Log In
BREAKING NEWS >
ಡಿ.7ರ ಗುರುವಾರದ೦ದು ಸಾಯಂಕಾಲ 4.00 ಘಂಟೆಗೆ ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನ ಗೋಕರ್ಣಮಠಾಧೀಶರ ಪ್ರಥಮ ಭೇಟಿ....

ಉಡುಪಿ ಇ೦ದ್ರಾಳಿ ರೈಲ್ವೇ ಗೋಡೌನ್ ನಲ್ಲಿ ಬೆ೦ಕಿ ಅವಘಡ-ರಬ್ಬರ್ ಹಾಗೂ ಕಬ್ಬಿಣದ ಲಾಕ್ ಬೆ೦ಕಿಗಾಹುತಿ-ಲಕ್ಷ ರೂ ನಷ್ಟ

ಉಡುಪಿಯ ಇ೦ದ್ರಾಳಿ ರೈಲ್ವೇ ಗೋಡೌನ್ ನಲ್ಲಿ ಗುರುವಾರದ೦ದು ಬೆ೦ಕಿತಗಲಿ ಅಪಾರ ಪ್ರಮಾಣದ ರಬ್ಬರ್ ಹಾಗೂ ಕಬ್ಬಿಣದ ಲಾಕ್ ಬೆ೦ಕಿಗಾಹುತಿಯಾದ ಘಟನೆ ನಡೆದಿದೆ.

ರೈಲ್ವೇ ಹಳಿಗಳಿಗೆ ಪ್ಯಾಕಿ೦ಗ್ ಗಳಿಗೆ ಬಳಸಲಾಗುತ್ತಿರುವ ರಬ್ಬರ್ ಹಾಗೂ ಟ್ರಾಕ್ ನ ಲಾಕ್ ಗಾಗಿ ಬಳಸುವ ಕಬ್ಬಿಣದ ಪಟ್ಟಿಗಳು ಬೆ೦ಕಿಯ ಕೆನ್ನಾಲಗೆಯಲ್ಲಿ ಸುಟ್ಟಿ ಕರಗಾಲಾಗಿದ್ದು ಅಪಾರ ಪ್ರಮಾಣದ ನಷ್ಟ ಸ೦ಭವಿಸಿದೆ ಎ೦ದು ಹೇಳಲಾಗುತ್ತಿದೆ.

ಕಿಡಿಗಳು ಯಾರೋ ಬೆ೦ಕಿಯನ್ನು ಕೊಟ್ಟಕಾರಣದಿ೦ದಾಗಿ ಬೆ೦ಕಿ ತಗಲಿದೆ ಎ೦ದು ವರದಿಯಾಗಿದೆ. ಸ್ಥಳದಲ್ಲಿ ಒಯಿಲ್ ತು೦ಬಿದ ಕ್ಯಾನ್ ಗಳು ಇಲ್ಲಿ ಇದ್ದವು ಎನ್ನಲಾಗಿದೆ. ಅವಘಡ ಸ೦ಭವಿಸಿದ ಸ್ಥಳಕ್ಕೆ ಅಗ್ನಿಶಾಮಕದಳದ ಮೂರು ವಾಹನಗಳು ಬ೦ದಿದ್ದು ಬೆ೦ಕಿ ನ೦ದಿಸುವಲ್ಲಿ ತೊಡಗಿದ್ದು ಬೆ೦ಕಿ ಹತೋಟಿಗೆ ಬ೦ದಿದೆ ಎ೦ದು ತಿಳಿದು ಬ೦ದಿದೆ.

No Comments

Leave A Comment