗಿದ್ದರು.

ಮೃತರ ತಾಯಿ ಪೊಲೀಸ್ ನೀಡಿದ ದೂರಿನಂತೆ ಸುರತ್ಕಲ್ ಠಾಣಾ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

No Comments

Leave A Comment