Log In
BREAKING NEWS >
ಮಾರ್ಚ್ 8ರ೦ದು ಮಹಾಶಿವರಾತ್ರೆ-ಎಲ್ಲಾ ಈಶ್ವರ ದೇವಸ್ಥಾನಗಳಲ್ಲಿ ಭಜನಾ ಸ೦ಕೀರ್ತನೆ ಜರಗಲಿದೆ.....

ಉಡುಪಿಯ ಹಿರಿಯ ಛಾಯಾಗ್ರಾಹಕ ಗೋವಿ೦ದ ಕಲ್ಮಾಡಿ ಹೃದಯಾಘಾತದಿ೦ದ ನಿಧನ

ಉಡುಪಿ:ಉಡುಪಿಯ ಹಿರಿಯ ಛಾಯಾಗ್ರಾಹಕರಾಗಿದ್ದ ಗೋವಿ೦ದ ಕಲ್ಮಾಡಿಯವರು ಇ೦ದು(ಶುಕ್ರವಾರ)ಹೃದಯಾಘಾತದಿ೦ದ ನಿಧನಹೊ೦ದಿದ್ದಾರೆ.

ಎ೦ದಿನ೦ತೆ ಮನೆಯಿ೦ದ ಹೊರಟ ಇವರು ಇ೦ದು ಶುಕ್ರವಾರವಾದ ಕಾರಣ ಉಡುಪಿಯ ಅ೦ಬಲಪಾಡಿ ಶ್ರೀಜನಾರ್ಧನ ಮಹಾಕಾಳಿ ದೇವಸ್ಥಾನಕ್ಕೆ ತೆರಳಿ ದೇವರ ದರ್ಶನವನ್ನು ಮಾಡಿ ರಿಕ್ಷಾದಲ್ಲಿ ತಮ್ಮ ಸ್ಟೋಡಿಯೋಗೆ ಬ೦ದು ರಿಕ್ಷಾದಿ೦ದ ಇಳಿದಾಗ ಎದೆನೋವು ಕಾಣಿಸಿಕೊ೦ಡಿತು.ತಕ್ಷಣವೇ ಇವರನ್ನು ಆಸ್ಪತ್ರೆಗೆ ಕೆರೆಕೊ೦ಡು ಹೋಗುವಷ್ಟರಲ್ಲಿ ಇವರು ಕೊನೆಯುಸಿರನ್ನು ಎಳೆದರು.

ಮೃತರು ಸುಮಾರು ೩೫ವರ್ಷಗಳ ಕಾಲದಿ೦ದಲೂ ಉತ್ತಮ ಛಾಯಾಗ್ರಾಹಕರಾಗಿ ಅಪಾರ ಜನಪ್ರಿಯರಾಗಿದ್ದರು.ಇವರ ನಿಧನಕ್ಕೆ ಉಡುಪಿ ಜಿಲ್ಲಾ ಸಮಸ್ತ ಛಾಯಾಗ್ರಾಹಕರು, ಕರಾವಳಿಕಿರಣ ಡಾಟ್ ಕಾ೦ ಸ೦ಸ್ಥೆಯು ತೀವ್ರ ಸ೦ತಾಪವನ್ನು ಸೂಚಿಸಿರುತ್ತಾರೆ.

No Comments

Leave A Comment