Log In
BREAKING NEWS >
ಜೂ.26ರ೦ದು ಉಡುಪಿ ಶ್ರೀಪುತ್ತಿಗೆ ಮಠದ ೪ನೇ ಪರ್ಯಾಯಕ್ಕೆ ಕಟ್ಟಿಗೆ ಮುಹೂರ್ತ ಕಾರ್ಯಕ್ರಮ ಜರಗಲಿದೆ.....

ಬೆಂಗಳೂರು: ಅಂತರ ರಾಷ್ಟ್ರೀಯ ಸಿರಿಧಾನ್ಯ, ಸಾವಯವ ಮೇಳ- 2023, ಸಿಎಂ ಬೊಮ್ಮಾಯಿ ಚಾಲನೆ

ಬೆಂಗಳೂರು: ಕೃಷಿ ಇಲಾಖೆ ವತಿಯಿಂದ ಬೆಂಗಳೂರಿನಲ್ಲಿ ಆಯೋಜಿಸಿರುವ ಮೂರು ದಿನಗಳ ‘ಅಂತರ ರಾಷ್ಟ್ರೀಯ ಸಿರಿಧಾನ್ಯ, ಸಾವಯವ ಮೇಳ- 2023ಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇಂದು ಚಾಲನೆ ನೀಡಿದರು. ಕೇಂದ್ರ ಕೃಷಿ ಖಾತೆ ರಾಜ್ಯ  ಸಚಿವರಾದ ಕೈಲಾಸ್‌ನಾಥ್ ಚೌಧರಿ, ಶೋಭಾ ಕರಂದ್ಲಾಜೆ, ರಾಜ್ಯ ಕೃಷಿ ಸಚಿವ ಬಿ.ಸಿ. ಪಾಟೀಲ್ ಮತ್ತಿತರರು ಉಪಸ್ಥಿತರಿದ್ದರು.

 ನಂತರ ಮಾತನಾಡಿದ ಮುಖ್ಯಮಂತ್ರಿ, ಇಂದಿನ ಒತ್ತಡಯುಕ್ತ ಜೀವನಶೈಲಿ ನಿಭಾಯಿಸಲು, ಮಾನವನಿಗೆ ಸಿರಿಧಾನ್ಯ ಆಹಾರ ಪದಾರ್ಥಗಳು ಸಂಜೀವಿನಿಯಂತೆ ದೊರೆತಿವೆ. ಸ್ಥೂಲಕಾಯತೆ ಮತ್ತು ಮಧುಮೇಹದಂತಹ ರೋಗಗಳನ್ನು ನಿಯಂತ್ರಿಸಲು ಸಿರಿಧಾನ್ಯಗಳು ನೆರವಾಗುತ್ತವೆ ಎಂದರು.

ಸಚಿವ ಬಿ.ಸಿ. ಪಾಟೀಲ್ ಮಾತನಾಡಿ, ಹಿಂದೆ ಸಿರಿಧಾನ್ಯವೆಂದರೆ ಬಡವರ ಆಹಾರವೆಂದಾಗಿತ್ತು.ಈಗ ಸಿರಿಧಾನ್ಯವೆನ್ನುವುದು ಸಿರಿವಂತರ ಆಹಾರವಾಗಿದೆ‌.ಇದಕ್ಕೆ ಜನರ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸುತ್ತಿರುವುದು ಪ್ರಮುಖ ಕಾರಣವಾಗಿದೆ.
ಸಿರಿಧಾನ್ಯ ತಿಂದವರು ಬುಲೇಟ್‌ನಂತೆ ಶಕ್ತಿವಂತರಾಗುತ್ತಾರೆ ಎಂದು ತಿಳಿಸಿದರು.

ಪ್ರತಿ ಹೆಕ್ಟೇರ್‌ಗೆ 10 ಸಾವಿರ ರೂಪಾಯಿ ಪ್ರೋತ್ಸಾಹ ಧನ ಸಿರಿಧಾನ್ಯ ರೈತರಿಗೆ ನೀಡಲಾಗುತ್ತಿದೆ. ಸಿರಿಧಾನ್ಯ ಬಳಕೆ ಹೆಚ್ಚುತ್ತಿದ್ದು ಒಂದು ಕಾಲದಲ್ಲಿ ಫುಡ್ ಸೆಕ್ಯೂರಿಟಿ ಬಗ್ಗೆ ಗಮನಕೊಡುತ್ತಿದ್ದೆವು.ಈಗ ನ್ಯೂಟ್ರಿಷಿಯನ್ ಬಗ್ಗೆ ಹೆಚ್ಚು ಗಮನ ಹರಿಸಲಾಗುತ್ತಿದೆ. ಕೇಂದ್ರ ಸೇರಿದಂತೆ‌ ರಾಜ್ಯ ಸರ್ಕಾರ ಜನರ ಆರೋಗ್ಯದ ಬಗ್ಗೆ ಹೆಚ್ಚು‌ ಗಮನ ಹರಿಸುತ್ತಿವೆ ಎಂದರು.

 ಬೆಂಗಳೂರಿನಲ್ಲಿ ಪ್ರಸಕ್ತ 80 ಹೊಟೇಲ್‌ಗಳಲ್ಲಿ ಸಿರಿಧಾನ್ಯ ಪೂರೈಕೆ  ಆಗುತ್ತಿದೆ. ಬೊಮ್ಮಾಯಿ ಅವರು ಮುಖ್ಯಮಂತ್ರಿಯಾದ ಮೊದಲ ದಿನವೇ ರೈತ ವಿದ್ಯಾನಿಧಿ ಯೋಜನೆ ಜಾರಿಗೊಳಿಸಿ ಇಡೀ ದೇಶಕ್ಕೆ ಮಾದರಿ ಸಿಎಂ ಆಗಿದ್ದಾರೆ.ಈ  ರೈತ ವಿದ್ಯಾನಿಧಿ ಯೋಜನೆ ರೈತಕಾರ್ಮಿಕ ಮಕ್ಕಳಿಗೂ ವಿಸ್ತರಿಸಲಾಗಿದೆ ಎಂದು ಸಚಿವರು ತಿಳಿಸಿದರು.

No Comments

Leave A Comment