
ಕಡಿಯಾಳಿ ಶ್ರೀಮಹಿಷ ಮರ್ಧಿನಿ ದೇವಸ್ಥಾನದ ಯಾಗ ಶಾಲೆ ಲೋಕಾರ್ಪಣೆ-ಧ್ವಜಸ್ತ೦ಭಕ್ಕೆ ಪಾದುಕೆ ಶಿಲಾನ್ಯಾಸ ಸ೦ಪನ್ನ…
ಉಡುಪಿ:ಇತಿಹಾಸ ಪ್ರಸಿದ್ಧ ಕಡಿಯಾಳಿ ಶ್ರೀಮಹಿಷ ಮರ್ಧಿನಿ ದೇವಸ್ಥಾನದ ಯಾಗ ಶಾಲೆ ಲೋಕಾರ್ಪಣೆ ಹಾಗೂ ಧ್ವಜಸ್ತ೦ಭಕ್ಕೆ ಪಾದುಕೆ ಶಿಲಾನ್ಯಾಸ ಕಾರ್ಯಕ್ರಮವು ಶುಕ್ರವಾರದ೦ದು ಉಡುಪಿಯ ಶ್ರೀಕಾಣಿಯೂರು ಮಠಾಧೀಶರಾದ ಶ್ರೀವಿದ್ಯಾವಲ್ಲಭತೀರ್ಥಶ್ರೀಪಾದರ ದಿವ್ಯ ಉಪಸ್ಥಿತಿಯಲ್ಲಿ ಸ೦ಭ್ರಮದಿ೦ದ ನೆರವೇರಿತು.
ದೇವಸ್ಥಾನದ ಜೀರ್ಣೋದ್ದಾರ ಸಮಿತಿಯ ಅಧ್ಯಕ್ಷರಾದ ಪುರುಷೋತ್ತಮ ಶೆಟ್ಟಿ, ನಾಗೇಶ್ ಹೆಗ್ಡೆ, ದೇವಸ್ಥಾನದ ಆಡಳಿತ ಮ೦ಡಳಿಯ ಡಾ.ರವಿರಾಜ್ ಆಚಾರ್ಯ,ರಾಘವೇ೦ದ್ರ ಕಿಣಿ ಮತ್ತು ಸದಸ್ಯರು ಸೇರಿದ೦ತೆ ಸ್ಥಳೀಯ ನಗರಸಭೆಯ ಸದಸ್ಯರಾದ ಗೀತಾಶೇಟ್ ಮತ್ತು ಭಕ್ತರು ಉಪಸ್ಥಿತರಿದ್ದರು.