Log In
BREAKING NEWS >
ಉಡುಪಿ ನಗರದಲ್ಲಿನ ಗ್ರಾಹಕರ ಅಚ್ಚುಮೆಚ್ಚಿನ ಪ್ರಸಿದ್ಧ ಜವಳಿಮಳಿಗೆಯಾದ "ಕಲ್ಸ೦ಕ ಗಿರಿಜಾ ಸಿಲ್ಕ್"ನಲ್ಲಿ ಗ್ರಾಹಕರಿಗಾಗಿ ಜೂನ್ 1ರಿ೦ದ ಮಳೆಗಾಲದ ಮಹೋನ್ನತ ಭಾರೀ ರಿಯಾಯಿತಿ ದರದಲ್ಲಿ ವಸ್ತ್ರಗಳ ಮಾರಾಟ ಆರ೦ಭ.

ಬಂಟ್ವಾಳ: ರಿಜಿಸ್ಟ್ರೇಷನ್ ಆಗದೇ, ಇನ್ಸೂರೆನ್ಸ್ ಇಲ್ಲದ ಕಾರನ್ನು ವಶಪಡಿಸಿಕೊಂಡ ಪೊಲೀಸರು

ಬಂಟ್ವಾಳ: ಎರಡು ವರ್ಷಗಳಿಂದ ರಿಜಿಸ್ಟ್ರೇಷನ್ ಆಗದೇ, ಇನ್ಸೂರೆನ್ಸ್ ಇಲ್ಲದ ಬಿಳಿ ಬಣ್ಣದ ರೆನಾಲ್ಟ್ ಕ್ವಿಡ್ ಕಾರೊಂದು ಜಿಲ್ಲೆಯಾದ್ಯಂತ ಸುತ್ತಾಡುತ್ತಿದ್ದು, ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

ವಿಟ್ಲ ಪಡ್ನೂರು ಗ್ರಾಮದ ಪಡಾರು ಮದಕ ನಿವಾಸಿ ಸತೀಶ್ ಗೌಡ ಎಂಬವರು ಎರಡು ವರ್ಷದ ಹಿಂದೆ ಕ್ವಿಡ್ ಕಾರು ಖರೀದಿಸಿದ್ದರೆನ್ನಲಾಗಿದೆ.

ಈವರೆಗೂ ರಿಜಿಸ್ಟ್ರೇಷನ್ ಮಾಡಿಸದೇ ಇನ್ಸೂರೆನ್ಸ್ ಇಲ್ಲದೇ ಜಿಲ್ಲೆಯಾದ್ಯಂತ ಕಾರು ಸಂಚರಿಸುತ್ತಿದ್ದು, ಈ ಬಗ್ಗೆ ಖಚಿತ ಮಾಹಿತಿ ಪಡೆದ ವಿಟ್ಲ ಪೊಲೀಸರು ಇಂದು ಬೆಳಗ್ಗೆ ವಿಟ್ಲದಲ್ಲಿ ಕಾರನ್ನು ತಡೆದು ವಿಚಾರಿಸುತ್ತಿದ್ದಂತೆ ವಿಚಾರ ಬಯಲಾಗಿದೆ. ಕಾರನ್ನು ವಶಕ್ಕೆ ಪಡೆದ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಎಲ್ಲಾ ದಾಖಲೆಗಳೂ ಸರಿಯಾಗಿದ್ದರೂ ಅಪಘಾತವಾದರೆ ಪರಿಹಾರ ಹಣಕ್ಕಾಗಿ ವರ್ಷಗಟ್ಟಲೆ ಗಾಯಾಳುಗಳು ಒದ್ದಾಡಬೇಕಾಗಿರುವ ಇಂದಿನ ಕಾಲದಲ್ಲಿ ಯಾವುದೇ ದಾಖಲೆಗಳು, ನೋಂದಣಿ ಸಂಖ್ಯೆಯೇ ಇಲ್ಲದ ಕಾರು ಅಪಘಾತವಾದರೆ ಗಾಯಾಳುವಿನ ಗತಿಯೇನು. ಎಂದು ಸಾರ್ವಜನಿಕರು ಅಭಿಪ್ರಾಯಿಸುತ್ತಿದ್ದಾರೆ.

No Comments

Leave A Comment