Log In
BREAKING NEWS >
ಜೂ.26ರ೦ದು ಉಡುಪಿ ಶ್ರೀಪುತ್ತಿಗೆ ಮಠದ ೪ನೇ ಪರ್ಯಾಯಕ್ಕೆ ಕಟ್ಟಿಗೆ ಮುಹೂರ್ತ ಕಾರ್ಯಕ್ರಮ ಜರಗಲಿದೆ.....

ಭ್ರಜಿಲ್ ಗಲಭೆ: ಮಾಜಿ ಅಧ್ಯಕ್ಷ ಜೈರ್ ಬೋಲ್ಸನಾರೊ ಬಂಧನ

ಬ್ರೆಸಿಲಿಯಾ: ಸರ್ಕಾರಿ ಕಟ್ಟಡಗಳ ಮೇಲಿನ ದಾಳಿ, ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಭ್ರಜಿಲ್ ನ ಮಾಜಿ ಅಧ್ಯಕ್ಷ ಜೈರ್ ಬೋಲ್ಸನಾರೊ ಅವರನ್ನು ಬಂಧಿಸಲಾಗಿದೆ. ಬೋಲ್ಸನಾರೊ ಅಮೆರಿಕಾದಿಂದ ಭ್ರಸಿಲಿಯಾಕ್ಕೆ ಬರುತ್ತಿದ್ದಂತೆಯೇ ಅವರನ್ನು ಬಂಧಿಸಲಾಗಿದೆ.

ಜನವರಿ 8 ರಂದು ಬ್ರೆಸಿಲಿಯಾದಲ್ಲಿ ಸರ್ಕಾರದ ಕಟ್ಟಡಗಳ ಮೇಲೆ ನಡೆದ ದಾಳಿ ವೇಳೆಯಲ್ಲಿ ಕಿಟಕಿ, ಪೀಠೋಪಕರಣಗಳನ್ನು ಒಡೆದು ಹಾಕಿ ಅಮೂಲ್ಯವಾದ ಕಲಾಕೃತಿಗಳನ್ನು ನಾಶಪಡಿಸಲಾಗಿತ್ತು. ಈ ದಾಳಿ ನಂತರ ಸುಮಾರು 2,000ಕ್ಕೂ ಹೆಚ್ಚು ಗಲಭೆಕೋರರನ್ನು ಬಂಧಿಸಲಾಗಿದೆ.

ಅಧ್ಯಕ್ಷ ಲೂಯಿಜ್ ಇನಾಸಿಯೊ ಲುಲಾ ಡಾ ಸಿಲ್ವಾ ವಿರುದ್ಧ ಚುನಾವಣೆ ಸೋಲಿನಿಂದ ಕೋಪಗೊಂಡಿರುವ ಬಲಪಂಥೀಯ ನಾಯಕ ಬೋಲ್ಸನಾರೊ ಅವರನ್ನು ಕೂಡಾ ವಿಚಾರಣೆ ನಡೆಸುವಂತೆ ಸುಪ್ರೀಂಕೋರ್ಟ್ ಶುಕ್ರವಾರ ಘೋಷಿಸಿತ್ತು.

2022ರಲ್ಲಿ ನಡೆದಿದ್ದ ಅಧ್ಯಕ್ಷೀಯ ಚುನಾವಣೆಯ ಕ್ರಮ ಬದ್ಧತೆ ಪ್ರಶ್ನಿಸಿ ಬೋಲ್ಸಾನಾರೊ ವಿಡಿಯೋ ಫೋಸ್ಟ್ ಮಾಡಿದ ನಂತರ ಪ್ರಾಸಿಕ್ಯೂಟರ್ ಜನರಲ್ ಕಚೇರಿ ಮನವಿ ಮೇರೆಗೆ ಅವರನ್ನು ವಿಚಾರಣೆ ನಡೆಸಲಾಗುತ್ತಿದೆ. ಚುನಾವಣೆ ಸೋಲನ್ನು ಸ್ವೀಕರಿಸದ ಬೋಲ್ಸಾನಾರೊ  ಅಮೆರಿಕಾಕ್ಕೆ ತೆರಳಿದ್ದರು.

No Comments

Leave A Comment