Log In
BREAKING NEWS >
...........ನಾಡಿನ ಸಮಸ್ತ ಜನತೆಗೆ,ನಮ್ಮ ಎಲ್ಲಾ ಜಾಹೀರಾತುದಾರರಿಗೆ,ಓದುಗರಿಗೆ,ಅಭಿಮಾನಿಗಳಿಗೆ "ಶ್ರೀರಾಮನವಮಿ"ಯ ಶುಭಾಶಯಗಳು.......

ಖ್ಯಾತ ರಂಗ ನಿರ್ದೇಶಕ ಗೋಪಾಲಕೃಷ್ಣ ನಾಯರಿ ನಿಧನ

ಮಂಗಳೂರು: ಕನ್ನಡ ರಂಗಭೂಮಿಯ ಹಿರಿಯ ರಂಗ ನಿರ್ದೇಶಕ ಗೋಪಾಲಕೃಷ್ಣ ನಾಯರಿ (68 ವರ್ಷ) ಅವರು ಶುಕ್ರವಾರ ಬೆಳಿಗ್ಗೆ ನಿಧನರಾಗಿದ್ದಾರೆ ಎಂದು ತಿಳಿದುಬಂದಿದೆ.

ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ನಾಯರಿ ಅವರನ್ನು ಮಂಗಳೂರು ನಗರದ ಮಂಗಳ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಆದರೆ ಇಂದು ಬೆಳಗ್ಗೆ ಅವರು ನಿಧನರಾಗಿದ್ದಾರೆ ಎಂದು ತಿಳಿದುಬಂದಿದೆ.

ಶ್ರೀಮತಿ. ಸುಲೋಚನ, ಮಗಳು ಉದಾತ್ತ ಹಾಗು ಮೊಮ್ಮಗಳು ಮತ್ತು ಅಳಿಯರನ್ನು, ಅಪಾರ ಶಷ್ಯವರ್ಗವನ್ನೂ ಅಗಲಿದ್ದಾರೆ. ಉಡುಪಿ ಜಿಲ್ಲೆಯ ಸಾಲಿಗ್ರಾಮದ ಕಾರ್ಕಡದಲ್ಲಿ ಅವರು ಅಂತಿಮ ಸಂಸ್ಕಾರ ನಡೆಯಲಿದೆ ಎಂದು ಅವರ ಕುಟುಂಬದ ಆಪ್ತ ಮೂಲಗಳು ತಿಳಿಸಿವೆ.

ನಾಯರಿ ಅವರು ಎನ್‌ಎಸ್‌ಡಿಯಲ್ಲಿ ತರಬೇತಿ ಪಡೆದು ಮರಳಿದ ಬಳಿಕ ನಾಗೇಶ್ ನಿರ್ದೇಶನದ ತಾಮ್ರಪತ್ರ ನಾಟಕದಲ್ಲಿ ಮುಖ್ಯಪಾತ್ರದಲ್ಲಿ ಅಭಿನಯಿಸಿದ್ದರು. ನಂತರ ಗಂಗಾಧರ ಸ್ವಾಮಿ ನಿರ್ದೇಶನದಲ್ಲಿ ಸಮುದಾಯದಲ್ಲಿ ಕೊಂದು ಕೂಗಿತ್ತು ನೋಡಾ ನಾಟಕದಲ್ಲಿ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದರು. ಬೆಂಗಳೂರು ಮತ್ತು ತುಮಕೂರಿನ ನಾಟಕ ಮನೆ ಜೊತೆಗೆ ಗಾಢ ಸಂಬಂಧ ಇಟ್ಟುಕೊಂಡಿದ್ದ ನಾಯರಿ, ಭಾಸ ನ ನಾಟಕಗಳಿಗೆ ಹೆಸರುವಾಸಿಯಾಗಿದ್ದರು.

ಬೆಂಗಳೂರಿನ‌ ಎನ್‌ಎಸ್‌ಡಿಗೆ ಕೆಲವು ಕಾರ್ಯಾಗಾರಗಳನ್ನು ಮತ್ತು ನಾಟಕಗಳನ್ನೂ ನಿರ್ದೇಶನ ಮಾಡಿದ್ದರು. ಬಹಳ ಗಂಭೀರ ಸ್ವಭಾವದ ನಾಯರಿ, ಕನ್ನಡ ರಂಗಭೂಮಿಯಲ್ಲಿ ವಿಭಿನ್ನವಾಗಿ ಗುರುತಿಸಿಕೊಂಡಿದ್ದ ಒಬ್ಬ ಶ್ರೇಷ್ಠ ವ್ಯಕ್ತಿತ್ವದ ರಂಗ ನಿರ್ದೇಶಕ, ನಟ.

ಕೆ.ರಾಘವೇಂದ್ರ ನಾಯರಿ ಅವರು ನಿಧನದ ಸುದ್ದಿ ತಿಳಿಸಿದ್ದು, ರಾಷ್ಟ್ರೀಯ ಪ್ರಸಿದ್ಧಿಯ ಪ್ರಯೋಗಶೀಲ ರಂಗ ನಿರ್ದೇಶಕ, ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತ, ಸದಾ ಹೊಸತನದ ತುಡಿತದ ಕನಸುಗಾರ ಗೋಪಾಲಕೃಷ್ಣ ನಾಯರಿ ಅವರು ಇಂದು ಅನಾರೋಗ್ಯದಿಂದ ನಿಧನರಾಗಿದ್ದಾರೆ ಎಂದು ಹೇಳಿದ್ದಾರೆ.

No Comments

Leave A Comment